ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಯ್ಯ ನಿನ್ನ ದಾಸರ ಮೇಲೆ ಕೃಪೆಗಳನುಮಾಡಯ್ಯ ಮನ್ಮನಕೆ ಸಂತಸವನುತೀಡಯ್ಯ ಭವಭಯದ ಪಾತಕಂಗಳ ದಾನವಾಡ ಗುಡ್ಡದ ತಿರುಮಲೇಶ ಸರ್ವೇಶ ಪ ಆದಿಯಲಿ ವೇದಗಳ ಕದ್ದುಕೊಂಡೊಯ್ದವನಸಾಧನಂಗೆಯ್ವೆನೆಂದಾಕ್ಷಣದೊಳುಪೋದನೆಲ್ಲೆನುತ ಶರನಿಧಿಯೊಳಗೆ ಪೊಕ್ಕ ಮ-ತ್ತಾ ದಿತ್ಯನಂ ಕೊಂದು ತಿಕ್ಕಿಮುಕ್ಕೆನೀ ದಯಾ ಪಾತ್ರನೆಂಬುದ ಕೇಳಿ ನಾನರಿತೆಭೂ ಧರೆಯ ಸುರರ ನೀ ಸಲುಹಲಾಗಪೋದ ನಿಗಮಂಗಳನು ತಂದು ಸಲೆ ರಕ್ಷಿಸಿದೆಆದಿ ಮತ್ಸ್ಯವತಾರ ಶರಣೆಂಬೆನು 1 ಮೂರ್ತಿ ನೀನಂದು ಬೇರೆಸುಮತವನು ಬೆನ್ನಲ್ಲಿ ಸಲೆ ಆತು ರಕ್ಷಿಸಿದೆಕಮಠಮೂರುತಿ ನಿನಗೆ ಶರಣೆಂಬೆನು 2 ಚಿನ್ನಗಣ್ಣವನೆಂಬನೊರ್ವ ಖಳ ಭೂದೇವಿಕನ್ನಿಕೆಯನೊಯ್ಯುತಿರೆ ಕನಲಿ ಮನದಿಇನ್ನು ಅವನನು ಸೆಣಸಿ ಜಯಿಸುವವರನು ಕಾಣೆನೆನ್ನುತಲಿ ರೋಮಗಳನುಬ್ಬೆತ್ತುತತನ್ನ ಮುಂಗೋರೆಗಳ ಮಸೆದೊಡನೆ ರಕ್ಕಸನಬೆನ್ನಟ್ಟಿ ಬರಸೆಳೆದು ಸದೆದೊರಗಿಸಿಚೆನ್ನಾಗಿ ಧರಣಿಯನು ತಂದು ಸಲೆ ರಕ್ಷಿಸಿದೆಹನ್ನೆರಡು ಪೆಸರವನೆ ಶರಣೆಂಬೆನು3 ಹೇಮಕಶ್ಯಪನೆಂಬ ನಾಮಜನ ಸುತನೊರ್ವನಾ ಮಹಾಘನವೆಂದು ನೆನೆಯುತಿರಲುತಾಮಸದ ಖಳ ತನ್ನ ತನುಜನನು ಮಥಿಸುತಿರೆರಾಮನನು ತೋರೆಂದು ಬಾಧಿಸುತಿರೆಧೂಮಜ್ವಾಲೆಗಳೊಡನೆ ಭುಗುಭುಗಿಲು ಛಿಟಿಲೆನುತಆ ಮಹಾ ರಕ್ಕಸನ ಪೊಡೆಯ ಸೀಳಿಪ್ರೇಮದಲಿ ಪ್ರಹ್ಲಾದಗೊಲಿದು ಪಟ್ಟವನಿತ್ತೆಸಾಮಜಾರಿಯ ವದನ ಶರಣೆಂಬೆನು 4 ಬಲಿಯಧ್ವರದ ಸಾಲೆಗೊಂದು ವೇಷವನಾಂತುಸಲೆ ಬಂದು ಧರೆಯ ಮೂರಡಿಯ ಬೇಡೆಒಲಿದು ಇತ್ತಪೆನೆನಲು ಧಾರೆಯನೆರೆಯಲಸುರಕುಲಗುರುವು ಜುಳಿಗೆಯೊಳು ತಡೆದು ನಿಲಲುಸಲಿಲ ವರ್ಜಿತ ನಯನನನು ಮಾಡಿ ಆಕಾಶನೆಲವೆರಡು ಪಾದವನ್ನಳೆದ ಬಳಿಕತಲೆ ಮೇಲೆ ಇರಿಸೆನಲು ತಳಕಿಳಿಸಿ ಅವನ ಬಾ-ಗಿಲ ಕಾಯ್ದ ವಾಮನನೆ ಶರಣೆಂಬೆನು 5 ರೇಣುಕೆಯ ಬಸುರಿನಲಿ ಜನಿಸಿ ಪಿತನಾಜ್ಞೆಯನುಮಾಣಬಾರದು ಎಂಬ ಮತವ ಪಿಡಿದುಕ್ಷೂಣವಿಲ್ಲದೆ ತಾಯ ಶಿರವರಿದು ತಂದೆಯನುಪ್ರಾಣಹತ್ಯವ ಮಾಡಿದರ ಕುಲವನುಕ್ಷೋಣಿಗೆರಗಿಸಿ ಕಾರ್ತವೀರ್ಯಾರ್ಜುನನ ಮಡುಹಿಜಾಣತನದಲ್ಲಿ ಭೂದಾನಗಳ ಭೂಸುರರಕಾಣುತಲೆ ಕರೆಕರೆದು ಕೊಟ್ಟೆಯೈ ನೀನು ಪೂಬಾಣಜನಕನೆ ರಾಮ ಶರಣೆಂಬೆನು 6 ಸೀತೆಯನು ಕದ್ದು ಒಯ್ದವನ ಕೊಲ್ಲುವ ಭರದಿಭೂತಳದ ಕಪಿಗಳನು ಕೂಡಿಕೊಂಡುಸೇತುವೆಯ ಕಟ್ಟಿ ಶರನಿಧಿ ದಾಟಿ ಬರಲಾಗಭೂತಗಣ ಸಂತತಿಯು ನಡುನಡುಗುತಿರಲುಚೇತನದ ರಾವಣೇಶ್ವರ ಕುಂಭಕರ್ಣ ಸ-ತ್ತ್ವಾತಿಶಯ ರಕ್ಕಸರ ಇರಿದೊರಗಿಸಿಮಾತು ಲಾಲಿಸಿ ವಿಭೀಷಣಗೆ ಪಟ್ಟವನಿತ್ತದಾತ ರಘುನಾಥನೇ ಶರಣೆಂಬೆನು 7 ಶಕಟ ಕುಕ್ಕುಟ ಧೇನುಕಾಸುರರ ಪೂತನಿಯಬಕ ವತ್ಸಹಕ ವೃಷಾಸುರ ಮುಖ್ಯರಪ್ರಕಟದಿಂದರಿದು ಕರಿಯನು ಸೀಳಿ ತನಗೆ ಸಂ-ಮುಖರಾದ ಮಲ್ಲರನು ಇರಿದೊರಗಿಸಿಮುಕುರ ದಂತ್ಯದ ಹಮ್ರ್ಯದೊಳಗಿಂದ ಕಂಸನಪುಕಪುಕನೆ ತಿವಿದವನನಿರಿದೊರಗಿಸಿಸಕಲವೆಸೆದಿರ್ದ ಮಧುರಾಪುರವ ಉಗ್ರಸೇನಕಗಿತ್ತ ಕೃಷ್ಣನೇ ಶರಣೆಂಬೆನು 8 ಮೂರು ಪುರದಬಲೆಯರ ವ್ರತಗಳನೆ ಕೆಡಿಸಲಿಕೆಬೇರೊಂದು ಅಶ್ವತ್ಥ ವೃಕ್ಷವಾಗಿನಾರಿಯರ ವ್ರತಭಂಗಗೆಯ್ಯಲಾ ದೆಸೆಯಿಂದಊರುತ್ರಯವದು ತಿರುಗುವುದು ನಿಲ್ಲಲಾಗನೀರ ಮಸ್ತಕದಲ್ಲಿ ಧರಿಸಿದನ ಕರವಿಲ್ಲನಾರಿಯೊಳು ನಾರಾಯಣಾಸ್ತ್ರವಾಗಿಘೋರತನವೆತ್ತ ತ್ರಿಪುರದ ಕೀಲ ಪರಿದ ಮದನಾರಿ ಸಖ ಬುದ್ಧನೇ ಶರಣೆಂಬೆನು 9 ಮದವೆತ್ತ ರಕ್ಕಸರು ಮಹಿಯೊಳಗೆ ಹೆಚ್ಚಲುತ್ರಿದಶಾಂತ ನಡನಡನೆ ನಡುಗುತಿರಲುಬೆದರಬೇಡೆನುತ ಅಭಯವನಿತ್ತು ಮುದದಿಂದಸುಧೆಯೊಳಗೆ ಬಂದು ಜನಿಸಿಕುದುರೆವಾಹನನಾಗಿ ಕುಂಭಿನಿಯ ಮೇಲೆ ತನಗಿದಿರಾದ ರಾವುತರನಿರಿದೊರಗಿಸಿಮೊದಲ ಭಾಷೆಯನು ದಿವಜರಿಗಿತ್ತೆ ಬೇಗದಲಿಚದುರ ಕಲ್ಕ್ಯವತಾರ ಶರಣೆಂಬೆನು10 ಇಂತು ದಶ ಅವತಾರಗಳನೆತ್ತಿ ರಕ್ಕಸರಸಂತತಿಯನೊರಸಿ ಭೂಭಾರವಿಳುಹಿಕಂತುಪಿತ ತಿರುವೆಂಗಳೇಶ ತಿರುಮಲೆಯೊಳಗೆಚಿಂತಿಸುವ ಭಕ್ತರನು ಪಾಲಿಸುತಲಿದಂತಿರಾಜನ ಪೊರೆದು ದಾನವಾಡಿಗೆ ಬಂದುನಿಂತಾದಿಕೇಶವನೆ ಶರಣೆಂಬೆನು 11
--------------
ಕನಕದಾಸ
ರಕ್ಷಿಸೋಯನ್ನ ರಕ್ಷಿಸೋ ರಕ್ಷಿಸೋ ಬೇಗ ಉಪೇಕ್ಷಿಸದಲೆ ಜಲ ಜಾಕ್ಷ ಯನ್ನ ಮೊರೆ ಪಕ್ಷಿವಾಹನ ದೊರೆ ಪ ವಾರಿಧಿ ಮತ್ಸ್ಯಾವತಾರದಿ ಧರಿಸಿ ಪೊಕ್ಕು ಘೋರದೈತ್ಯನ ಕೊಂದು ಇನ್ನು ಚಾರು ಚರಿತ ವಿಸ್ತಾರ ಶೃತಿಗಳನು ವಾರಿಜಾಸನಗಿತ್ತ ವರದ ಜಗನ್ನಾಥ 1 ವರಕೂರ್ಮನಾಗಿ ಮಂದರಗಿರಿ ಪೊತ್ತು ನಿರ್ಜರರಿಗೆ ಸುಧೆಯನುಣಿಸಿ ಹರುಷದಲಿ ಕರುಣಿಸೋಯಂದರೆ ಕಠಿಣತ್ವ ವಹಿಸುವರೇ ಪರಮ ಪುರುಷ ನೀನು ಭಜಕರ ಕಾಮಧೇನು 2 ಧರೆಯ ಕದ್ದು ಒಯ್ದವನ ಕೋಪದಿ ಘನತರ ಕೋರೆಯಲಿ ಸೆಳದೆ ದನುಜಹರ ವರಾಹನಾದ ಶ್ರೀ ವತ್ಸಲಾಂಛನ ದೇವ ಶರಣಜನ ಮಂದಾರ ಶರನಿಧಿ ಗಂಭೀರ 3 ಗರುಡಗಮನ ಶ್ರೀ ಹರಿ ಸರ್ವೋತ್ತಮನೆಂಬ ತರುಳನ ತಂದೆಯ ತಾಮಸದಿ ಪರಿಪರಿಹಿಂಸೆಯ ಪಡಿಸುತಿರಲು ನರಹರಿ ರೂಪತೋರಿ ಪ್ರಹ್ಲಾದಗೊಲಿದ ಧೊರೆ 4 ಬಲಿಯದಾನವು ಬೇಡಿ ಬ್ರಹ್ಮಾಂಡ ಭಾಂಡವು ಅಳೆದು ಮೂರು ಪಾದದೊಳಗೆ ಮಾಡಿ ತುಳಿದವನ ಪಾತಾಳಕಿಳಿಯಲು ವಾಮನ ಬಲಭೇದಿ ಸನ್ನತ ಪಾಲಿಸೋ ಪ್ರಖ್ಯಾತ 5 ಪರಶುರಾಮ ಬಾಹು ಬಲದಿ ಸಕಲ ರಾಜರನೆಲ್ಲ ಗೆದ್ದು ಸುಸ್ಥಿರ ಮೂರ್ತಿ ಧುರದಿಂದ ಭೂಮಿ ಭೂಸುರರಿಗೇ ಧಾರೆಯ ನೆರೆದ ಶ್ರೀಮದನಂತ ನಿರತದಿ ಭಗವಂತ 6 ಅನಿಮಿಷರೊಡೆಯ ಶರಣು ಶರಣೆನುತ ರಾವಣನನು ಜನು ವಿಭೀಷಣನು ಬರಲು ಘನದಿ ಪಂಕ್ತಿ ಕಂಧರನ ಜಯಿಸಿ ಲಂ- ಇನಕುಲ ಪಾವನ 7 ಬಲದು:ಶಾಸನ ಸೀರಿಸೆಳಿಯೇ ದ್ರೌಪದಿ ಮನದಲಿ ಕಾಮಿತಾರ್ಥ ಫಲದಾಯಕ ಮಾನವ ರಕ್ಷಿಸೆಂದು ಸ್ತುತಿಸಲು ಪೊರೆದೆ ಹಲಧರಾನುಜ ಮುದದಿ 8 ಅಂಗಜ ಪಿತ ತ್ರಿಪುರಾಂಗನೆಯರ ವ್ರತ ಭಂಗಮಾಡಿದೆ ಹಿಂಗದಲೇ ಮಂಗಳಮಹಿಮ ಕೃಪಾಂಗ ಗಂಗೆಯನು ಪಾದ 9 ಚಲುವ ಕುದುರೆಯನೇರಿ ಕಲ್ಕಿಕಯ್ಯೊಳು ಖಂಡೆಯ ಪಿಡಿದು ಝಳಪಿಸುತ ಕಲುಷಾತ್ಮರೆಲ್ಲರ ಖಂಡಿಸಿ ಧರ್ಮವು ಪರಿಪಾಲನೆಮಾಳ್ಪ ಶ್ರೀ ಭೂದುರ್ಗಾಧಿಪಾ 10 ಪಾವನಚರಿತ ಕೃಪಾವನ ರಾಶಿ ಶ್ರೀ ದೇವಕೀಸುತ `ಹೆನ್ನೆಪುರೀಶ’ ದೀನ ದೇವೋತ್ತಮ ದೀನ ಬಾಂಧವ ವೃಂದಾವನ ನಿಲಯಾನಂದ ಸುಂದರಕಾಯಾ 11
--------------
ಹೆನ್ನೆರಂಗದಾಸರು
ಮಲಗಿ ಎದ್ದನು ರಂಗ, ಮಕ್ಕಳ ಮಾಣಿಕ ಕೃಷ್ಣ |ಛಲ ಹಿಡಿದನು ನೋಡೆ ಮೊಲೆಕೊಡೆ ಕೃಷ್ಣಗೆ ಪಜಲದೊಳು ತಮನ ಮರ್ದಿಸಿ ಅಂದು ಮತ್ಸ್ಯನಾಗಿ |ಬಲುಗಿರಿಯ ನೆಗಹಿ ಮರೆಮಾಡಿ ಕೂರ್ಮನಾಗಿ ||ನೆಲನ ಒಯ್ದವನ ಕೊಲುವೆನೆಂದು ವರಹನಾಗಿ |ಬಲುಭಕ್ತಿಗಾಗಿ ಕಂಬದಿ ನಾರಸಿಂಹನಾಗಿ 1ಚಿಕ್ಕ ರೂಪದಿಂದ ಬಲಿಯ ದಾನವ ಬೇಡಿ |ಉಕ್ಕಿನ ಕೊಡಲಿಯ ಪಿಡಿದ ಪರಶುರಾಮ ||ಮಿಕ್ಕಿದ ತಲೆಯ ಚೆಂಡಾಡಿದ ಶ್ರೀರಾಮ |ಸೊಕ್ಕಿದ ಕಂಸನ ಕೊಲುವೆನೆಂದ ಕೃಷ್ಣ 2ಬಲು ಪತಿವ್ರತೆಯರ ವ್ರತವನಳಿದಬುದ್ಧ|ಕಲಿಯಾಗಿ ಖಡಗುವ ಪಿಡಿದು ಕುದುರೆ ಏರಿ ||ಒಲಿದು ಭಕ್ತರನೆಲ್ಲ ಸಲಹುವೆನೆಂತೆಂದು |ಚೆಲುವ ಪುರಂದರವಿಠಲ ತೊಟ್ಟಿಲೊಳು 3
--------------
ಪುರಂದರದಾಸರು