ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೃಂದಾವನೀ ದೇವಿ ವಂದಿಸುವೆ ಶ್ರೀ ತುಳಸಿ ವಂದಾರು ಜನತತಿಗೆ ಮಂದಾರಳೆನಿಸಿರುವಿ ಸಂದೇಹವಿಲ್ಲವಿದಕೆ 1 ಅಂದು ಧನ್ವಂತರಿಯು ತಂದಿರುವ ಪೀಯೂಷ ದಿಂದ ಪೂರಿತ ಕಲಶದಿ ಇಂದಿರಾಪತಿಯ ಆನಂದ ಬಾಷ್ಪೋದಕದ ಬಿಂದು ಬೀಳಲು ಜನಿಸಿದಿ2 ಶ್ರೀ ತುಳಸಿ ನಿನ್ನನು ನಿಕೇತನದಿ ಪೂಜಿಪರ ಪಾತಕವ ಪರಿಹರಿಸುವಿ ಶ್ರೀ ತರುಣಿಪತಿಗೆ ಬಲುಪ್ರೀತಿ ವಿಷಯಳೆನಿನ್ನ ನಾ ಸ್ತುತಿಸಲೆಂತು ಜನನಿ 3 ಸರ್ವ ತೀರ್ಥಗಳೆಲ್ಲ ತರುಮೂಲದಲ್ಲಿಹವು ಸರ್ವ ವಿಬುಧರು ಮಧ್ಯದಿ ಸರ್ವ ವೇದಗಳೆಲ್ಲ ತರುಅಗ್ರಭಾಗದಲಿ ಇರುತಿಹರು ಬಿಡದೆ ನಿರುತ 4 ತುಳಸಿ ನಿಮ್ಮಯ ಲಕ್ಷದಳಗಳಿಂದಲಿ ಲಕ್ಷ್ಮಿನಿಲಯನಂಘ್ರಿಗಳರ್ಚಿಸಿ ಕಲುಷ ವರ್ಜಿತನಾಗಿ ಬಲುಬೇಗ ಶ್ರೀಹರಿಯ ಒಲುಮೆ ಪಡೆವನು ಜಗದೊಳು 5 ತುಳಸಿ ದೇವಿಯೆ ನಿನಗೆ ಜಲವೆರೆದು ಕುಂಕುಮದ ತಿಲಕವಿಡುತಲಿ ನಿತ್ಯದಿ ಲಲನೆಯರು ಪೂಜಿಸಲು ಒಲಿದಿತ್ತು ಸೌಭಾಗ್ಯ ಸಲಹುವಿಯೆ ಕರುಣದಿಂದ 6 ಮಾಧವ ಪ್ರಿಯ ತುಳಸಿ ಸಾದರದಿ ನಿನ್ನೊಳಗೆ ಶ್ರೀದೇವಿ ನಿಂದಿರುವಳು ಮೋದಮುನಿ ಶಾಸ್ತ್ರವನು ಬೋಧಿಸುವ ಬುಧಜನರ ಪಾದಸೇವೆಯ ಕರುಣಿಸು 7 ಮಿತ್ರನುದಯದಲೆದ್ದು ಚಿತ್ತನಿರ್ಮಲರಾಗಿ ಭಕ್ತಿಯಲಿ ಶ್ರೀ ತುಳಸಿಯ ಮೃತ್ತಿಕೆಯ ಧರಿಸಿದ ಮಹಾತ್ಮರನು ಕಂಡು ಯಮ ಭೃತ್ಯರಂಜುವರು ಭಯದಿ 8 ಇಂತು ಶ್ರೀತುಳಸಿ ಸೀಮಂತಿನಿಯ ಸ್ತೋತ್ರವ ನಿ- ರಂತರದಿ ಪಠಿಸುವವರ ಚಿಂತಿತ ಪ್ರದನಾಗಿ ನಿಂತು ಕಾರ್ಪರದಿ ಸಿರಿ ಕಾಂತ ನರಹರಿ ಪೊರೆವನು 9
--------------
ಕಾರ್ಪರ ನರಹರಿದಾಸರು
