ಒಟ್ಟು 7 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಮಹಿಷಿ ಅಶ್ವತ್ಥನಾರಾಯಣ ದೇವರು) ತಪ್ಪಾ ಕ್ಷಮಿಸು ಕಲ್ಪತರುರೂಪ ತವಪಾದ- ಕೊಪ್ಪಿಸಿದೆನು ಯೆನ್ನನು ಅಪ್ಪಳಿಸಖಿಳಾಂತರಾಯವತಿದಯದಿ ತಿ- ಮ್ಮಪ್ಪರಾಜನೆ ನೀನೆಂದರಿತು ಬಂದಿರುವೆನು ಪ. ಮಂಗಲ ಮಹಿಮೆ ಮಾತಂಗ ವರದ ಶುಭ ತುಂಗಾತೀರದಿ ನಿಂದು ತಾರಕನೆಂದು ಭವ ಭಯ ಭಂಗದ ಮಹಿಮನೆಂದರಿತು ಬಂದಿಹೆನಿಂದು ಅಂಗದಾದಿ ದೇವೇಂದ್ರ ಸಂಸ್ತುತ ತುಂಗಬಲ ಹನುಮತ್ಪ್ರತಿಷ್ಠಿತ ಅಂಗುಟಾಗ್ರದೊಳಖಿಳಪಾವನ ಗಂಗೆಯನು ಪಡದಾದಿ ಪುರುಷ 1 ಪಾವಕ ದಿಋಖ(?) ದೇವ ಸತ್ಸುಖಗಣ ಭಾವನ ಭಜಕೇಷ್ಟಸಿದ್ಧಿದನೇ ಮಾವನ ಮಗನೊಳಗುಸುರಿದ ನುಡಿಯನು ಕಾವೆನಿಂದಿರುವಿಲ್ಲಿ ಕರುಣಾವಾರಿಧಿ ಕೃಷ್ಣಾ ಈ ವಸುಂಧರೆಯಲ್ಲಿ ಘಟಿಸುವ ನೋವುಗಳ ಸಂಬಂಧಗೊಳಿಸದೆ ಶ್ರೀವನಿತೆಯೊಡಗೂಡಿ ನಿನ್ನ ಕ- ರಾವಲಂಬನವಿತ್ತು ಕರುಣಿಸು 2 ತ್ರಿವಿಧ ತಾಪಗಳು ಭರಿಸಲಾರದೆ ವಂದು ನೆವನದಿಂದಲಿ ಬಂದು ನುಡಿದೆನಿಂದು ಪವಮಾನವಂದಿತ ಪತಿತ ಪಾವನನೆ ನೀ- ವಹಿಸಿ ರಕ್ಷಿಪುದೆಂದು ಒರೆವೆನು ಗುಣಸಿಂಧು ವಿರಿಂಚಿ ರಮಾ ವರಪ್ರದ ಭಾರ ನಿನ್ನಲಿರಿಸಿದವನನು ತವಕದಲಿ ಕಾಪಾಡು ವೆಂಕಟ ಮಹಿಷಿ ಕ್ಷೇತ್ರ ಪಾಲನ3
--------------
ತುಪಾಕಿ ವೆಂಕಟರಮಣಾಚಾರ್ಯ
ಒರೆವೆ ಹಿತವನೆ ಕೇಳು ಎಲೆ ಮರುಳ ಮೂಢಾಒರೆವೆ ಹಿತವನೆ ಕೇಳೊಇರುವೆನು ಎಲ್ಲಿ ಎಂದೆನ್ನುವೆ ಏಕೆತೆರಳುವೆನೆಲ್ಲಿಗೆ ಎನ್ನು ಶಿವನಹೆ ಪ ಸತಿಸುತರ ನಂಬಬೇಡ ಯಮಧರ್ಮನಮನೆಯ ಸೇವಕರು ನೋಡಾ ಮಕ್ಕಳ ಒಡಗೂಡಾಮಿತಿಯಿಲ್ಲದೆ ಮೋಹವು ಹೆಚ್ಚಿಗತಿಗೆಡಿಸೆ ಒಪ್ಪಿಸುವರು