ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಹೇಳಿದರೇನು ಹೀನ ಮನಕ | ತಾನು ಎಚ್ಚರ ಹಿಡಿಯ ದನಕಾ ಪ ಬೂದಿಯೊಳಗ ಹೋಮ ಮಾಡಿದಂತೆ | ಬೋಧಾನುಗೃಹ ಕಳವದು ಮರೆತಕೆ 1 ಹರಿ ಕೀರ್ತನೆ ಇರಲಿಲ್ಲಾ | ಬರಡು ಮಾತಿಗೆ ಸುಖ ಪಡುದಲ್ಲಾ 2 ಒಮ್ಮೆಯಾದರೂ ಹರಿ ಹರಿಯಂದು | ಝಮ್ಮೆನೆವೆ ಪಶ್ಚಾತಾಪ ಬಾರದೆಂದು 3 ಗಾಳಿಯಂತೆ ಓಡಾಡುವದು ನೋಡಿ | ಕಾಲೂರಿ ನಿಲ್ಲದು ಮತಿಗೇಡಿ 4 ತಂದೆ ಮಹಿಪತಿ ದಯವಾಗದನಕ | ಒಂದು ಹಿಡಿಯದು ಸ್ವಹಿತ ವಿವೇಕಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬೆಳೆಗಿಂಝಾವದಿ ಬಾರೊ ಹರಿಯೆ ನಿನ್ನ ಕಳೆಕಳೆ ರೂಪ ನೋಡುವೆ ಮುಕುಂದ ಪ. ಭಕ್ತರ ಭಯ ನಿವಾರಣನೆ ಭಕ್ತಿಲಿ ಕರೆವೆ ಗೋವಿಂದ ನಿನ್ನನೆ ಭಕ್ತವತ್ಸಲ ನೀನಲ್ಲವೇ ಸ ದ್ಭಕ್ತರ ಸಲಹೆ ಕಂಕಣ ಧರಿಸಿಹನೆ 1 ಶ್ರೀ ತುಳಸಿಯ ವನಮಾಲ ಶ್ರೀ ಕೃಷ್ಣ ನಿನ್ನ ದರ್ಶನದ ಲಾಭ ಶ್ರೀಶನೆ ಬಯಸುವೆ ದೇವ ಶ್ರೀರಮೆಯರಸ ದಯಪಾಲಿಸೊ ಕೃಷ್ಣ 2 ಒಮ್ಮೆಯಾದರೂ ತೋರೊ ರೂಪ ಎನ್ನ ಕರ್ಮ ಖಂಡನವಹ ತೆರೆದೊಳು ಶ್ರೀಪ ಬೊಮ್ಮನೈಯ್ಯ ನಿನ್ನ ನೋಡ್ವೆ ಸುಮ್ಮಾನವ್ಯಾಕೊ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ಸುಮ್ಮನಿಹುದು ನ್ಯಾಯವೇ ಪ ದಮ್ಮಯ್ಯ ಪೊರೆಯೆನಲು ಒಮ್ಮೆಯಾದರೂ ಎನ್ನ ದುಮ್ಮಾನವೇನೆಂದು ನಮ್ಮಯ್ಯ ಕೇಳಲಿಲ್ಲ ಅ.ಪ ಸಣ್ಣ ಬಾಲಕನೊಬ್ಬ ಕಣ್ಣೀರ ಸುರಿಸಲು ಪುಣ್ಯ ಲೋಕವನಿತ್ತಮ್ಮಾ ಕಣ್ಣುಕಾಣದೆ ಗೊಂಡಾರಣ್ಯಮಧ್ಯದಿ ನಾನು ಬಣ್ಣಿಸಿ ಕರೆದರೂ ಕಣ್ಣೆತ್ತಿ ನೋಡಲಿಲ್ಲವಮ್ಮಾ 1 ಪರಿದೋಡಿದನಮ್ಮ ನಮ್ಮಯ್ಶ ದುರಿತವಾರಿಧಿಯಲಿ ಕೊರಗುತಲಿಹ ಎನ್ನ ಅರಿತು ಅರಿಯದಂತೆ ಇರುವನಲ್ಲ ಇಂದಿರಮ್ಮ 2 ಮೃತಿಯ ವೇಳೆಯೊಳೊಬ್ಬ ಸುತನಕರೆಯಲಾಗ ಹಿತದಿ ಸೌಖ್ಯವನಿತ್ತನು [ಕೇಳಮ್ಮಾ] ಮಾಂಗಿರಿರಂಗ ಪತಿತಪಾವನಾಯೆಂದು ನುತಿಸಿ ಬೇಡಿದರೂ ಸಂಗತಿಯೇನೊ ಎನಲಿಲ್ಲ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್