ಸುಳಾದಿ ರಾಗ :ಸಾರಂಗ ಧ್ರುವತಾಳ ಬಿನ್ನಪವ ಮಾಡುವೆ ಯಜ್ಞ ಶ್ರೀನಿವಾಸ ನಿನ್ನ ಶರಣಗೆ ಹಲವು ಹಂಬಲ ಸಲ್ಲ ಇನ್ನು ತಾನೊಮೊಮ್ಮೆ ಬಯಸಿದೇ ಭಕುತಿಗೆ ಅನ್ಯಥಾವಾಗದಂತೆ ಬಯಸಿಕೊಳಲಿ ಮನ ಚಿನ್ನರ್ಗೆ ಫಲವಿತ್ತೆ ಓದು ಪೇಳುವ ತೆರ ಚನ್ನಾಗಿ ನೀನೆವೇ ಫಲವನ್ನು ಒಲಿದಿತ್ತ ವಾಕು ಆದರಿಸೊ ವಾಸುದೇವವಿಠಲ 1 ಮಟ್ಟತಾಳ ತೋಂಡರ ಮಾತುಗಳ ಪುಸಿಗೊಳಿಸಲಿ ಬೇಡ ದಿಂಡೇರ ಕೈಯಿಂದ ನೋಯಗೊಳಿಸದಿರೊ ಅಂಡಜವಾಹನ ಬಿರುದು ನಿನ್ನದು ನೋಡು ಕೊಂಡಾಡುವೆ ವಾಸುದೇವವಿಠಲರೇಯ ತೋಂಡರ ಮಾತುಗಳ ಪುಸಿಗೊಳಿಸಲಿ ಬೇಡ 2 ತ್ರಿವಿಡಿ ತಾಳ ಆವಾವ ಆಶ್ರಮವನ್ನು ಒಲಿದಿತ್ತು ನೀನೇವೆ ಆವಾವ ಬಗೆಯಲ್ಲಿ ಸಾಧನ ಮಾಡಿಸೊ ಆವಾವ ಬಗೆಯಲ್ಲಿ ಬಲ್ಲ ಸರ್ವಜ್ಞನೆ ಆವಾವ ವಿಧದಿಂದ ಬಿನ್ನೈಪುದೇನೆಲೊ ಕಾವ ಕರುಣಿ ವಾಸುದೇವವಿಠಲರೇಯಾ ಆವಾವ ಬಗೆಗಳ ಬಿನ್ನೈಪುದೇನಯ್ಯಾ 3 ಅಟ್ಟತಾಳ ಕೊಡಗೈಯ್ಯ ದೊರೆ ಎಂದು ನಂಬಿಲ್ಲಿಗೆ ಬಂದ ಬಡನಡವಳ ನೀನು ಕಡೆಗೆ ನೋಡುವರೇನೊ ತೊಡರುಗಳಿದ್ದರು ಬಿಡಿಸುವ ಬಗೆ ಬಲ್ಲ್ಯೋ ತಡೆಕೊಡುವ ದೋಷ ಒಡೆಯ ನಿನ್ನೆದುರಿಗೆ ಅಡರಿ ನಿಲ್ಲುವದುಂಟೆ ಆವಾವ ಕಾಲಕ್ಕೆ ಪೊಡವಿಯ ತಳದಲ್ಲಿ ಪುಟ್ಟಿ ಸಾಧನಗಳು ಪಡಿಯಲಿಬೇಕೆಂಬ ಭಕುತ ಜನರುಗಳು ಕಡಿಮೇನೊ ಅವರೊಶ ಮಾಡಿಸೊ ಭಕ್ತರ ಬಿಡಿಯ ಬಿರುದಿನ ವಾಸುದೇವವಿಟ್ಠಲ 4 ಆದಿತಾಳ ಒಂದೊಂದು ಕೊಡಲು ಮತ್ತೊಂದು ಕೊಡಲಿ ಎಂದು ಸಂದಣಿಸುತಲಿವೆ ವಿಷಯಗಳೊಂದು ತಂದೆ ತಡಮಾಡಬೇಡವೊ ಅದರಿಂದ ಒಂದೆ ಸಾಧನ ಬಹಳಾಗುವದೊ ಇಂದಿರೇಶ ಬಯಸಿದೆ ನಿನ್ನಲ್ಲಿ ಬಂದು ಒದಗಿಸೊ ವಾಸುದೇವವಿಠಲ 5 ಜತೆ ಕರುಣಾಳು ಸ್ವಾತಂತ್ರ ವಾಸುದೇವವಿಠಲ ಸರ್ವಜ್ಞ ನಿನಗೆ ಮೊರೆ ಇಡೊದಿದೆ ಚಿತ್ರ 6
--------------
ವ್ಯಾಸತತ್ವಜ್ಞದಾಸರು