ಏನುಂಟೇನಿಲ್ಲ ಗುರುಕೃಪೆಯಿಂದ
ತನುಮನಿಟ್ಟದೇ ಪಡಕೊಂಬುದು ಚಂದ ಧ್ರುವ
ಸುಖ ಸುರುತದೆ ನೋಡಿ ಬಲುಬ್ರಹ್ಮಾನಂದ
ಪ್ರಕಟಸಲಿಕ್ಕೆ ಬಾರದು ಮುಖದಿಂದ
ಸಕಲವೆಲ್ಲಕೆ ಮೇಲು ತಿಳಿಯಬೇಕಿದೊಂದೆ
ಶುಕಾದಿ ಮುನಿಗಳದಾರಿದರಿಂದೆ 1
ಸಿದ್ಧ ಬುದ್ಧ್ದರಿಗೆ ಸಾದ್ಯವದೆ ಸಿದ್ಧ ನೋಡಿ
ಬುದ್ಧಿವಂತರಿಗೆ ಒಲಿದುಬಾಹುದು ಕೈಗೂಡಿ
ಸನ್ಮಾರ್ಗ ಸುಪಥವಿದೆ ಸದ್ಗುರು ಸೇವೆಮಾಡಿ
ಸದ್ಭ್ಬಾವದಿಂದಲಿ ಸ್ವಸುಖವೆ ಸೂರ್ಯಾಡಿ 2
ಭಾಸ್ಕರ ಗುರುದಯದವಗಿನ್ನೇನು
ಭಾಸುತೀಹ್ಯದಾವಗಿನ್ನು ನಿಜಕಾಮಧೇನು
ವಿಶ್ವದೊಳಗವನೊಬ್ಬ ಸಿದ್ಧತಾನು
ದಾಸಮಹಿಪತಿಗಿದೇ ಅಭಿನವಧೇನು 3