ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶುಭ | ಮಂಗಳ ಶ್ರೀ ಲಕ್ಷ್ಮೀ ನರಸಿಂಹಗೇ | ಸಹಸ್ರ | ಮಂಗಳ ಭಕ್ತರ ಸಲಹುವಗೆ ಪ ಶರಣ ಪ್ರಲ್ಹಾದಗೆ ಪಟ್ಟಾಭಿಷೇಚನ | ಕರುಣದಿಮಾಡಿಸಿಸುರದಿಂದಲಿ | ಅರಸುತನವಕೊಟ್ಟು ಭಕ್ತಾಗ್ರಣಿ ಮಾಡಿ ವರಮುಕ್ತಿಗಳ ಸೂರಾಡಿದವಗೆ | ಮಂಗಳ .... 1 ಎನ್ನನು ನೆನೆಯಲಿ ನೆನೆಯದವರಿರಲಿ ಒಮ್ಮೆ | ನಿನ್ನ ನೆನೆದು ಘನ ಚರಿತೆಯನು || ಮನ್ನಿಸಿ ಒದುವ ಕೇಳುವ ಮನುಜರ | ಚೆನ್ನಾಗಿ ಕಾಯ್ವೆನೆಂದಭಯ ವಿತ್ತವಗೆ ಮಂಗಳ ..... 2 ಅಂದಿಗಿಂದಿಗೆ ತನ್ನ ದಾಸರಾದಾಸನಾ | ಮಂದಿರ ಸಾರಿದವಗೆ ದಯದೀ || ಚಂದಾಗಿ ತನ್ನ ಭಕುತಿ ಎಚ್ಚರವ ನೀವ | ತಂದೆ ಮಹೀಪತಿ ಸುತ ಪ್ರೀಯಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು