ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾವ ಸಂಭ್ರಮವಿದೇ ವಾರಿಜ ವದನೆ ಶ್ರೀವೇಣುಗೋಪಾಲ ಮನೆಗೆ ಬಂದಿಹನೇ ಪ ದೇವ ದೇವನು ನಿನ್ನ ಪೂಜೆಗೊಪ್ಪಿದನೇ ಯಾವ ವಾತ್ಸಲ್ಯವ ನಿನಗೆ ತೋರಿದನೇ ಅ.ಪ ಗಾನ ನೃತ್ಯಗಳಿಂದ ಒಲಿಸಿದೆಯೇನೇ ಜೇನು ಸಕ್ಕರೆ ಬೆಣ್ಣೆಗಳನಿತ್ತೆಯೇನೇ ಸಾನುರಾಗದಿ ಪೂಜೆ ಮಾಡಿದೆಯೇನೇ ನಾನೇನಗೈದರೆ ಅವನೊಲಿಯುವನೇ1 ಪರಿಮಳ ಗಂಧಕೆ ಮೈ ತೋರುವನೇ ಕೊರಳಿಗೆ ಹಾರವ ನೀಡಲೊಪ್ಪುವನೇ ಮುರಳಿಯ ಗಾನವನೊಲಿದು ಕೇಳುವನೇ ಪರಮಪುರುಷ ಬಾರೆಂದರೆ ಬಹನೇ 2 ಕರಗಳ ಮುಗಿದರೆ ಕರುಣಿಪನೇನೇ ಚರಣಕೆ ಮಣಿದರೆ ಒಲಿಯುವನೇನೇ ಪರಿಪರಿ ಹೊಗಳಲು ನಲಿಯುವನೇನೇ ವರದ ಮಾಂಗಿರಿರಂಗ ದಯೆ ತೋರನೇನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್