ತಪ್ಪಲಿಲ್ಲ ನೀನು ಬಂದೂ
ತಪ್ಪಲಿಲ್ಲ ನಿನಗೆ ನೈವಿದ್ಯವಿಡಲಿಕ್ಕೆ ತಪ್ಪಲಿಲ್ಲ ಪ
ತಪ್ಪದೆ ನೀನಿತ್ತುದನ್ನೆ ಒಪ್ಪಿಸುವೆನು 1
ಹೊಳೆಯ ನೀರು ಹೊಳೆಗರ್ಪಿಸವಂದದಿ
ಒಲಿದೆನಗಿತ್ತುದೆ ಸಲಿಸುವೆ ನಿನಗೆ 2
ಅಣುರೇಣು ತೃಣಕಾಷ್ಠ ವ್ಯಾಪ್ತನು ನೀನು
ನಿನಗಲ್ಲದರಿಯೆ ಅನ್ಯರಿಗುಂಟೆ ಅರ್ಪಣ3
ನೀನಿತ್ತುದಲ್ಲೆ ಶ್ರೀಹರಿ ಹಣ ಹೊನ್ನು
ಏನೆನ್ನ ಗೌರವ ನಿನ್ನದು ನಿನಗೆ 4
ಅಲ್ಪವರ್ಪಿಸೆ ನೀನಲ್ಪನೀವಿ[?]
ಕಲ್ಪತರುವಿನೊಲು ನರಸಿಂಹವಿಠ್ಠಲಾ 5