ನಿನ್ನ 1 ಇಂದು ನಿನಗೆ ವಸತಿ ಸ್ಥಳವುಎಲ್ಲಿ ದೇವರು ಬಂದು ತುಳಿದಾಡುವರಿಂದುಬಲ್ಲವನಾದರೆ ಸತ್ಯವಿದೆನ್ನುತಎಲ್ಲರ ಆಸೆಯ ಮನದಲಿ ತ್ಯಜಿಸು2 ಸುಂಟರಗಾಳಿಯು ರವದಿ ತಿರುಗಿದವೊಲುಉಂಟು ಅನಂತಕಾಲದಿ ಜನನ ಮರಣಗಳುಅಂಟಿಯೆ ಕಾಲವ ಮರುಳದು ಬೇಡಅಂಟಿಯೆ ಹೊಂದು ಚಿದಾನಂದ ಬ್ರಹ್ಮವ 3
--------------
ಚಿದಾನಂದ ಅವಧೂತರು
ನೀರೇರುಹಾನಯನ | ವಾರನಿಧಿ ನಡುಶಯನತೋರೆನಗೆ ತವ ಚರಣ | ಸುಗುಣ ಗಣ ಪೂರ್ಣ ಪ ಅಮಿತ ಕ್ಲೇಶ ಗೊಳಿಸದಂತೆನೀ ಸಲಹೋ ಎನ್ನ | ಶೇಷಾದ್ರಿ ವಾಸಾ ಪರೇಶಾ1 ಭವ | ಸಂಗದೊಳಗಿರಿಸೀಭಂಗ ಪಡಿಸುವಿ ದೊರೆಯೆ | ಶೃಂಗಾರ ನಿಧಿಯೇ |ಸಂಗ ವಿಷಯದಿ ಹರಿಸಿ ನಿ | ಸ್ಸಂಗನೆಂದೆನಿಸಿಲಿಂಗಾಂಗ ಕಳೆಯೊ ಹರಿ | ರಂಗ ಭವಹಾರಿ2 ಸಾಮಸನ್ನುತ ಚರಣ | ಭೂಮಗುಣಿ ಸುಸ್ತವನಪ್ರೇಮದಲಿ ಗೈವ ಮನ | ನೇಮವೀಯೆಲೊ ವಾಮನ |ಈ ಮಹಾ ಕಲಿಯುಗದಿ | ನಾಮ ನಿಸನ್ನದೆ ಗತಿಯೆಶ್ರೀಮಹೀ ಸೇವಿತನೆ | ರಾಮ ಗುಣಧಾಮ 3 ಭವ | ರೋಗ ವೈದ್ಯನೆ ಎನ್ನರೋಗ ಹರಿಸುವುದರಿದೆ | ಇದು ನಿನ್ನ ಬಿರುದೇ4 ನಿರವದ್ಯ ಆದ್ಯಾಅರುಹಲೇನಿಹುದಿನ್ನು | ಸರ್ವಜ್ಞ ನೀನಿನ್ನು ಒರೆವೆನೆಂಬಪರಾಧ | ಮರೆದು ಪಾಲಿಸು ಶ್ರೀಶ 5
--------------
ಗುರುಗೋವಿಂದವಿಠಲರು
ರಾಮ - ರಕ್ಕಸ ಸಂಕಲ ಭೀಮಮುನಿದರೆ ಲೋಕ ವಿರಾಮ | ಸಾಮಸನ್ನುತ ನಿಸ್ಸೀಮ ಪ ಕಾಮಿತಾರ್ಥ ಸುಮಹೋದಧೆ - ನಿಪ್ಕಾಮನ ಮಾಡೆಲೊ ವಾಮನ ಮೂರ್ತಿಅ.