ನಗುವು ಬರುತಿದೆ ಎನಗೆ ನಗುವು ಬರುತಿದೆಬಿಗಿದು ಶ್ವಾಸ ಮೂಗ ಹಿಡಿದು ನಿಟಿಲ ನೋಡುವವರ ಕಂಡು ಪ
ಹಡೆದ ದೈವ ಹತ್ತಿರಿರಲು ನೋಡಿದರು ನೋಡದಂತೆಮೃಡನು ತಾನೆ ಇರಲು ಮೂಗ ಕೊನೆಯ ನೋಡುವವರ ಕಂಡು 1
ಹೊಳೆಯುತಿಹುದು ಪರಬ್ರಹ್ಮ ನಾನಾ ರೂಪಗಳನು ತಾಳಿತಿಳಿಯದಲೆ ತನ್ನನೀಗ ಕಣ್ಣು ಮುಚ್ಚುವವರ ಕಂಡು2
ಮನಕೆ ನಿಲುಕದವನು ತಾನೆ ಮಂಗಳವಾಗಿ ಬೆಳಗುತಿರಲುಮನದಿ ಪೂಜೆಯನ್ನು ಮಾಡ್ವ ಮಂದಮತಿಗಳನ್ನು ಕಂಡು3
ತಾನು ದೇವ ನಿಜವಿದಿರಲು ತಂದು ಪ್ರತಿಮೆ ಇಟ್ಟುಕೊಂಡುಏನೋ ಮಂತ್ರ ಒದರುತಿರುವ ಮನುಜರನ್ನು ಕಂಡು ನನಗೆ4
ಯೋಗ ಮಾಡಿಕೊಂಬುದೇನು ಯೋಗಮಾಡುವವನೆ ಇರಲುಯೋಗಿಯಾದ ಚಿದಾನಂದ ತಾನೆ ಸಾಕ್ಷಿಯಾಗಿ ಇರಲು5