ಬೋಧ ನಡತೆಯಲಿ ಕತ್ತೆಯಾದೆ ಪ
ನೀರಲಿ ನೆರಳನೆ ನೋಡುವೆ ಹಣೆಗೆ ಗಂಧವ ತೀಡುವೆಹಾರ ತುರಾಯ್ಗಳ ಸೂಡುವೆ ಮೋರೆಯನೆತ್ತೆತ್ತ ಮಾಡುವೆ1
ಜಾರೆಯರೊಡನೆ ಬೆರೆವೆ ಕಿಸಿ ಕಿಸಿ ಹಲ್ಲನೆ ಕಿರಿವೆಬಾರದ ಪದವ ಒದರುವೆ ಹಮ್ಮಿನಿಂದೆಲ್ಲೆಲ್ಲಿ ಮೆರೆವೆ2
ಬಿಡುವೆನು ಗುರುಪಾದವೆಂಬೆ ಬೇಡಿತಿಯ ಕೂಡುವೆನೆಂಬೆಸುಡುವೆನು ಕಪನಿಯನೆಂಬೆ ಲಿಂಗವ ಕಟ್ಟಿರಿ ಎಂಬೆ 3
ವಿಧ ವಿಧ ವೇಷವ ಧರಿಸಿ ಬಹು ಜಾತಿಯಲಿ ಕೈ ಬೆರಳಿರಿಚಿದಾನಂದ ನೀ ಮೆರೆಸಿ ಬಾಳುವೆ ದೊಡ್ಡವನೆನಿಸಿ 4