ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿಯಾರೊ ಅಂದಿಗಂದಿಗನ್ಯ - ಈ ಧರೆಯೊಳಿವರ ಮಹಿಮೆ ಘನ್ನ ಪ ಮರುತಾವೇಶಯುತ - ಉರಗಾಂಶರನ್ನ ಅ.ಪ ಪ್ರಲ್ಹಾದ ಲಕ್ಷ್ಮಣ ಬಾಹ್ಲೀಕÀ ವ್ಯಾಸನು ಇಲ್ಲೀಗ ರಾಘವೇಂದ್ರ ಉಲ್ಲಾಸ ಬಡುವನು 1 ಇನ್ನೂರ ನಾಲ್ವತ್ತು ಮುನ್ನೀಗ ಪೋದದ್ದು ನನ್ನುರ ಅರವತ್ತು ಇನ್ನು ಉಳಿದಿಹದು 2 ಎಲ್ಲೀ ನೋಡಲಿವರಿಲ್ಲದ ಸ್ಥಳವಿಲ್ಲ ಬಲ್ಲಾ ಭಕುತಗೆ - ಅಲ್ಲಲ್ಲೆ ತೋರುವದು 3 ಖುಲ್ಲ ನರರಿಗೆ - ಎಲ್ಲೆಲ್ಲಿ ಇಲ್ಲವೊ ಸಲ್ಲೋದು ನಿಶ್ಚಯ - ಸುಳ್ಳಲ್ಲ ಈ ಮಾತು 4 ದುಷ್ಟ ಜನರಿಗೆ ಇಷ್ಟಾರ್ಥ ಕೊಡುವೊನೊಮ್ಮೆ ಶಿಷ್ಟಾ ಜನರಿಗ ಭೀಷ್ಠಾವ ಕೊಡುವದು 5 ಇವರ ಪೂಜಿಪ ಜನ - ದಿವಿಜರು ನಿಶ್ಚಯ ಭುವನದೊಳಗೆ ಇನ್ನು ಇವರಿಗೆ ಸರಿಯುಂಟೆ 6 ಇವರನ ಒಲಿಸಲು ಪವನಾನು ಒಲಿವನು ಮಾಧವ ತಾನೆÀ ಒಲಿವÀನು 7 ಅಮಿತ ಮಹಿಮರೆಂದು ಪ್ರಮಿತರು ಪೇಳೋರು ಸುಮತಿಗಳ ಮನಕೆ ಗಮಿಸಿ ತಿಳಿಸುವದು 8 ದಾತಾ ಗುರು ಜಗನ್ನಾಥಾ ವಿಠಲ ಬಹು ಪ್ರೀತಿಯಿಂದಲಿ ಇವರ ಖ್ಯಾತಿಯ ಮಾಡೊದು 9
--------------
ಗುರುಜಗನ್ನಾಥದಾಸರು
ಉಗಾಭೋಗ ಭಕ್ತಿದಾಯಕ ಕೇಳೊ ನಿನ್ನನು ಒಲಿಸಲು ಶಕ್ತಿ ಎನಗೆ ಇಲ್ಲ ಸರ್ವೇಶ್ವರ ಭಕ್ತಿಪಾಶದಿ ನಿನ್ನನುಕ್ತಿಯಿಂದಲಿ ಬಿಗಿವೆ ಮುಕ್ತಿಗೊಡೆಯ ಹೃದಯ ಮಧ್ಯದಿ ಬಂಧಿಸುವೆ ಶಕ್ತಿ ನಿನಗಿಲ್ಲ ಬಿಡಿಸಿಕೊಳ್ಳಲು ಇನ್ನು ಯುಕ್ತಾಯುಕ್ತ ತಿಳಿಸಿ ಉದ್ಧರಿಸಬೇಕಿನ್ನು ಶಕ್ತನಿಲ್ಲವೊ ನಿನಗೆ ಸರಿ ಜಗದೊಳು ಮಹ ಸಿರಿ ಗೋಪಾಲಕೃಷ್ಣವಿಠ್ಠಲಾ
--------------
ಅಂಬಾಬಾಯಿ
ದಿನದಿನದೊಳು ಬಿಡದೊನಜಾಕ್ಷ ಪಾದ ಭಜಿಸಿ ನೀ ಸುಖಿಯಾಗೊ ಮನವೆ ಪ ನಂಬುಗೆ ಕಾರಣ ಅಂಬುಜಾಕ್ಷನ ಶ್ರೀಪಾ ದಾಂಬುಜ ಒಲಿಸಲು ಕುಂಭಿಣಿಯೊಳಗೆ ನಂಬಿ ಪ್ರಹ್ಲಾದ ಕರೆಯೆ ಕಂಬದಿಂ ಬಂದವನ ಬೆಂಬಿಡದಲೆ ಕಾಯ್ದನೆಂಬೋಕ್ತಿ ಕೇಳಿ ತಿಳಿದು 1 ದುರಿತದ ತವರಿದು ನರಕಕ್ಕೆ ಬೇರೆಲೊ ಮರವೆಸಂಸಾರ ಮಹಸರಸಿನಸರೋವರ ಸುರಸಿನೊಳ್ ಸಿಲ್ಕಲು ತಿರುಗರೆಂಬುವ ಹರಿಶರಣರ್ವಾಕ್ಯಗಳು ಸ್ಥಿರನಂಬೀ ಅರಿತು 2 ಕಿರಿಕಿರಿ ಸಂಸಾರ ಪರಿಪರಿಬಾಧಿಪ ಉರಿಕಿನ ತಿಂಡಿಯಿದು ನೆರೆನಂಬಬೇಡ ಜರಸುಖವಿಲ್ಲದ ಎರವಿನ ಕಾಯಕ್ಕೆ ಹಿರಿಹಿರಿ ಹಿಗ್ಗಿ ಕೆಡದಿರು ವಿವರಿಸಿನೋಡಿ 3 ಸತಿಸುತರಿವರೆಲ್ಲ ಅತಿಭಾಗ್ಯ ಇರುವನಕ ಸತತ ನಿನ್ನಯ ಸೇವೆ ಹಿತದಿಂ ಮಾಳ್ಪರು ಗತಿಸಿ ಪೋಗಲು ಭಾಗ್ಯ ಸತಿಸುತರೆ ನಿನ ಗತಿವೈರಿಗಳು ಕಾಣೊ ಮತಿಹೀನ ಮನಸೆ 4 ಇರುಳು ಹಲವು ಪಕ್ಷಿ ನೆರೆದುಂಡು ವೃಕ್ಷದಿ ತಿರುಗಿ ಉದಯದೊಳು ಹಾರಿಹೋಗ್ವ ತೆರದಿ ಸರುವ ಅಸ್ಥಿರವೆಂದು ಅರಿತು ವಿಚಾರಿಸಿ ಸ್ಥಿರಸುಖವನು ಪಡೆಯೊ ಶ್ರೀರಾಮನಡಿಗ್ಹೊಂದಿ 5
--------------
ರಾಮದಾಸರು
ನೋಡುವ ಬನ್ನಿ ಮುರಳೀಧರನ್ನ ಪ ಪಾಡುತ ಕುಣಿ ಕುಣಿದಾಡಿ ಕೊಂಡಾಡುತ ಅ.ಪ ಮನೆಕೆಲಸಗಳಿಗೆ ಕೊನೆ ಮೊದಲಿಲ್ಲವು ನೆನೆದರೆ ಬೇಸರ ಮನೆಗಳಂತಿರಲಿ 1 ಪತಿಗಳ ಸೇವೆ ಶ್ರೀಪತಿಯನೆ ಒಲಿಸಲು ಅತಿ ಸುಲಭದಲಿರೆ ಪತಿಗಳಂತರಲಿ 2 ಬಾಲೆಯರಾದರೆ ಲಾಲಿಸುವನು ಬಲು ಏಳಿರೇ ಎಮ್ಮಯ ಬಾಲರಂತಿರಲಿ 3 ಪರಪುರುಷನ ಕೂಡಿ ದುರಿತಗಳೆಲ್ಲವ ತೊರೆಯುತ ಮೈಗಳ ಮರೆಯುವ ಮುದದಿ 4 ಬಂಧುಗಳೆಂದೆಮ್ಮ ಬಂಧನ ಸಾಕಮ್ಮ ಚಂದದಿ ಪ್ರಸನ್ನ ನಂದಕುಮಾರನ 5
--------------
ವಿದ್ಯಾಪ್ರಸನ್ನತೀರ್ಥರು
ಬಲ್ಲನೆಂಬೊ ಮಮಕಾರ ಬಿಡು ಎಲ್ಲೆಲ್ಲಿ ಇರುವ ಶ್ರೀಹರಿಯ ನೋಡು ಒಲಿಸಿ ಒಲಿಸಲು ನಿಲುವುದು ಜಿತವಾಗಿ ಹಾಡು ಪ ನೋಡಿದ್ದನ್ನೆ ನೀ ನೋಡು | ನಿನ್ನೆ ನೋಡಿದೆನೆಂಬೊ ಖೋಡ್ಯಾಲಸ್ಯ ಬಿಡು ಹುಡುಕಿ ತತ್ವಂಗಳ ಸಮನಾಗಿ ಜೋಡು ನಡುವೆ ತತ್ಪತಿಯ ಒಡೆಯನ ಇಡು 1 ಕೇಳಿದ್ದನ್ನೇ ನೀ ಕೇಳು | ನಿನ್ನ ಆಳುವರ ಪಾದಕೆ ಬೀಳು ಹಳೆವ ವಾರ್ತಿಗೆ ಅಳುಕುವ ಮನ ಸೀಳು ಬಲು ಪರಿಯಲಿ ಕಾಮ ಕ್ರೋಧಂಗಳ ಹೂಳು 2 ಅಭಿವೃದ್ಧೀಗೆ ಬರುವುದು ಲೋಭ ನಿಭಾಯಿಸಲು ಅದು ಹೊರುವುದು ಲಾಭ ಸಭೆಯೊಳು ಪೇಳಬ್ಯಾಡ ಸ್ವಭಾವ ಇಭವರದನಾಗುವ ಅಭಾವ 3 ನರ ಜನ್ಮವೇ ಬರುವೊದು ಕಷ್ಟ ಹರಿ ಸರ್ವೋತ್ತಮೆಂಬೋದೆ ಇಷ್ಟ ಸ್ಥಿರವಲ್ಲ ತ್ವರಿತ ಮಾಡೆಲೊ ಭ್ರಷ್ಟ ಅರಿತವರ ಕೂಡೆ ನಿರತಾಡು ಶ್ರೇಷ್ಠ 4 ಅಂಕುರಾವು ಪುಟ್ಟಿಹದೀಗ ಬಿಂಕದಿಂ ಪರಿಪಾಲಿಸೊ ಬೇಗ ಶಂಕರನುತ ವಿಜಯ ರಾಮಚಂದ್ರವಿಠಲನ ಪದ- ಪಂಕಜಕೆ ಅಳಿಯಂತೆ ಸಾಗು 5
--------------
ವಿಜಯ ರಾಮಚಂದ್ರವಿಠಲ
ರುದ್ರದೇವರು ಶಿವನೆ ನಾ ನಿನ್ನ ಕರೆಯುವೆ ಬಾರೊ ಪ ಗಿರಿಜಾಮನೋಹರನೆ ಶಂಕರನೆ ಅ.ಪ. ನೀಲ ಹರಳಿನಂತ್ಹೊಳೆವುದು 1 ಬಾಲಮುನಿಯು ತನ್ನ ಕೇಳಿ ಮೃತಿಯನುನೀಲ ಲೋಹಿತಾ ನಿನ್ನ ಸೇವೆಯ ಮಾಡಿದನುಕಾಲನ ಜೈಸುತ ಬಹಳ ಆಯುಷ್ಯವಿತ್ತವ್ಯಾಳಚಲಾಂತಕ ಶ್ರೀಶೈಲದಿ ನಿಂತೆ 2 ಮಂದರುಗ್ಮಿಯು ತಪದಿಂದ ಒಲಿಸಲುಬಂದು ಶಾಪವ ನೀಡಿ ತಂದಿ ಕ್ಷಿತಿಯೊಳುಇಂದಿರೇಶನ ದ್ವೇಷ ಎಂದು ಮಾಡುವಿ ಶಾಪಅಂದೇ ಬರುವದು ಮಂದಿರಕೋ ಇತಿ 3
--------------
ಇಂದಿರೇಶರು
ಶ್ರೀ ನಾಮಕಲ್ ಹನುಮಂತ68ಹನುಮಂತನಪಾದವನಜಕೆ ಶರಣುಪಹನುಮಂತನಪಾದವನಜಕ್ಕೆ ಎರಗಲುಅನಿಷ್ಟಗಳಳಿದು ಇಷ್ಟಾರ್ಥಗಳೀವ ಅ ಪಇನಸುತಗೊಲಿದನು ಹನುಮ ಆದುದರಿಂದಇನಕುಲತಿಲಕನು ತಾನೂ ಪಾಲಿಸಿದ1ಅನಿಮಿಷರಲಿ ಇವ ಪ್ರಥಮನಾಗಿಹ - ಭಾವಿವನರುಹಾಸನ ಜಗತ್ ಪ್ರಾಣಜೀವೋತ್ತಮ2ನಾಮಗಿರೀಶ ಶ್ರೀ ಪ್ರಸನ್ನ ಶ್ರೀನಿವಾಸನ್ನನಮಗೆಲ್ಲ ಒಲಿಸಲು ನಾಮಶಿಲದಿ ನಿಂತ 3
--------------
ಪ್ರಸನ್ನ ಶ್ರೀನಿವಾಸದಾಸರು