ಓ ಎನ್ನಬಾರದೇ ಹರಿಯೆ |
ಶ್ರೀಯರಸನೇ ನೀನೇ ಗತಿಯೆಂದು ಅನ್ಯ ಉ|
ಪಾಯವನರಿಯದ ಬಾಲಕ ಕರೆದರೆ ಪ
ಹಾಲವ ಬೇಡುವ ