ಅಳಬ್ಯಾಡೆಲವೊ ರಂಗಮ್ಮ ನಿನ್ನ
ಇಳಿಯಾರ ನೋಡುತಿದೆ ಗುಮ್ಮ ಪ
ಒದರಿದರೆ ಕೇಳೆಲೆವೊ ತಮ್ಮಾ | ಅದು
ಅದರುತಿದೆ ಬೊಮ್ಮಾಂಡ ತಮ್ಮ
ಬೆದರಿ ದಿವಿಜರು ತಮತಮ್ಮ | ನಿಜ
ಸದನ ಬಿಡುತಿಹರು ನೋಡಮ್ಮ 1
ಬೆರಳುಗುರು ಗಾಯಗಳಿಂದ | ಆ
ದುರುಳರನ್ನ ಜಠರ ತಳದಿಂದ
ಕರುಳು ಮಾಲಿಕೆ ಕಿತ್ತಿ ತಂದ | ತನ್ನ
ಕೊರಳಲಿ ಹಾಕಿಹ ಚಂದ2
ಏಸು ದೈತ್ಯರಾಸಿಗಳನು | ತಾನು
ಮೋಸಗೊಳಿಸಿ ಕೊಲ್ಲುವನು
ದಾಸನೆಂದರೆ ಕಾಮಧೇನು ಸುಮ್ಮಗಿ | ರುವ
ವಾಸುದೇವವಿಟ್ಠಲ ನೀನು 3