ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಳಿಭಳಿರೆ ಶನಿರಾಜ ನೀನೆ ಬಲ್ಲಿದನೊ ಇಳೆ ಮೂರರಲಿ ನಿನಗಿಂ ಬಲ್ಲಿದರ ಕಾಣೆ ಪ ಧರೆಗೆಲ್ಲ ಒರ್ವನೆ ದೊರೆಯಾದ ನಳನನ್ನು ಪರರಾಯನಾಳೆನಿಸಿ ತಿರುವಿಸಿದಿ ಅಶ್ವ ವರ ಸತ್ಯ ಹರಿಶ್ಚಂದ್ರನ್ಹೊಲೆಯನಾಳೆನಿಸವನಿಂ ನಿರುತದಿಂ ಕಾಯ್ಸಿದೆಯೊ ಸುಡುಗಾಡವ 1 ಭೂಪತಿ ವಿಕ್ರಮಗೆ ಕಳ್ಳನೆಂದೆನಿಸವನ ತಾಪಬಡಿಸೆದೆಯೊ ಕೈಕಾಲುಗಳ ಕಡಿಸಿ ರೂಪಗೆಡಿಸಿದಿಂದ್ರಿನ ಮೈಯಲ್ಲಿ ತೂತ್ಹಾಕಿ ಶಾಪಕೊಡಿಸಿಂದುವಿನ ಕಳೆಯುಗುಂದಿಸಿದಿ 2 ಕುರುರಾಯನೊಂಶವಂ ನಿರ್ಮೂಲ ಮಾಡಿದೆಯೊ ತಿರಿದುಣಿಸಿದಿ ಆ ಮಹ ಪಾಂಡುನಂದನರ ಪರಮ ಸುಖಿಗಳ ಸುಖಕೆ ಕಿಡಿಯಿಟ್ಟು ನೋಡಿದಿ ವರ ತಪಸ್ವಿಗಳ ತಪಸ್ಸು ಭಂಗಪಡಿಸಿದೆಯೊ 3 ಒದಗಿ ಯಮದೇವನನ್ವಧೆ ಮಾಡಿಸಿದೆಯೊ ನೀ ಪದುಮಪೀಠನದೊಂದು ಮಸ್ತಕವ ಕಳೆದಿ ಮುದ ಕೃಷ್ಣ ಗಿಡದಡಿಯಸುವ ಬಿಟ್ಟನೆನಿಸಿದಿ 4 ಇಂತಿಂಥ ಮಹಿಮರನು ಈ ಪಾಡ ಪಡಿಸಿದಿ ನ ಮ್ಮಂಥ ನರಜನರ ಪಾಡೇನು ನಿನಗೆ ಕಂತುಪಿತ ಶ್ರೀರಾಮನನುಮತಿಯ ಪಡೆದು ಬಲ ವಂತನಿನಿಸಿದೆಯೋ ನೀ ಮೂಲೋಕದೊಳಗೆ 5
--------------
ರಾಮದಾಸರು
ಮರುದಂಶ ಮಧ್ವಮುನಿರನ್ನ ನಿನಗೆಸರಿಗಾಣೆ ಜಗದೊಳಗೆ ಸರ್ವರೊಳು ಪೂರ್ಣ ಪ. ಹಿಂದೆ[ರಾಮರು] ಮುಂದೆ ಬಂಟನಾಗಿ ನೀ ನಿಂದೆಚಂದ್ರದ್ರೋಣದ ಗಿರಿಯ ತಂದೆ ದನುಜರ ಕೊಂದೆ[ಎಂದೆಂದಿಗಳಿವಿಲ್ಲದ]ಬ್ರಹ್ಮ ಪದವಿಗೆ ಸಂದೆಇಂದ್ರಾದಿ ಸುರರುಗಳ ತಂದೆ ಸ್ವಾಮಿಇಂದೆಲ್ಲರಿಗೆ ನೀನು ಗುರುವೆನಿಸಿ ನಿಂದೆ 1 ಕೌರವ ಬಲವ ತರಿದೆ ಕೀಚಕನ ಕುಲವ ಮುರಿದೆಒರ್ವನೆ ಬೇಸರದೆ ಷಡ್ರಥಿಕರನು ಗೆಲಿದೆಉರ್ವಿಯೊಳು ಭುಜಬಲದಿ ಭೀಮನೆನಿಸಿ ಮೆರೆದೆ ಹರಿಯ ಕಿಂಕರರ ಪೊರೆದು ಈಗಸರ್ವವನು ತೊರೆದು ಶಾಸ್ತ್ರಾಮೃತವಗರೆದೆ 2 ದುರುಳವಾದಿಗಳೆನಿಪ ಘನತಾಮಸಕೆ ದಿನಪಸಿರಿಯರಸ ಹಯವದನಪದಕಂಜಯುಗಮಧುಪಗುರುಮಧ್ವಮುನಿಪ ನಿರ್ಲೇಪ ಶುದ್ಧಸ್ಥಾಪ ವರ-ವಿದ್ಯಾಪ್ರತಾಪ ಭಾಪುರೆಪರಮಪಾವನರೂಪ ಭಳಿರೆ ಪ್ರತಾಪ 3
--------------
ವಾದಿರಾಜ