ಪ. ಧಾಮ ವೈರಿ ಸುತ್ರಾಮ ||ಕಾಮನಯ್ಯ ಕಮ | ನೀಯ ಮೂರುತಿಯೆಕಾಮಿಪೆ ನಿನ್ನನು | ಭೂಮ ಗುಣಾರ್ಣವ 1 ಪಾತಕ ಕಳೆಯೋ 2 ಬಾಲಾ - ಕೆಡಿಸಿದೆ ಗೋಪೆರ ಶೀಲಾ | ಜನನಿಗೆ ತೋರಿದೆ ಲೀಲಾವದನದಿ ಲೋಕ ವಿಶಾಲಾ | ಮಾವ ಕಂಸಗೆ ನೀ ಕಾಲಾ ||ಪಾಲು ಮೊಸರು ಬೆಣ್ಣೆ | ಲೀಲೆಯಿಂದಲಿ ಮೆದ್ದುಜಾಲತನದಿ ನಿಮ್ಮ | ಬಾಲರೆಂದ್ಹೇಳಿದೆ 3 ಶ್ರೀತಾಕೇಶಿ ನಿಷೂದನ ವೃಷ್ಟೀಶ | ಸೋಜಿಗವೇನಿದು ಸರ್ವೇಶಸಂತತ ಭಜಿಪರ ಅಘನಾಶ | ದಾಸ ಜನರ ಹೃತ್ತೋಷ ||ವಾಸವ ಮುಖ ದೇ | ವೇಶ ನಿನ್ನಯ ಪಾದಆಶ್ರಯ ದೊಳಗಿಟ್ಟು | ಪೋಷಿಸು ಎನ್ನ 4 ಕರ್ತಾ - ರಕ್ಷಿಸೆನ್ನ ತ್ರಿಜಗದ್ಭರ್ತ | ನೀ ಲೋಕೈಕ ಸಮರ್ಥಗುರು ಕರುಣದಿ ನಾನು ಕೃತಾರ್ಥ | ಒರೆವೆನೊ ನಾನೊಂದು ವಾರ್ತಾಆರ್ತೇಷ್ಟದ ಗುರು | ಗೋವಿಂದ ವಿಠಲಮೂರ್ತಿ ನೆಲಸೊ ಮಮ | ಹೃತ್ಕಮಲದಲಿ5
--------------
ಗುರುಗೋವಿಂದವಿಠಲರು
ಶ್ರೀರಂಗಶಾಯಿ ವಿಠಲ ಪೊರೆಯ ಬೇಕಿವಳ ಪ ಭವ ಶರಧಿ ದಾಂಟಿಸುತ ಅ.ಪ. ಕಾರಾಣಾತ್ಮಕ ನಿನ್ನ | ಗುಣರೂಪ ಕ್ರಿಯೆಗಳಧಾರಣೆಗಳಿಲ್ಲದಲೆ | ಧ್ಯಾನರತಳಾಗಿಮೂರಾರು ದ್ವಾರಗಳ | ಬಂಧಿಸುತ ಯೋಗದಲಿಆರಾಧ್ಯ ಮೂರ್ತಿಯನೆ | ಮರೆತ ಯೋಗಿಣಿಯ 1 ತೈಜಸ ಸು | ವ್ಯಕ್ತ ಅಂಕಿತವಾ 2 ತಾರತಮ್ಯ ಜ್ಞಾನ | ಮೂರೆರಡು ಭೇದಗಳಸಾರತತ್ವಗಳರುಹಿ | ಪೊರೆಯ ಬೇಕಿವಳ |ಕಾರುಣಿಕ ಕಂಕಣಾ | ಕಾರ ಚಕ್ರಾಕೃತಿಯತೋರಿರುವೆ ತನ್ಮಹಿಮೆ | ಅರಿಯ ಕಾತುರಳಾ 3 ಸಿರಿ ಸತ್ಯ ನರೆಯಣನೆಪರಿಪರಿಯಲಿಂದಿವಳ | ಪೊರೆಯ ಬೇಕೋಗರುಡಗಮನನೆ ದೇವ | ಸರ್ವಜ್ಞ ನೀನಿರಲುಒರೆವೆನೆಂಬಪರಾಧ | ಮರೆದು ಪಾಲಿಪುದೋ 4 ಅದ್ವೈತ ಉಪದೇಶ | ತಿದ್ದಿನಿನ ಪದದಲ್ಲಿಶುದ್ಧ ಭಕ್ತಿಜ್ಞಾನ | ವೃದ್ಧಿಯನೆ ಗೈಸೀಮಧ್ವಾಂತರಾತ್ಮ ಗುರು | ಗೋವಿಂದ ವಿಠ್ಠಲನೆಅದ್ವಿತೀಯನು ಯೆಂಬ | ಬುದ್ಧಿ ಸ್ಥಿರ ಮಾಡೋ 5
