ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಟ್ಟಿದಳು ಕಂಕಣವ ನಾರಿ ಲಕುಮಿವಿಷ್ಣು ಮೂರುತಿ ಕರಕೆ ವೈಕುಂಠರಾಣಿ ಪ.ಅವಿಯೋಗಿಯಾದ ಶ್ರೀ ಸತಿಯ ಸೇವೆಗೆ ಒಲಿದುಪವಮಾನನೊಡೆಯ ವರ ಬೇಡೆನ್ನಲುಭುವನೇಶ ನಿನ್ನ ಕೃಪೆ ಪೂರ್ಣಳಾನೆಂದೆನುತಹವಣೆಯಿಂ ಕೇಳ್ದಳೆರಡೊರವ ಲೋಕೋದ್ಧಾರಿ 1 ಶರಣಾಗತ ರಕ್ಷಕನು ಎಂಬ ಬಿರುದೊಂದುಶರಣಾಗತ ವತ್ಸಲನು ಎಂಬುದೊಂದುಧರಿಸು ಈ ಬಿರುದು ಹರಿ ವರವು ಅದೆ ಎನಗೆನಲುಕಿರುನಗೆಯ ನಗುತ ಒಲಿದನು ಸತಿಯ ನುಡಿಗೆ 2 ನಾರಿರನ್ನಳೆ ನಿನ್ನ ಕೋರಿಕೆಯ ತೆರನಂತೆಆರಾಧನೆಯ ಮಾಳ್ಪ ಶರಣರಿಗೆ ಒಲಿವೆತೋರಲೀ ಬಿರುದುಗಳು ನಿನ್ನ ಕರಗಳಲೆಂದುಶ್ರೀ ರಮೆಯ ಕರಕೆ ಕಂಕಣಗಳನೆ ತೊಡಿಸಿದನು 3 ನಾರಿ ಈ ಕಂಕಣವ ನಿನಗ್ಯಾಕೆ ಅರ್ಪಿಸಲುತೋರದೆನ್ನುತ ನಟನೆಗೈವನಿತರೊಳ್‍ಕ್ಷೀರಸಾಗರ ಮಥನ ಕಾಲದಲಿ ಜನಿಸುತಲಿಶ್ರೀ ರಮೇಶಗೆ ಒಲಿದು ಮಾಲೆ ಹಾಕಿದಳು 4 ಭಕ್ತಿ ಪ್ರೇಮಕೆ ಒಲಿದು ಭಕ್ತವತ್ಸಲ ಅಭಯಹಸ್ತವನು ಶಿರದಲ್ಲಿ ಇಡಲು ನಾರಿಚಿತ್ತದಲಿ ಆನಂದಪುಳಕಾಂಕುರಿತಳಾಗಿಚಿತ್ತದೊಲ್ಲಭನ ಮುಖಕಮಲ ವೀಕ್ಷಿಸುತ 5ಈಕ್ಷಿಸಲು ಶ್ರೀ ಹರಿಯ ಕರಕಮಲ ಲಕ್ಷಣವಲಕ್ಷ್ಮಿ ಬೆರಗಾಗಿ ಮುನ್ನಿನಕಿಂತ ಅಧಿಕಅಕ್ಷಯದ ಸಾಮುದ್ರಿ ಲಕ್ಷಣವ ಕಾಣುತಲಿಪಕ್ಷಿವಾಹನನ ಮೊಗ ಈಕ್ಷಿಸುತ ನಗುತ 6 ನೀನಿತ್ತ ವರದಾನ ಕಂಕಣದ ಬಂಧನವನಿನಗರ್ಪಿಸುತ ಧನ್ಯಳಾಗ್ವೆನೆಂದುಆನಂದದಲಿ ಮಾಡಿ ಕಂಕಣವ ಕಟ್ಟಿದಳು 7 ಜಗವನಾಡಿಸುವಂಥ ಸೂತ್ರವನೆ ಹದಿನಾರುಬಗೆ ಕಲೆಗಳೆಂಬ ಎಳೆ ಮಾಡಿ ಹಳದಿಮಿಗೆ ಕಾಂತಿ ಬಣ್ಣದಲಿ ಮಂಗಳಾಕಾರದಜಗಕೆ ವಿೂರಿಸಿದಂಥ ಕಂಕಣವ ಕಟ್ಟಿದಳು 8 ಕರಿ ಕೆಂಪು ಬಿಳುಪು ವರ್ಣವು