ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೊಲ್ಲತಿಯರ ಕಣ್ಣದೃಷ್ಟಿ ಮಗಗಾಯಿತಮ್ಮ ಬಹು ನಲ್ಲೆಯರು ಬಂದು ಮೆಚ್ಚುಮದ್ದು ಮಾಡಿ ಹೋದರಮ್ಮ ಪ. ಅಂಗಕೆ ಒಳಿತಿಲ್ಲವಮ್ಮ ಕಂಗಳು ಮುಚ್ಚಲೊಲ್ಲನಮ್ಮ ಹೆಂಗಳ ನೋಡುತಲೆ ಚಟ್ಟಿಕ್ಕಿದನಮ್ಮ ತಂಗಿ ನೀರು ಎರೆದೆವಮ್ಮ ತುಂಗಗಾತ್ರ ಎದ್ದು ನಮ್ಮ ಭಂಗಪಡಿಸುತ ಬಾಯ ತೆರೆದನಮ್ಮ 1 ನೀನು ಮೈಯ ನೋಡಮ್ಮ ತನುವು ಕಿರಿದಾಯಿತಮ್ಮ ಮೊಲೆಯಾನ ಕೊಡಲಿ ತಾಯ ನೋಡನಲ್ಲಮ್ಮ ಅನ್ನವ ಕೊಳಲೊಲ್ಲನಮ್ಮ ಅತಿಭೀತನಾದ ದೈತ್ಯ ಕನ್ನೆ ಮೊಲೆಹಾಲನುಂಡು ಬೆಳೆದನಲ್ಲಮ್ಮ 2 ನಮ್ಮ ಮಾತು ಕೇಳನಮ್ಮ ಒಮ್ಮೆಗೆ ಮೈಹೊದಿಯ ನಮ್ಮ ಸುಮ್ಮನೆ ಘೊರಸುತಾನೆ ಮಲಗನಲ್ಲಮ್ಮ ಬೊಮ್ಮಜೆಟ್ಟಿಗೆ ಮಾಡಿದೆವಮ್ಮ ಒಮ್ಮೆಗಿಷ್ಟೆಲ್ಲವಾಯಿತಮ್ಮ ನಮ್ಮ ಹಯವದನಗಿನ್ನು ಅಂಜಿಕಿಲ್ಲಮ್ಮ 3
--------------
ವಾದಿರಾಜ
ದುರುಳ ಬುದ್ಧಿಯನು ತೋರಿಸಬೇಡವೊ ಪ ನರವರರಿಗೆ ಇದು ಸರಿಯಲ್ಲವೋ ಕೇಳ್ ಅ.ಪ. ತುಡುಗ ಬುದ್ಧಿಯಿದ ಕಡೆಗಾಲಕೆ ಸರಿ ನುಡಿಗೆದುರಿಲ್ಲವೋ ನಿನಗಿಂದು ಕಡು ಪತಿವ್ರತೆಯರು ಬಿಡುವ ನಯನಜಲ ಉಡಿಯಲಿ ಕಟ್ಟಿದ ಉಜ್ವಲ ಶಿಖಿಯೊ 1 ಧರ್ಮಪಥದಿ ಸಂಚರಿಸುವ ಸುಜನರ ಮರ್ಮವ ಭೇಧಿಸೆ ಮಾತಿನಲಿ ಒಮ್ಮೆ ಅವರು ಬಿಸಿರುಸಿರನು ಚಿಮ್ಮಿಸೆ ಒಮ್ಮೆಗೆ ನಿನ್ನಯ ಕುಲಕ್ಷಯ ನಿಜವು 2 ಮತ್ತನಾದ ನಿನಗೆತ್ತಣದೊ ಇನ್ನು ಯುಕ್ತಾಯುಕ್ತ ವಿವೇಚನೆಯು ಭಕ್ತವತ್ಸಲ ಶ್ರೀ ಕರಿಗಿರೀಶನ ಚಿತ್ತ ಸತ್ಯವೆಂದು ತೊಳಿಯೊ ಮೂಢ 3
--------------
ವರಾವಾಣಿರಾಮರಾಯದಾಸರು
ನಮ್ಮವ್ವ ಈಕಿ ನಮ್ಮವ್ವ ಒಮ್ಮನ ಕೂಲ್ಯಕಿ ನಮ್ಮವ್ವ ಪ ಇಮ್ಮನ ಸಜ್ಜಿಗೆ ಒಮ್ಮೆಗೆ ತಿಂದು ಸುಮ್ಮನೆ ಕೂತಳ ಗುಮ್ಮವ್ವ ಅ.