ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಿದೇನಿದನ್ಯಾಯ ಕೇಳಲಾಗದಯ್ಯ ಧ್ಯಾನದಿಂದಾನೆಂಬ ಹೀನ ಜನರ್ವಚನ ಪ ಪರಮಪುರುಷರ ಚರಿತ ಪರಮ ಭಕ್ತಿಯಲಿಂದ ಬರೆದೋದಿಕೇಳಿದರೆ ಪರಮಪದವೆನುತ ವರವೇದ ಸ್ಮøತಿವಾಕ್ಯ ಅರಿದರಿದು ಸಚ್ಚರಿತ ಬರೀಬಾರದೆನ್ನುವ ನರಗುರಿಗಳ ವಚನ 1 ಕನಸುಮನಸಿನೊಳೊಮ್ಮೆ ಜನಕಜೆಯವರನಂಘ್ರಿ ನೆನೆವರ್ಗೆ ಭವಬಂಧವಿನಿತಿಲ್ಲವೆನುತ ಮನುಮುನಿಗಳ್ಬರೆದಿಟ್ಟ ಘನತರದ ವಚನಗಳನು ಮನನ ಮಾಡಳಿವ ಬಿನಗುಜನರ್ವಚನ 2 ಬೀಳುತೇಳುತಲೊಮ್ಮೆ ನೀಲಶ್ಯಾಮನ ದಿವ್ಯ ಮೇಲು ಮಹಿಮೆಯ ಮನದಾಲಿಸಲು ಜವನ ದಾಳಿ ಸೋಂಕದು ಎಂದು ಶೀಲದೊರೆದ್ವಚನಗಳ ಕೇಳಿ ತಿಳಿಯದ ಮಹ ಕೀಳುಜನರ್ವಚನ 3 ಹರಿನಾಮ ಕೀರ್ತನೆಯಿಂ ಜರಾಮರಣ ಕಂಟಕª À ಕಿರಿದು ಮಾಡಿ ದಾಟಿದರು ಗುರುಹಿರಿಯರೆಲ್ಲ ನಿರುತ ನಿಜ ತಿಳಿಯದೆ ಹರಿಸ್ಮರಣೆ ಸ್ಮರಿಸದೆ ಬರಿದೆ ಬ್ರಹ್ಮೆಂಬ ಮಹನರಕಿಗಳ ವಚನ 4 ಪರಮ ಶ್ರೀಗುರುರೂಪ ವರದ ಶ್ರೀರಾಮನಂ ನೆರೆನಂಬಿ ಒಲಿಸದೆ ಗುರುವಾಗಿ ಜಗದಿ ಅರಿವಿತ್ತು ಆತ್ಮನ ಕರುಹು ತೋರಿಸಿ ಪರಮ ಪರತರದ ಮೋಕ್ಷಮಂ ಕರುಣಿಸುಯೆಂತು 5
--------------
ರಾಮದಾಸರು
ದಂಭಕ-ಭಕುತಿಯ-ಮಾಡಬೇಡ ಬರಿ ಡಿಂಭವ ಪೋಷಿಸೆ-ಪಾಡಬೇಡ ಪ ಅಂಬುಜನಾಭವ ಬಿಡಬೇಡ ಒಣ ಜಂಭವ-ಮಾಡುತ-ಕೆಡಬೇಡ ಅ.ಪ. ಕಾಸಿಗೆ ದಾಸನು ಆಗಬೇಡ-ಹರಿದಾಸನು ಆದರೆ ಆಶೆಬೇಡ ದೊರಕದು ತಿಳಿಗಾಢ 1 ಕಂಡಕಂಡೆಡೆ ತಿರಿಬೇಡ-ಯಮದಂಡಕೆ ಬೆದರದೆ ನಡಿಬೇಡ ಕೆಣಕುತ ಕೆಡಬೇಡ 2 ಮುಂಬರೆ ತಿಳಿಮೂಢ ಪರ ಹೆಂಡಿರು ವಿತ್ತವ ನೋಡಬೇಡ 3 ತುಚ್ಛರ ಸೇವೆಯ ಮಾಡಬೇಡ ಮನಸ್ವಚ್ಛತೆ ಪೊಂದದೆ ಇರಬೇಡ ಕೆಚ್ಚೆದೆ ಕಷ್ಟದಿ ಬಿಡಬೇಡದೈವೇಚ್ಛೆಯೆ ಸಕಲಕು ಮರಿಬೇq4 ಆತ್ಮಸ್ತುತಿಯನು ಮಾಡಬೇಡ ಪರಮಾತ್ಮನ ಗುಣಗಳ ಕದಿಬೇಡ ಗಾತ್ರವು ಅಸ್ಥಿರ-ತಿಳಿ-ಬೇಗ-ಜೀವೋತ್ತಮ ನಂಘ್ರಿಯ ಬಿಡಬೇಡ 5 ತಿಳಿಯದೆ ಇರಬೇಡ ಮನವನು ಸೋಲಬೇಡ 6 ಸ್ನೇಹವ ಮಾಡಬೇಡ ಭವ ಕಾಡಿಗೆ ಕಿಚ್ಚಿದು ಸರಿ ಪ್ರೌಢ 7 ನೆಂಟಗೆ ಸಾಲವ ಕೊಡಬೇಡ ಅದು ಗಂಟಿಗೆ ಮೊಸವೆ ತಿಳಿಬೇಗ ಒಂಟಿಲಿ ಊಟವ ಮಾಡಬೇಡ ವೈಕುಂಠಕೆ ಸಾಧನೆ ಬಿಡಬೇಡ 8 ದಾರಿಯು ಮರಿಬೇಡ ಒಲಿಸದೆ ಬಿಡಬೇಡ 9 