ಲಕ್ಷ್ಮೀರಮಣ ಮರೆಯ ಹೊಕ್ಕೆ
ರಕ್ಷಿಸೈ ಪಾಂಡುಪಕ್ಷನೆ ಪ
ಪಕ್ಷಿವಾಹನ ದುಷ್ಟಶಿಕ್ಷ
ಮೋಕ್ಷದಾಯಕ ಶಿಷ್ಟರಕ್ಷ ಅ.ಪ
ತರಳ ಧ್ರುವನ ಪೊರೆದೆಯೆಲೊ
ಕರಿಮೊರೆಯ ಕಾಯ್ದಯ್ಯ ಕರುಣದಿ
ಕುರುಪ ಸಭೆಯಲಿ ದ್ರೌಪದಿ
ಮೊರೆಯನಿಡಲಾಕೆಮಾನವ ಕಾಯ್ದಿ 1
ನರಗೆ ಸಹಯನಾಗಿ ಸಾರ
ಧರೆಯ ಗೆಲಿಸಿದಿ ನಿರುತದಿ
ಕರವ ಪಿಡಿದಿ
ಪರಮ ಪ್ರೇಮದಿ ಒರೆದೆಲೊ 2
ಇಂದು ಎನಗೆ ಸಂಧಿಸಿದ ಮಹ
ಬಂಧನವ ನಿವಾರಿಸೈ
ಪಾದ ನಂಬಿದೆ
ಕಂದನನು ಪೊರೆ ಶ್ರೀರಾಮ3