ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾರ್ಥಸಖನ ನೀ ಪ್ರಾರ್ಥನೆ ಮಾಡಿಕೃ - ತಾರ್ಥನಾಗೋ ಮನುಜಾ ಪ ಸಾರ್ಥಕವಾಗದ ವಾರ್ತೆಯ ಕೇಳಲು ಆರ್ತಿಯು ಒಪ್ಪುದೊ ನಿಜಾ ಅ.ಪ ಏಕಾಂತದಿ ಶ್ರೀಕಾಂತನ ಭಜಿಸಲು ಲೋಕಾಂತರ ಸುಖಪ್ರಾಪ್ತಿ ಭೂಕಾಂತನ ಭಜಿಸಲು ಮಾಕಾಂತನು ಒಲಿಯನು ಲೋಕಾಂತರ ನಿರಯಾಪ್ತಿ 1 ಶಿರಿರಮಣನ ಪದಯುಗಳವ ಭಜಿಸಲು ದೊರೆವೋದೀಗ ಮೋಕ್ಷ ನರಜನ ಗುಣಗಳ ವರಣನೆ ಮಾಡಲು ನಿರಯ ದುಃಖ ಪತ್ಯಕ್ಷ 2 ವೀತ ದೋಷ ನಿರ್ಭೀತ ಗುರುಜಗ ನ್ನಾಥ ವಿಠಲರೇಯ ಮಾತು ಕೇಳೆ ನಿಜ ಮಾತೆಯ ತೆರದಲಿ ದೂತನು ಪಿಡಿವನು ಕೈಯ್ಯಾ 3
--------------
ಗುರುಜಗನ್ನಾಥದಾಸರು