ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋ ಜೋ ಜೋ ಗುಂಡ ಪರಮಪ್ರಚಂಡ ಜೋ ಜೋ ಜೋ ಗುಂಡ ಸುರಚಿರದಂಡ ಪ ಜೋ ಜೋ ಜೋ ದೊಡ್ಡ ಕರಿಯಕಲ್ಗುಂಡ ಜೋ ಜೋ ಜೋ ಮದ್ದನರೆಯಚ್ಚಗುಂಡ ಅ.ಪ ದುಂಡು ಮಲ್ಲಿಗೆಗಿಂತ ಮೃದುವಾದ ಗುಂಡಾ ಕೆಂಡ ಸಂಪಿಗೆಗಿಂತ ಚೆಲುವಾದ ಗುಂಡಾ ಪುಂಡರೀಕಕ್ಕಿಂತ ಚೆಲುವಾದ ಗುಂಡಾ ಮೊಂಡ ಮೂಕರಕಯ್ಯ ಕೋದಂಡಗುಂಡಾ 1 ಒಬ್ಬಿಟ್ಟು ಹೂರಣವರೆಯುವ ಗುಂಡಾ ತಬ್ಬಿಬ್ಬಾಡುವರನು ಕಡುಗುವಾ ಗುಂಡಾ ರುಬ್ಬಿ ರುಬ್ಬಿ ದೋಸೆ ಯೀಯುವಾ ಗುಂಡಾ ಕೊಬ್ಬಿದ ಜನವನು ದಬ್ಬುವಾ ಗುಂಡಾ 2 ಪರಿಪರಿ ಬಂಧನವರಿಯದ ಗುಂಡಾ ಉರುಳಿಸಿದಲ್ಲಿಯೇ ನಿದ್ರಿಪ ಗುಂಡಾ [ವರಭಕ್ತಾವಳಿಗೆ ಸುಖವೀವಗುಂಡಾ] 3 ನೀನಿಲ್ಲದಿರುವ ಮನೆಗಳಿಲ್ಲ ಗುಂಡಾ ನೀನಿರುವಲ್ಲಿ ತಿಂಡಿಗಳುಂಟು ಗುಂಡಾ ಕಾನನದೊಳಗಿದ್ದು ಕರಗದ ಗುಂಡಾ ಮಾನವ ಗಣಕ್ಕೆಲ್ಲಾ ಬೇಕಾದ ಗುಂಡಾ4 ಒರಳುಕಲ್ಲಿನ ಮೇಲೆ ನೇಯುವಾ ಗುಂಡಾ ತರುಣಿಯ ಕರದೊಳು ನಲಿಯುವಾ ಗುಂಡಾ ವರ ದುಕೂಲಂಗಳ ಬಯಸದ ಗುಂಡಾ ವರದ ಮಾಂಗಿರಿರಂಗನೆನಿಸುವ ಗುಂಡಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮುದ್ದು ಕೃಷ್ಣಯ್ಯನ ನೋಡಾನ ಬನ್ನಿ ಪ ಕೃಷ್ಣಗೆ ಪೂಜೆಯ ಮಾಡಾನ ಬನ್ನಿ ಅ.ಪ ಚಿನ್ನದ ತೊಟ್ಟಿಲಲ್ಲಿ ಚೆನ್ನಾಗಿ ಕುಂತವ್ನೆ ಚೆನ್ನ ಚೆಲುವನಕ್ಕೋ ನಗುತವ್ನೇ ಕನ್ನೆ ರಾಧಮ್ಮಗೆ ಸನ್ನೆಯ ಮಾಡುತವ್ನೆ ಬನ್ನಿ ಬನ್ನಿ ಎಂದು ಕರಿತವ್ನೆ 1 ಹುಬ್ಬಹಾರಿಸ್ತವ್ನೆ ಮಬ್ಬ ತೋರಿಸ್ತವ್ನೆ ಅಬ್ಬಬ್ಬ ಇವನಾಟ ಬಲ್ ತಮಾಸೆ ಒಬ್ಬಿಟ್ಟು ಬೇಕಂತ ಕೈಲೇ ತೋರಿಸ್ತಾನೆ ಅಬ್ಬ ಇವ ಏಳೋದು ಒಂಥರ ಬಾಸೆ 2 ಎಂಥ ಮುದ್ದಿನ ಮೊಗ ಚೆಂದುಳ್ಳಿ ಚೆಲುವ ಇಂಥವ್ನ ನೀವೆಲ್ಲೂ ಕಂಡಿಲ್ಲ ಬನ್ರೋ ನಿಂತು ನೋಡಬೇಕಿವಗೆ ಆಲು ಮೊಸರು ಬೆಣ್ಣೆ ಹಣ್ ತುಂಬಿದ ಗಂಗಾಳ ತನ್ರೋ 3 ಕಿನ್ನರ ಗೆಜ್ಜೆ ಕೈಗೆ ಔಜುಬಂದಿ ತೊಟ್ಟವ್ನೆ ಕಣ್ಗೆ ಕಪ್ಪಾ ಹಚ್ಚಿ ನವಿಲ್ಗರಿ ತಲ್ಗಿಟ್ಟಿ ಹಣೆ ಉದ್ದಾದ ತಿಲಕ ಇಟ್ಟವ್ನೇ 4 ರಾಮ್ನೂ ನಾನೆಂತಾನೇ ಭೀಮ್ನೂ ನಾನೆಂತಾನೇ ಕಾಮ್ನಪ್ಪನೂ ನಾನೆ ನೋಡಂತಾನೆ ನಿಮ್ಮೂರ ದೇವ್ರಾಣೆ ನಾನೆ ಮಾಂಗಿರಿರಂಗ ನಿಮ್ನ ಕಾಯೋಕ್ಬಂದೆ ಅಂತಾನೆ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್