ಪ ಆರುಮೂರುಮರ ರೊಟ್ಟಿಗಳು ಒಂದೆ ಸಾರಿಗೆ ಮುದ್ದೆ ಮಾಡಿ ನುಂಗಿದಳು ದಾರಿಗೆ ತೋರದಂತೆ ಎಂಟು ಭಾಂಡೆ ಅನ್ನ ವಾರೆಲಿ ಕೂತು ಸೂರೆ ಮಾಡಿದಳು 1 ಎತ್ತಿ ತುಪ್ಪದ ಮೂರು ಡಬ್ಬಿಗಳು ಕುತ್ತಿಗ್ಗೆ ಬೀಳಹಾಗೆ ಕುಡಿದಳು ಹತ್ತ್ಹೆಡಿಗ್ಹೋಳಿಗೆ ಪತ್ತೆಯಿಲ್ಲದೆ ತಿಂದು ಮೆತ್ತಗೆ ಸುತ್ತಿಕೊಂಡು ಮಲಗಿದಳು 2 ಒಡಲನಿಲ್ಲದೆ ಕಾಯುವಳು ಇವಳು ಇಡೀ ಬ್ರಹ್ಮಾಂಡವ ನುಂಗಿದಳು ಪಿಡಿದೊಕ್ಕುಡಿತೆಲಿ ಕಡಲೇಳನು ಕುಡಿದೊಡೆಯ ಶ್ರೀರಾಮನ ಕೂಡಿದಳು 3
--------------
ರಾಮದಾಸರು
ಸುಮ್ಮನೆ ದೋರೈಯ್ಯಾ | ರಮ್ಮೆಯ ಕರದಲಿ | ಒಮ್ಮೆಗೆ ಅಗಲದೆ ನಮಿಸಿಕೊಳುತಿಹ ಪಾದಾ ಪ ಇಳೆಯ ನೆರೆ ಬೇಡುವ ನೆವದಲಿ ಬಂದು ಬಲಿಗುದ್ಧರಿಸೆಂದು | ಹಲವು ಕಾಲದಿ ಶಿಲೆಯಾದಂಗನೆಗೆ ಸತಿಗತಿ ನೀಡಿದ ಪಾದಾ 1 ಉರಗಾಶರ ಬರೆ ಉಂಗುಟ ಲೋತ್ತಿನರ ನುಳಹಿದ ಕೀರ್ತಿ | ಸುಯೋಧನನುರುಳಿಸಿಗೆಡಹಿದಾ ಪಾದಾ 2 ತಂದೆ ಮಹಿಪತಿ ಪ್ರಭುದಯದಿಂದಲಿ ಎಂದೆಂದು | ಮುನಿಜನ ನಯನ ಚಕೋರರ ಚಂದಿರವಾಗಿಹ ಪಾದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಂದಿಗೆ ಬಹನೆ ಕೃಷ್ಣ ಮಂದಸ್ಮಿತಾನನೆ |ಅಂದದಿಂದಿರುವ ತನ್ನಯ ವೃಂದಾವನ ಬಿಟ್ಟಿಲ್ಲಿಗೆ ತವಕದಿ ಪತರುಣೀ, ಗೋಕುಲದೊಳಗಿಹ ಸಖಿಯರು ಎಂಥಾ ಧನ್ಯರೆ |ಪರಮಾತ್ಮನ ಪೊಂದಿ ಇತರ ಕರಕರಿ ಅರಿಯಳೆ ||ಹರಿಯಿಂತೊಲಿದಿರಲವರೇನು ಸುರಲೋಕದ ಸ್ತ್ರೀಯರೇ |ಪರಿಪರಿ ಸುಖ ಸಾಗರದೊಳಗಿರುವರುಜರಿದುಮಧುರೆಯಲ್ಲಿಹದೆಂದು 1ಅಮ್ಮೆಏನೊಳ್ಳೆವರವರಾಳ್ವರು ಸಮ್ಮಾತಾಂತಲ್ಲವೆ |ನಮ್ಮನೆಯವರವರಂತೆ ಸುಮ್ಮನೆ ಇರುವರೆ ||ಬೊಮ್ಮನ ಜನಕೆಮೊಲಿಸಿದರೆ ಒಮ್ಮೆಗೆ ಪೇಳಿರೆ |ಸಮ್ಮಸಿ ಕೊಳ್ಳಲು ಮನದಿ ಸುಕರ್ಮದ ಪ್ರಬಲಿಗೆ ಘಮ್ಮನೆ ಬಹಸಖಿ 2ಅಲ್ಲೀ ಸ್ತ್ರೀಯರಕಿಂತಿತಿಶಯ ಚಲ್ವೆರ್ನಾವಲ್ಲವೆ |ಸುಳ್ಳಲ್ಲಿಂತಾಭರಣಾಂಬರವೆಲ್ಲಿ ಕಂಡಿಹರೆ ||ಗೊಲ್ಲಿತಿಯರು ನಮ್ಮಂದದಿ ಸೊಲ್ಲಿಸಬಲ್ಲರೆ |ಮಲ್ಲಮರ್ದನ ಪ್ರಾಣೇಶ ವಿಠಲೆಮ್ಮನು ಬಿಟ್ಟೆಲ್ಲಿ ಪೋಗನು 3
--------------
ಪ್ರಾಣೇಶದಾಸರು