ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಂ ಜಯ ಸುಂದರ ಮೂರುತಿಗೆ ಮಾ ಮನೋಹರನಿಗೆ ಪ ಮಂಗಳ ಮಧುಸೂದನನಿಗೆ ಮಂಗಳ ಮುರಮರ್ದನನಿಗೆ ಮಂಗಳಾಂಗ ಶ್ರೀ ಮದನಂತ- ರಂಗನಿಗೆ ಶುಭಾಂಗ ಹರಿಗೆ 1 ರಂತಿದೇವನನ್ನು ಪೊರೆದ ಚಿಂತಿತಾರ್ಥ ಪ್ರದಾತನಿಗೆ ಸಂತತವು ಭಕುತರನು ಸಂತೋಷದಿ ಪೊರೆವ ಹರಿಗೆ2 ಪಾಂಡವರನು ಪೊರೆದÀಗೆ ಪುಂಡರೀಕಗೆ ಒಲಿದಗೆ ತಂಡತಂಡದ ಭಕ್ತರನ್ನು ಕಂಡುಪೊರೆವ ಮಹಮಹಿಮಗೆ3 ನಾರಿ ರುಕ್ಮಿಣಿ ಭಾಮೆ ಸಹಿತದಿ ದ್ವಾರಕಾಪುರ ವಾಸನಿಗೆ ಸೌಳಸಾಸಿರ ಸತಿಯರಾಳ್ದ ಸಾರಸಾಕ್ಷ ಹರಿಗೆ ಬೇಗ4 ಕಡಲೊಡೆಯಗೆ ಮೃಡಸಖನಿಗೆ ಕಡುಹರುಷದಿ ಕಾಮಿನಿಯರು ಸಡಗರದಲಿ ಕಮಲನಾಭ ವಿಠ್ಠಲನಂಘ್ರಿ ಭಜಿಸಿನಲಿದು5
--------------
ನಿಡಗುರುಕಿ ಜೀವೂಬಾಯಿ