ಚಿಂತನೆ ತಿಳಿಬೇಗ ಕಡು ಆಲಸ್ಯವ ಮಾಡಬೇಡ ಸಿರಿಬಿಡುವಳು ಆತನ ತಿಳಿಬೇಗ10 ಮಾಧವ ನೊಲಿಮೆಗೆ ಹೆದ್ದಾರಿ ಶೀಘ್ರದಿಪೊಗಾಡು 11 ಸತ್ಯವ ಧರ್ಮವ ಬಿಡಬೇಡ ಈ ಉಕ್ತಿಗಳಾಚೆಗೆ ಹಾಕಬೇಡ ಸತ್ಯವ ಪಠಿಸದೆ ಬಿಡಬೇಡ-ಶ್ರೀ ಸತ್ಯನ ಮತವನು ಪಿಡಿಬೇಗ12 ನಿಜಸುಖ ತಿಳಿಬೇಗ ನಿಷ್ಠಿಯ ಗುರುವಡಿ ಬಿಡಬೇಡ “ಶ್ರೀ ಕೃಷ್ಣವಿಠಲ”ನ ತೊರಿಬೇಡ13
--------------
ಕೃಷ್ಣವಿಠಲದಾಸರು
ಭವ ಸಂಕಟ ಪರಿಹರಿಸೊ ಕಿಂಕರನೆಂದೆನಿಸೊ ಪ ಶಂಕೆಯಿಲ್ಲದೆ ಪಾದಪಂಕಜ ಪೂಜಿಸಲೂಮಂಕುಮತಿಯ ಕಳೆವಾ ಅಕಳಂಕನೆಂದೆನಿಸುವಾ ಅ.ಪ. ಕಲಿಯುಗದೊಳು ಕಲಿ ಬಾಧೆಗೆ ಒಳಗಾಗಿ ಬಹುವಿಧವಾಗಿಒಲಿಸದೆ ವರಗುರು ಹಿರಿಯರ ನಿಂದಿಸುತಾ ವೇಳೆಗಳೆಯುತಾಗಳಿಸಿದೆ ಪಾಪವ ಚರಿಸುತ ಧರೆಯೊಳಗೆ ತೊಳಲುವೆ ತಮದೊಳಗೇಘಳಿಲನೆ ರಕ್ಷಿಸೊ ಬಾಲಕರನು ದೇವಾ ಎನ್ನಯ ಕುಲದೈವಾ 1 ಸಾಧನೆಗೋಸುಗ ಮೇದಿನಿಗೆ ಬಂದು ಸಾಧಿಸದೆ ಬಂದುಶೋಧಿಸುವೆನು ಪುರುಷಾರ್ಥದ ಮಾರ್ಗವನು ಮೋದವ ಪೊಂದುವೆನುಭೇದವ ತಿಳಿಯದೆ ಹಾದಿಯ ತಪ್ಪಿರುವೆ ಖೇದವ ಪುಡುತಿರುವೆಸಾದರದಲಿ ತವ ಪಾದದಿ ಧ್ಯಾನವನು ಒದಗಿಸಬೇಕಿನ್ನು 2 ಮಂದ ತಾಪ ಬಿಡಿಸೊ ಕರುಣವ ತೋರಿಸೊಆರು ಮೂರು ವಿಧ ಭಕ್ತಿಯನೆ ಈಯೋ ಕರಪಿಡಿದು ಕಾಯೋಸಾರುವ ಭಕುತರ ಧೀರ ವೃಂದದೊಳಗೆ ಸೇರಿಸೊ ಜವದೊಳಗೆಧಾರುಣೀಶ ತಂದೆವರದವಿಠಲನೆ ಶರಣೆಂಬೆನು ನಾನೇ 3
--------------
ಸಿರಿಗುರುತಂದೆವರದವಿಠಲರು
ಸುರೇಶ ಪದವಿಯ ಬೇಡುವನಲ್ಲ ನರೇಶ ಭಾಗ್ಯವ ಕೋರುವನಲ್ಲ ಪ ಗುರೂಪದೇಶವ ಮರೆಯುವನಲ್ಲ ಪರೇಶ ಸ್ಮರಣೆಯ ಬಿಡುವವನಲ್ಲ ಅ.ಪ ಜನನ ಮರಣಕೇ ಹೆದರುವನಲ್ಲ ಜನುಮಗಳು ಬೇಡ ಎನ್ನುವನಲ್ಲ ಮನದಿ ವ್ಯಾಮೋಹವ ಪಡೆಯುವನಲ್ಲ ವನಜನಾಭನ ನಾಮ ಮರೆಯುವನಲ್ಲ1 ನಿನ್ನ ಚರಿತಗಳ ಕೇಳದೆ ಬಿಡೆನು ನಿನ್ನ ಮೂರ್ತಿಯ ನೋಡದೆ ಬಿಡೆನು ನಿನ್ನ ಪಾದಾರ್ಚನೆ ಮಾಡದೆ ಬಿಡೆನು [ನಿನ್ನ ನಾಮಂಗಳ ನುತಿಸದೆ ಬಿಡೆನು] 2 ಮಾಂಗಿರಿಪತಿ ನಿನ್ನ ಒಲಿಸದೆ ಬಿಡೆನು ಕಂಗಳಿಂದಾನಂದ ಪಡೆಯದೆ ಬಿಡೆನು ಅಂಗಾಂಗದ ಸೇವೆ ಮಾಡದೆ ಬಿಡೆನು ರಂಗ ಸಮರ್ಪಣ ಎನ್ನದೆ ಬಿಡೆನು 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್