ಪ್ರಳಯ ಕಾಲದಲಿಇರಲಾರದೆಂದು ತ್ಯಜಿಸುತ ಹಳದಿಯವರಕಾಂತಿ ಬಣ್ಣವನು ಪೂಸಿ ಮಂಗಳವದನೆಸರದಿಂ ಮೂರು ಗ್ರಂಥಿಯ ಬಿಗಿದಳಾಗ 9 ಪರಿ ಏನು ಪೇಳೆಂದು ಸರಸದಲಿ ಹರಿ ಕೇಳೆ ಹರಿಣಾಕ್ಷಿಯು ಪರಮ ಪುರುಷನೆ ನೀನು ಅರಿಯದಿನ್ನುಂಟೆ ಕೇಳ್ ಸರಸವಾಣಿಯಲಿ ಪೇಳ್ಪೆನು ದೇವ ದೇವ 10 ಒಂದು ಮುಕ್ತಿಯ ಗ್ರಂಥಿ ಒಂದು ಕರ್ಮದ ಗ್ರಂಥಿ ಒಂದು ಅಜ್ಞಾನ ನಿನ್ನ ಬಂಧಕರ ಗ್ರಂಥಿ ಇಂದಿರೇಶನೆ ಇದರ ಗುಟ್ಟು ಅರುಹುವÉ ಕೇಳು ಒಂದೊಂದು ವಿವರಗಳ ವಂದ್ಯ ಬ್ರಹ್ಮಾದಿ 11 ಕರ್ಮಗ್ರಂಥಿಯು ಬ್ರಾಹ್ಮಣರ ಯಜ್ಞದುಪವೀತ ಕರ್ಮ ಬಿಡುಗಡೆ ಇದು ಯತಿರತ್ನಗಳಿಗೆ ನಿಮ್ಮ ಬಂಧಕರ ಗ್ರಂಥಿ ಅಜ್ಞಾನಿ ಹೃದಯಕ್ಕೆ ನಿಮ್ಮ ಕೃಪೆಯಿಂದ ಬಿಡುಗಡೆ ಕೇಳು ಜೀವರಿಗೆ 12 ಮುಕ್ತರಿಗೆ ಸಂಸಾರ ಮತ್ತೆ ಬರದಂದದಲಿ ಕತ್ತರಿಸಿ ಲಿಂಗವನು ಕಾಯ್ದು ನಾನು ಚಿತ್ತಜಾಪಿತನೆ ನಿನ್ನಸ್ತಕೊಪ್ಪಿಸಿ ಬಿಗಿದು ಸುತ್ತಿ ಕಗ್ಗಂಟು ಹಾಕಿರುವೆ ನೀ ಗ್ರಂಥಿ 13 ಬಿಚ್ಚಲಾರೆಯೊ ನೀನು ಬಿಚ್ಚಲಾರೆನೊ ನಾನು ಬಿಚ್ಚಿಕೊಳಲಾರರೊ ಮುಕ್ತ ಜನರು ಅಚ್ಯುತನೆ ಇದೆ ನಿನಗೆ ಹೆಚ್ಚಿನಾ ಬಿರುದು ನಾ ಮೆಚ್ಚಿ ಕಟ್ಟಿರುವೆ ನೀ ಗ್ರಂಥಿ ಕಂಕಣವ 14 ಎರಡು ಗ್ರಂಥಿಯ ತೊಡಕು ಹರಿದು ಭಕ್ತರ ಕಾಯ್ದು ಪರಮ ಆನಂದ ಮುಕ್ತರಿಗೆ ಶರೆ ಮಾಡಿ ಮೆರೆಯೊ ಶರಣಾಗತರ ರಕ್ಷಕನೆ ಎಂದೆನುತ ಸಿರಿ ಮುತ್ತಿನಾರತಿಯನೆತ್ತಿದಳು 15 ಸಿರಿಹರಿಯ ಏಕಾಂತ ಸರಸ ವಚನಗಳಿದನು ಅರಿತವರು ಯಾರೆಂಬ ಅನುಮಾನ ಬೇಡಿ ಹರಿಶಯನನಾದವನು ಅರಿತು ಧೈರ್ಯದಿ ಜಗದಿ ಹರಹಿದುದ ಸಜ್ಜನರು ಅರಿತು ಆನಂದಿಸಲಿ 16 ಸಿರಿ ಒಲಿಯೆ ಶ್ರೀಹರಿಯು ತ್ವರಿತದಲಿ ಒಲಿಯುವನು ಮರುತ ಒಲಿಯಲು ಸಿರಿಯು