--------------
ಗುರುಗೋವಿಂದವಿಠಲರು
ಸುಂದರ ಕಾಂಡ ರಾಮಾಯಣ ಸಿರಿ ಸಿರಿ ಹನುಮನಾ ||ಮೆರೆವ ಸಚ್ಚರಿತೆ ಮಮ | ಗುರುವೆ ನುಡಿಸೀದಷ್ಟುಒರೆವೆ ಕೇಳ್ಪುದು ಸಜ್ಜನಾ ಪ ಗೃಹ ಮೇಧಿ ಇರುವ ಬಗೆ | ಬಹು ಪರೀಯಲಿ ತೋರಿಗುಹ ವನಂಗಳನೆ ಚರಿಸೀ |ಗೃಹಿಣಿಯನು ಕಾಣದಲೆ | ಬಹು ನಟಸಿ ನರರಂತೆಮಹ ಮಹಿಮ ರಾಮ ಬರಲೂ 1 ಪತಿ ದಶರಥನ | ಸುತನ ಕಂಡೆರಗಿ ರವಿಸುತಗೆ ರಾಜ್ಯವನೆ ಕೊಡಿಸೀ 2 ರಾಮನಾಣತಿ ಪೊತ್ತು | ಭೂಮಿಜೆಯ ವಾರ್ತೆಯನುನೇಮದಲಿ ತರುವೆ ನೆನುತಾ ||ಆ ಮಹಾ ಶರಧಿಯನು | ಧೀಮಂತ ಲಂಘಿಸುತಭೂಮಿಜೆಯ ಕಂಡು ಎರಗೀ 3 ಪತಿ | ರಾಮನ್ನ ಕಂಡ ಪರಿಆಮೋದದಲ್ಲಿರುತಿರೇ 4 ಶ್ರೀ ಲೋಲ ರಾಮನಿಗೆ | ಆಳಾಗಿ ಇರಲೊಂದುವಾಲುಳ್ಳ ಕಪಿಯು ಬಂದೂ ||ಕೇಳುವರು ಇಲ್ಲದಲೆ | ಪೋಲಾಗಿ ಹೋಯ್ತೆಂಬಕೀಳು ನುಡಿಗವಕಾಶ ಕೊಡದೇ 5 ವಂದೆರಡು ಹಣ್ಣಾನು | ತಿಂದ್ಹೋಗುವೇನೆಂದುಇಂದೀವರಾಕ್ಷಿಯ ಬೇಡುತಾ ||ನಂದೀಸಿ ಅಶೋಕ | ನಂದನ ವನವ ಮದಸಿಂಧೂರ ನಂತೆಸಗಿದೇ 6 ಕೋಟ್ಯಶೀತಿಯು ನಿ | ಶಾಟ ಯೂಥಪ ಸಹಸಾಷ್ಟ ಕಾಯುತ ಮುಖ್ಯರಾ ||ಖೇಟ ರಾವಣ ಸೇನೆ | ಕೂಟ ಮೂರರಲೊಂದುರೋಟಿಸುತ ನೀ ಮೆರೆದೆಯೋ 7 ಅಕ್ಷೋಹ್ಣಿ ಬಲ ಸಹಿತ | ರಾಕ್ಷಸಾಧಿಪ ಸುತನುಅಕ್ಷಯ್ಯ ಕುವರ ಬರಲೂ ||ಪಕ್ಷೀಂದ್ರ ತೆರ ಪಿಡಿದು | ಈ ಕ್ಷಿತಿಗೆ ಅಪ್ಪಳಿಸೆತಕ್ಷಣದಲಸು ನೀಗಿದಾ 8 ಮಂದಜಾಸನ ವರದಿ | ಇಂದ್ರಜಿತು ಮದವೇರಿಬಂದೆಸೆಯೆ ಬ್ರಹ್ಮಾಸ್ತ್ರವಾ ||ಛಂದದಲ್ಯೋಚಿಸುತ | ಬಂಧನಕೆ ನೀನಾಗಿನಂದದ ಲ್ವೊಳಗಾದೆಯೋ 9 ತೆತ್ತೀಸ ಕೋಟಿ ದೇ | ವತ್ತೀಗಳಿಗೆಲ್ಲಾಉತ್ತೂಮನಾದ ನೀನೂ ||ಸುತ್ತೀಸಿ ಬಾಲವನು | ಹತ್ತೂತಲೆಯವನನೆತ್ತೀಯ ಮೇಲ್ ಕುಳಿತೆಯೋ 10 ನಾರೀಯ ಚೋರ ನಿ | ನ್ನಾರೆಂದು ಕೇಳಾಲುಮಾರುತ್ತರವಿತ್ತು ಜರಿದೇ ||ಮಾರೀಚ ಮೊದಲಾದ | ನೂರಾರು ರಕ್ಕಸರದೂರೋಡಿಸೀದವನ ದೂತಾ 11 ಕೋಟಲೆಗಳ ಕೊಟ್ಟ | ತಾಟಕಾದೀ ದೈತ್ಯಕೂಟಗಳ ಸಂಹರಿಸಿದಾ ||ಕೂಟಸ್ಥ ಲೋಕಗಳ | ನೋಟದಲಿ ದಹಿಪ ವೈರಾಟ ಪ್ರಭುವಿನಾಳೂ 12 ಕೇಳೆಲೋ ರಾವಣನೇ ತಿಳಿಯಯಾ ನೀನು ನಿನ್‍ಹುಳುವೆಂದು ನಿಜ ಬಾಲದೀ |ಸಿಲುಕಿಸಿ ಜಲನಿಧಿ | ನಾಲಕ್ಕು ಮುಳುಗಿದವಾಲಿ ಪೆಸರನು ಮರೆತೆಯಾ 13 ತಾಲಮರಗಳ ಶೀಳಿ | ವಾಲೀಯನೆ ಕೊಂದರ್ಕಬಾಲಗೇ ರಾಜ್ಯ ಕೊಡಿಸೀ ||ಕೋಲಿನಿಂ ನಿಮ್ಮೆಲ್ಲ | ಹೂಳುವ ರಾಮನಆಳು ನಾನೆಂದು ತಿಳಿಯೋ 14 ರಕ್ಕಸ ಪತಿಯಾಜ್ಞೆ | ಇಕ್ಕಿ ತಲೆಯಾ ಮೇಲೆರಕ್ಕಸರೆಲ್ಲ ತವ ಪುಚ್ಛ ||ಕಿಕ್ಕಲೂ ಉರಿ ಲಂಕೆ | ಪೊಕ್ಕು ಪುರವನೆ ದಹಿಸಿಅಕ್ಕರದಿ ವನದಿ ಹಾರೀ 15 ಕಾಯ ಸಹಿತರ ನೋಡಿಪ್ರೀಯ ದ್ವಾರ್ತೆಯ ನರುಹಲೂ ||ಗೇಯ ಹನುಮನ ತುತಿಸಿ || ರಾಯಗೆರಗುವ ವನದಿಕಾಯ ಕುಪ್ಪಳಿಸುತಿರಲೂ 16 ಕಾತುರತೆಯ ಕಪಿ | ಜಾತೆಗಳ ಸಂತೈಸಿಪ್ರೀತಿಯಿಂ ಮಧುವನವನಳಿದ ||ಸೀತೆಯನು ಕಂಡಂಥ | ವಾರ್ತೆಯನು ಪೇಳೆ ರಘುಜಾತ ನಿನ್ನನು | ಅಪ್ಪಿದಾ 17 ಎರಡೇಳು ಭುವನದೊಳು | ಇರುವರೇ ನಿನ್ಹೊರತುಹರಿಗೆ ಪ್ರೀತ್ಯಾಸ್ಪದನು ಎನಿಸೀ ||ಮೆರೆವ ಭಕ್ತಾಗ್ರಣಿಯೆ | ಎರಗುವೆನು ತ್ವತ್ವದಕೆಹರಿಭಕ್ತಿ ಕರುಣಿಸಯ್ಯಾ 18 ಉದಯಕಾಲದಲೆದ್ದು | ಮುದದಿಂದಲೀ ಪದವಸದಯ ಹೃದಯರು ಪಠಿಸಲೂ ||ಬದಿಗ ಗುರು ಗೋವಿಂದ | ವಿಠಲನೋಳ್ ಸದ್ಭಕ್ತಿವದಗಿ ಪಾಲಿಪ ಹನುಮನೂ 19
--------------
ಗುರುಗೋವಿಂದವಿಠಲರು