ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಊ) ಆತ್ಮನಿವೇದನೆ ಇಟ್ಟಂತೆ ಇರುವೆನೊ ಹರಿಯೇ ನೀನು ಕೊಟ್ಟದ್ದನ್ನುಣ್ಣುವೆ ಮತ್ತೇನು ಧೊರೆಯೇ ಪ ಪಟ್ಟೆಪೀತಾಂಬರ ಕೊಟ್ಟರೆ ಉಡುವೆನುಬಟ್ಟೆಯಿಲ್ಲದಿರೆ ಚಿಂದಿತೊಟ್ಟು ನಾನಿರುವೆನೊಮೃಷ್ಟಾನ್ನ ಭೋಜನವಿತ್ತರೆ ಉಣ್ಣುವೆ ಉ-ಚ್ಛಿಷ್ಟನ್ನವನಿತ್ತನೆ ತುಷ್ಟಿಲೆ ತಿನ್ನುವೆ 1 ಹಾಸಿಗೆ ಕೊಟ್ಟರೆ ನಾ ಮಲಗುವೆಭೂಶಯನವಿತ್ತರೆ ಅಲ್ಲಿಯೆ ಒರಗುವೆಆ ಶಾಲು ಕೊಟ್ಟರೆ ಹೊದೆಯದೆ ಬಿಡದಾಕಾಶವ ಹೊದಿಯೆಂದರೆ ಹೊದೆಯುವೆ ಬರಿಯೆ 2 ನೀಕೊಟ್ಟರುಂಟು ಕೊಡದಿದ್ದರೇನುಂಟುಬೇಕು ಬೇಡಗಳು ನಿನ್ನಿಚ್ಛೆಯಾಧೀನಲೋಕೇಶ ಗದುಗಿನ ವೀರನಾರಾಯಣಸಾಕು ಬಿಡಿಸಯ್ಯ ನರಜನ್ಮದ ಗಂಟು 3
--------------
ವೀರನಾರಾಯಣ
ಸಾಕು ಸಾಕು ಮನುಜಸೇವೆಯು, ರಂಗಯ್ಯ ಇನ್ನು ಪ ಸಾಕು ಸಾಕು ಮನುಜಸೇವೆ ಮಾಡಿ ದಣಿದು ನೊಂದೆ ನಾನುಬೇಕು ನಿನ್ನ ಪಾದಭಜನೆ ಕೊಟ್ಟು ಸಲಹೊ ರಂಗಯ್ಯ ಅ ಹೊತ್ತರೆದ್ದು ಹೋಗಿ ಪರರ ಚಿತ್ತವೃತ್ತಿಯನ್ನು ತಿಳಿದುಹತ್ತರಿದ್ದು ಹಲವು ಕೆಲಸ ಭೃತ್ಯನಂತೆ ಮಾಡಿ - ರಿಕ್ತಹಸ್ತದಿಂದ ಮನೆಯ ಸೇರುವೆ - ಆಸೆಗಾಗಿಮತ್ತೆ ಕಂಡ ಕಡೆಗೆ ತೊಲಗುವೆ - ಬಂದು ಅಪರರಾತ್ರಿಯಲ್ಲಿ ತಿಂದು ಒರಗುವೆ ರಂಗಯ್ಯ ರಂಗ 1 ಸ್ನಾನ ಸಂಧ್ಯಾನುಷ್ಠಾನ ನೇಮವೆಲ್ಲ ತೊರೆದುಬಿಟ್ಟುಹೀನನಾಗಿ ಕೆಟ್ಟ ಜನರ ಮನೆಗಳನ್ನು ತಿರುಗಿ ತಿರುಗಿಶ್ವಾನನಂತೆ ದಿನವ ಕಳೆವೆನೊ - ದುರಾಸೆಯನ್ನುಮನಸಿನಲ್ಲಿ ಮಡಗಿಕೊಂಡು ಕುದಿವೆನೊಕೊನೆಗೂ ಎಳ್ಳುಕಾಳಿನಷ್ಟು ಸುಖವ ಕಾಣೆನೊ ರಂಗಯ್ಯ ರಂಗ2 ಮಾಧವ - ರಂಗಯ್ಯ ರಂಗ3
--------------
ಕನಕದಾಸ
ಪವಡಿಸು ಪರಮಾತ್ಮನೆ ಸ್ವಾಮಿಭವರೋಗ ವೈದ್ಯನೆ ಭಕ್ತರ ಪ್ರಿಯನೆ ಪಕುಂದಣದಿ ರಚಿಸಿದ ಸೆಜ್ಜೆಯ ಮನೆಯಲಿಇಂದ್ರನೀಲ ಮಣಿವiಂಟಪದಿ ||ಚಂದ್ರಕಾಂತಿಯ ಠಾಣದೀವಿಗೆ ಹೊಳೆಯಲುಸಿಂಧುಶಯನ ಆನಂದದಿಂದಲಿ 1ತೂಗುಮಂಚದಿ ಹಂಸತೂಲದ ಹಾಸಿಗೆನಾಗಸಂಪಿಗೆಯ ಹೂವಿನ ಒರಗು ||ಸಾಗರಸುತೆಯ ಸಮ್ಮೇಳದಲಿ ನಿಜಭೋಗವ ಪಡುತ ಓಲಾಡುತಿರು 2ಸದ್ದಡಗಿತು ಗಡಿಯಾರ ಸಾರಿತು ಬೇಗಮುದ್ರೆಗಳಾಗಿವೆ ಬಾಗಿಲಿಗೆ ||ತಿದ್ದಿದಧವಳ ಶಂಖಗಳ ನಾದದಿಂದಪದ್ಮನಾಭ ಶ್ರೀ ಪುರಂದರವಿಠಲ3
--------------
ಪುರಂದರದಾಸರು