ತಾ ಒಲಿವಳು ಗುರುವು ಒಲಿಯಲು ಮರುತ ಮರುಕ್ಷಣದಿ ಒಲಿಯುವನು ಅರಿವುದಿದರಿಂ ಗುರುವ ಒಲಿಮೆ ಅಧಿಕೆಂದು 17 ಪರಮ ಸುಜ್ಞಾನದಿಂದರಿತು ತತ್ವಾರ್ಥಗಳ ಶರಣ ನಾ ನಿನಗೆನಲು ವಾತ್ಸಲ್ಯದಿ ಸಿರಿಯರಸ ತನ್ನಭಯ ಹಸ್ತ ಶಿರದಲಿಟ್ಟು ಶರಣರನು ಪಾಲಿಸುವ ಮುಕ್ತಿ ಪದವಿಯನಿತ್ತು 18 ಹರಿಸಿರಿಯ ಲೀಲೆಗಳ ಗುರುಕರುಣ ಬಲದಿಂದ ಅರುಹಿದ ಮಹಿಮೆ ಧರೆಯಲ್ಲಿ ಮೆರೆದು ಪರಮ ಮಂಗಳ ಕೊಡಲಿ ನಿರುತ ಸದ್ಭಕ್ತರಿಗೆ ಕರುಣಾಳು ಗೋಪಾಲಕೃಷ್ಣವಿಠ್ಠಲನ ದಯದಿ 19
--------------
ಅಂಬಾಬಾಯಿ
ಸಾರಸ ನಯನ ಶ್ರೀರಾಮಚಂದ್ರನ ಚರಿತೆ ಸಾರ ಹೃದಯ ಶ್ರೀ ಪ ಭವ ಮುಖರರ ಮೊರೆಯ ಕೇಳಿ ಧಾರುಣಿಯೊಳಗವತಾರ ಮಾಡಿದನಮ್ಮಾ ಅ.ಪ. ದಶರಥ ಸುತನೆನಿಸಿ ವಸುಧೆಯೊಳವತರಿಸಿ ಕುಶಿಕಸುತನ ಯಜ್ಞವ ನೆರೆಪಾಲಿಸಿ ಅಶಮವಾಗಿದ್ದ ಅಹಲ್ಯೆಯ ಶಾಪ ಪರಿಹರಿಸಿ ವಸುಧೀಶ ಜನಕನಾಸ್ಥಾನ ಪ್ರವೇಶಿಸಿ ಪಶುಪತಿಯ ಕೋದಂಡ ಖಂಡಿಸಿ ಶಶಿವದನೆ ಜಾನಕಿಯನೊಲಿಸಿ ಅಸಮ ಭಾರ್ಗವನೊಡನೆ ಸರಸವ ನೆಸಗಿ ಜಗದೊಳು ಲೀಲೆ ತೋರಿದ 1 ಜನಕನಾಜ್ಞೆಯ ತಾಳಿ ಜನಕ ಸುತೆಯ ಸಹಿತ ಅನುಜನೊಡನೆ ಹೊರಟು ವನವಾಸಕೆ ಘನಭಕ್ತಿ ಭರಿತ ಶ್ರೀ ಭರತಗೆ ಪಾದುಕೆ ನೀನು ಕರುಣಿಸಿ ಮುಂದೆ ವನದಂಡಕವ ಪೊಕ್ಕು ದುರುಳ ವಿರಾಧಮುಖರನು ಹನನಗೈದಾ ಬಳಿಕ ಶರಭಂಗ ಮುನಿಗೆ ಸದ್ಗತಿಯಿತ್ತಗಸ್ತ್ಯನ ವಿನುತ ಅಸ್ತ್ರಗಳನು ಪಡೆದನಾ 2 ಪಂಚವಟಿಯೊಳಗೆ ಸಂಚುಗೈಯುತ ಬಂದ ಕಾಂಚನಮೃಗವನು ಪಂಚಕಗೊಳಿಸಿ ಕುಂಚಿತ ಮತಿಯ ದ್ವಿಪಂಚಶಿರನು ಬರಲು ವಂಚನೆಯಿಂದಪರಿಹರಿಸಲು ಸೀತೆಯ ಸಂಚುಕಾಣದೆ ವನವನದೊಳು ಸಂಚರಿಸುತಲಿ ಶೋಕ ತೋರುತ ಪಂಚಶರಹತನಂತೆ ಬಳಲುತ ಪಂಚಶರ ಪಿತ ಬಂದ ಪಂಪೆಗೆ 