ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಗಮ ಆಗಮಗೋಚರ ಜಗನ್ಮೋಹ ಜಗದೀಶ ಪಾಲಿಸು ಎನ್ನ ಪ ಖಗವರಗಮನ ಜಗದ ಜೀವನ ಪೊಗಳುವೆ ನಗಧರ ಅನಘನೆ ನಿನ್ನ ನಗೆ ಮೊಗದೋರೆನಗಗಲದೆ ಅನುದಿನ ನಗಜನಮಿತ ಮಿಗಿಲಗಣಿತ ಮಹಿಮ ಅ.ಪ ಕದನಕಂಠೀರವ ಉದಧಿಸದನ ಮಹ ಅಧಮಕುಲದ ಮದಸಂಹರ ಹದಿನಾರುಸಾವಿರ ಸುದತಿಯರ ಮನ ವಿಧ ವಿಧ ಸುಲಿದ ಸುಂದರ ಸದಮಲರಾಧೇಯ ಮದನಕದನದಿಂ ಕದಲದ ಆನಂದ ಮಂದಿರ ಕುದುರೆ ತಿರುವಿ ಪಾದಪದುಮದಾಸನ ಘೋರ ಕದನಗೆಲಿಸಿದ ಗಂಭೀರ ಯುದುಕುಲಪಾವನ ಮದನನಯ್ಯ ರಮಾ ಪದುಮಾವತಿಯ ಪಂಚಜೀವನಸದನ ಪದುಮವದನ ಸದಸದುಗುಣಗಳ ಸದ್ಹøದಯ ಉದಯ ಮುದ ವುದಯಾಗೆನ್ನೊದನದಿ1 ನಲಿದು ನಲಿದು ಪೊಂಗೊಳಲುನೂದುವ ಬಲುಚೆಲುವ ಚಿದ್ರೂಪನಾಟಕ ಒಲದು ಭಜಕಜನರ್ಹೊಲಬು ತಿಳಿವ ಚಿ ತ್ಕಳಾಭರಿತ ವಿಶ್ವವ್ಯಾಪಕ ಜಲಜಮಿತ್ರ ಕೋಟಿಕಳೆಕಿರಣಗಳಿಂ ಖಳಕುಲಭೀತ ಸುಫಲಪ್ರದ ಪರತರ ಇಳೆಮಂಡಲತ್ರಯ ಪಾಲಕ ಕಲಿಮಲಹರ ನಿರ್ಮಲನಿಜಚರಿತ ಮಲಿನ ಕಳೆದು ನಿರ್ಮಲನೆನಿಸೆನ್ನ ಒಲಿದುಪಾಲಿಸು ಸ್ಥಿರ ಚಲಿಸಿದಚಲಮನ ಸುಲಭಭಕುತ ಬಲ ವಿಲಿಸಿತಕರುಣಿ 2 ಸಿಡಿಲುಕೋಟಿಸಮ ಫಡಫಡಸ್ತಂಭವ ಒಡೆದು ಮೂಡಿದ ತ್ರಿವಿಕ್ರಮ ಕಡುರೋಷದಿ ಕೆಂಗಿಡಿಗಳನುಗುಳುವ ಕಡುಗಲಿಗಳಗಲಿ ನಿಸ್ಸೀಮ ಘುಡುಘುಡಿಸುತ ಆರ್ಭಟಿಸುತ ದುರುಳನ ಒಡಲಬಗಿದ ಕಡುಪರಾಕ್ರಮ ಗಡಗಡ ನಡುಗುವ ದೃಢತರ ಬಾಲನ ಪಿಡಿದು ಪೊರೆದ ಭಕ್ತ ಸುಖಧಾಮ ಉಡುಮಂಡಲ ವರಗಡರಿದ ಶಾಪವ ತಡೆಯದೆ ಹಡೆಹಾಯ್ಸ್ಹಿಡಿದೆಲೋಕವರ ಜಡಜಭವ ತೊಡರನು ಗಡ ಕಡಿದೆನ್ನಯ ನುಡಿಯೊಳೊಡೆದು ಮೂಡು ಒಡೆಯ ಶ್ರೀರಾಮ ಪ್ರಭು 3
--------------
ರಾಮದಾಸರು
ಸಿಂಧುಶಯನನೆ ಸರ್ವಬಂಧುಬಳಗ ನೀನೆ ತಂದೆ ನೀ ಬಿಟ್ಟರೆ ಬಂಧುಗಳ್ಯಾರಿಲ್ಲ ಪ ಒಂದು ವೃಕ್ಷದಿ ಬಂದು ಪಕ್ಷಿಗ ಳ್ವøಂದ ಗೂಡಗಲ್ಹೋಗುವಂದದಿ ಒಂದಕೊಂದು ಸಂಬಂಧವಿಲ್ಲದ ಬಂಧುವೆಂಬುವರೆಲ್ಲ ಪುಸಿಯು ಅ.ಪ ಕೊಳದಿ ಮಕರಿಗೆ ಸಿಲ್ಕಿ ಬಳಲುತಿರುವ ಕÀರಿಯ ಬಲವಾಗುಳಿಸಿದರಾರು ಬಳಗ ಹಿಂಡುಗಳಿರ್ದು ನಳಿನಲೋಚನ ನೀನೆ ಗತಿಯೆನೆ ಒಲದು ಆ ಕ್ಷಣ ಕರಿಯನುಳುಹಿದಿ ತಿಳಿದು ಭಜಿಸುವ ದಾಸಜನಕತಿ ಸುಲಭನೆಲೊ ನೀ ಜಲಜನಾಭ 1 ಕುರುಪತಿಸಭೆಯೊಳು ಇರುತಿರೈವರು ಪರಿ ದುರುಳ ಕೊಳ್ಳುತಲಿರೆ ನೆರೆದ ಪತಿಗಳು ಸುಮ್ಮನಿರುತಿರೆ ಹರಿಯೆ ಗತಿಯೆಂದು ತರುಣಿ ಮೊರೆಯಿಡೆ ಮಾನವ ಕಾಯ್ದಿ ಚರಣಭಕ್ತರ ನಿರುತರಸುರಧೇನು 2 ದೃಢದಿ ಶ್ರೀಹರಿಯೆಂದು ನುಡಿಯುವ ಬಾಲಗೆ ಹಿರಣ್ಯ ಕಡುವೈರಿಯಾಗಿ ಗಡನೆ ತೋರ್ಹರಿ ಮೂಢ ಎಲ್ಲೆನೆ ಒಡನೆ ಕಂಬದಿ ಮೂಡಿ ದುರುಳನ ಒಡಲ ಬಗಿದು ಪಿಡಿದು ಭಕ್ತನ ಬಿಡದೆ ಸಲಹಿದಿ ಕಡುದಯಾನಿಧೆ 3 ಇಳೆಪತಿ ಪಿತನಿದಿರೊಳ್ ಮಲತಾಯಿಕೃತಿಯಿಂದ ಬಲುನೊಂದು ಧ್ರುವರಾಜ ಕಳವಳಗೊಂಡು ಜಲಜನಾಭನ ಮೊರೆಯನಿಟ್ಟು ಚಲಿಸದೆ ಮನಮುಟ್ಟಿ ತಪಿಸಲು ಒಲಿದು ಧ್ರುವಪದವಿತ್ತಿ ಭಕ್ತರ ಕಲ್ಪಿತವನೀವ ಕಲ್ಪತರು ನೀನು 4 ಪ್ರಾಣೇಶ ಶ್ರೀರಾಮ ಧ್ಯಾನಿಪರಿಗೆ ಸತ್ಯ ನಾನಾದೈವದ ಬಲವು ನೀನೆಯಾಗಿರುವಿ ಕಾನನದಿ ಕಲ್ಲನ್ನು ತುಳಿದು ದಾನ ಕೊಟ್ಟೆಯ ಜೀವ ಸುದತಿಗೆ ಜ್ಞಾನವಿಲ್ಲದಧಮ ಎನಗೇನು ಶಕ್ಯ ನಿನ್ನ ಮಹಿಮೆ ಪೊಗಳಲು 5
--------------
ರಾಮದಾಸರು