ಸ್ವಾಮಿಯ ನೋಡುವ ಬನ್ನಿ ನಮ್ಮ
ಸುಪ್ರೇಮೀಯ ನೋಡುವ ಬನ್ನಿ ಪ
ಎಂಟು ಮೈಯವನಂತೆ ಎಸೆವೈದು ಮುಖವಂತೆ
ಯರ್ದಾಂಗಿಯ ಪಡೆದಿಹನಂತೆ
ಅಂತ ಸ್ವಾಮಿಯ ನೋಡುವ ಬನ್ನಿ 1
ಮಾಧವನೆ ಶರವಂತೆ ಭೂಧರನೆ ಧನುವಂತೆ
ಭೂಮೀಯೇ ರಥವಂತೆ ಸೊಮ ಸೂರ್ಯರೇ
ಗಾಲಿಗಳಂತೆ ಅಂತ ಸ್ವಾಮಿಯ ನೋಡುವ ಬನ್ನಿ 2
ವಾಜಿ ವೇದಗಳಂತೆ ಒದನೊದಗಿ ಬಹವಂತೆ
ಅಮೃತ ಶರಧಿಯ
ಅಲ್ಲಿ ಬತ್ತಳಕೆಯಂತೆ ಅಂತ ಸ್ವಾಮಿಯ ನೋಡುವ ಬನ್ನಿ 3
ಹರಿಯವರ ಶರವಂತೆ ಅಜನು ಸಾರಧಿಯಂತೆ
ದುರುಳ ತಾರಕ ಸುತರ ಪುರವ ಮುರಿದಿಹನಂತೆ
ಅಂತ ಸ್ವಾಮಿಯ ನೋಡುವ ಬನ್ನಿ 4
ಇದುವೆ ಭೂ ಕೈಲಾಸವೆಂದು ತೋಷದಿ
ಬಂದು ಸಾಕಾರವಾಗಿಲ್ಲ ನೆಲಸಿಹರಂತೆ
ಮುದದಿ ಲೋಕಗಳೆಲ್ಲ ಕೈವಶವಂತೆ ಅಂತಸ್ವಾಮಿಯ
ನೋಡುವಬನ್ನಿ 5