3 ಮಾರುತಸುತನ ವಿನಯಭರಿತ ವಾಕ್ಯಕೆ ಮೆಚ್ಚಿ ತರಣಿಸುತನ ಕೂಡೆ ಸಖ್ಯವ ಬೆಳೆಸಿ ದುರಿತವಗೈದ ವಾಲಿಯ ನಿಗ್ರಹಿಸಿ ಕಪಿ ವರ ಸುಗ್ರೀವಗೆ ರಾಜ್ಯಕರುಣಿಸಿದಾ ಬಳಿಕ ಪರಮ ವಜ್ರಶರೀರಿ ಪವನಜ ಶರಧಿಯ ಲಂಘಿಸಿ ಧರಣಿತನಯಳಿ ಗರುಹಿ ಕುಶಲವ ಮುದ್ರಿಕೆಯನಿತ್ತು ಉರುಹಿ ಲಂಕೆಯ ಬರಲು ಒಲಿದನು 4 ಭಕ್ತ ವಿಭೀಷಣನಿಗೆ ಇತ್ತು ಅಭಯವನು ಶರಧಿ ಬಂಧಿಸಿ ದಾಟಿ ಹತ್ತು ತಲೆಯವನ ಪುರವ ಪ್ರವೇಶಿಸಿ ದೈತ್ಯಶೂರರನ್ನೆಲ್ಲ ಮೃತ್ಯು ವಶವ ಮಾಡಿ ಮತ್ತೆ ಕುಂಭಕರ್ಣೇಂದ್ರಜಿತ್ ಮುಖ ದೈತ್ಯರನು ಸಂಹರಿಸಿ ರಣದೊಳು ಶತ್ರು ಭಯಂಕರನಾಗಿ ಮೆರೆದನು ಸ್ತುತ್ಯ ಮಹಿಮ ಶ್ರೀ ಕರಿಗಿರೀಶನು 5
--------------
ವರಾವಾಣಿರಾಮರಾಯದಾಸರು
ಶ್ರೀ ಸೌಭಾಗ್ಯ ಪ್ರದ ಹನುಮಂತ(ಅಣು ಸುಂದರ ಕಾಂಡ)67ಶರಣು ಪಾಲಿಸೋ ಹನುಮ |ಕರುಣಾಳು ಅಂಜನಾಸೂನು ನಿನ್ನ ಮಹಿಮೆವರ್ಣಿಸಲು ನಾಬಲ್ಲೆನೆ ಹೇ ವಾಯು ಪುತ್ರನೇ ಅಸಮಬಲಜ್ಞಾನ ರೂಪನೆ ನಿನಗೆ ಇಷ್ಟ ಶ್ರೀರಾಮಜೀವರಲಿ ನೀ ಉತ್ತಮ |ಶರಣು ಫಲ್ಗುಣಸಖಪಿಂಗಾಕ್ಷನೇಶರಿಧಿ ದಾಟಿದಿಅಮಿತವಿಕ್ರಮವಾರ್ತೆ ಸೀತೆಗೆ ಪೇಳಿ ದಶಮುಖಸರ್ವತರದಿ ಸೌಮಿತ್ರಿ ಪ್ರಾಣ ಪ್ರ -ದಾತಹರಿವರಶರಣು ಶರಣು ಮಹಾತ್ಮ ಸಹೃದನೇಶರಣು ಪಾಲಿಸೋ ಹನುಮ ಪಪೂರ್ಣಪ್ರಜÕನೀನೆಂದು ಬಹು ಹರುಷ ತೋರಿದ |ರಾಘವನ ಕರೆತಂದು ರವಿಜನಿಗೆ ಸಖ್ಯ | ಮಾಡಿಸಿ ನೀಸಿಂಧು|ದಾಟುತ್ತ ಮೈನಾಕನ್ನೇ | ಶ್ಲೇಷಿಸಿನಿಂದುವಿಶ್ರಾಂತಿ ಕೊಳ್ಳದೆ ಮುಂದು |ಹಾರಿ ಸುರ ಸೆಯೊಳ್ ಲೀಲೆಯಿಂದಲಿ ಹೊಕ್ಕು ಹೊರಟು -ಸುರರುಪೂಮಳೆಕರಿಯೇ ಸಿಂಹಿಕಾ ಉದರ ಸೀಳಿ ದ್ವಾರ ಪಾಲಕೆಯನ್ನ ಜಯಿಸಿಪುರಿ ಪ್ರವೇಶವ ಮಾಡಿ ಸೀತಾಕೃತಿಯ ಕಂಡುಂಗರುವ ಕೊಟ್ಟುಕ್ರೂರ ರಾಕ್ಷಸ ಅಕ್ಷಾದಿಗಳ ಕೊಂದು ಲಂಕಾಪುರಿಯ ಸುಟ್ಟುಭರದಿ ತಿರುಗಿ ಬಂದು ರಾಘವನಂಘ್ರಿಯಲಿ ಸನ್ನಮಿಸಿ ಸೀತೆಯಚೂಡಾರತ್ನವನಿಟ್ಟು ರಾಮಾಲಿಂಗನ ನೀಕೊಂಡಿಯೋ ಸೌಭಾಗ್ಯ ನಿಧಿಯೇಶರಣು ಪಾಲಿಸೋ ಹನುಮ 1ಜಯತು ಶರಣು ಶ್ರೀರಾಮ | ಶರಣೆಂದವಿಭೀಷಣನನ್ನ | ಅತಿ ಪ್ರೇಮದಿಂದ ನೀ ಸ್ವೀಕರ್ಯನೆನಲು ಶ್ರೀರಾಮ |ಬಂದು ಅಭಯವ ನಿತ್ತ ಪೂರ್ಣಕಾಯ |ಅಮಿತ ಸುಗುಣ ಸುಧಾಮ|ಮಾರ್ಜಗಾರಿ ಸಸೈನ್ಯ ರಾವಣ ನನ್ನ ಜಹಿಯಲು | ಸೇತು ಕಟ್ಟಿಸಿ |ಸುಜನರಕ್ಷಕ ಉರುಪರಾಕ್ರಮ ಅಜಿತರಾಮನು ಪೋಗೆ ಲಂಕೆಗೆ |ಜಾಂಬವಾನ್ ಸುಗ್ರೀವ ಸಹ ನೀ ಜಾನಕೀಶಗೆ ಸೇವೆ ಸಲ್ಲಿಸಿ |ಸಂಜೀವಿನಿಗಳ ತಂದು ರಾಮಾನುಜಗೆ ಪ್ರಾಣವನಿತ್ತು ರಾವಣಭಂಜನವ ರಘುರಾಮ ಮಾಡಿ ಅಯೋಧ್ಯೆಬರುವುದು ಪೇಳಿ ಭರತಗೆ |ನಿಜ ಸಂತೋಷದಿ ಸೀತಾರಾಮಗೆ ರಾಜ್ಯ ಪಟ್ಟಾಭಿಷೇಕ ಗೈಸಿದಿ -ಶುಭಸುಚರಿತನೆ ಶರಣು ಪಾಲಿಸೋ ಹನುಮ2ರಾಮಭದ್ರನು ನಿನ್ನ | ಅನುಪಮೋತ್ತಮ ಸೇವೆ ಮೆಚ್ಚಿ ಏನನ್ನ |ನೀನಗೀವುದು ನಿನ್ನ ಸೇವೆ ಸಮ ಬಹುಮಾನ |ಮೋಕ್ಷ ಸಾಲದು ಪೇಳು ಬೇಕಾದ್ದನ್ನ | ಎನಲು ನೀ ರಾಮನ್ನ |ನಮಿಸಿ ಪ್ರೇಮದಿ ರಾಮಚಂದ್ರನೆ ನಿನಗೆ ಇಷ್ಟ ಸರ್ವಜೀವರುರಾಮನಲ್ಲಿ ಮಾಳ್ಪ ಭಕ್ತಿಗೆ ಅಧಿಕನಿತ್ಯಪ್ರವೃದ್ಧವಾದಪರಮಭಕ್ತಿವೊಂದನ್ನೇ ಈವುದು ಎಂದು ನೀ ಕೇಳೆ ವಿನಯದಿಪ್ರೇಮದಿಂದ ತಥಾಸ್ತು ಎನ್ನುತ ಬ್ರಹ್ಮಪದ ಸಹಭೋಗ ಸಾಂಪ್ರತಸಮಸ್ತವಾದ ಸೌಭಾಗ್ಯ ಸಮೃದ್ಧಿಯ ಇತ್ತು ಒಲಿದನು ಅಜನಪಿತ ಶ್ರೀರಮೆಯ ಅರಸ ಪ್ರಸನ್ನ ಶ್ರೀನಿವಾಸ ಭೂಮ ಏಕಾತ್ಮ ರಾಮಪ್ರಮೋದಿ ವಿಭುವು _ ಶರಣು ಪಾಲಿಸೋ ಹನುಮ 3
--------------
ಪ್ರಸನ್ನ ಶ್ರೀನಿವಾಸದಾಸರು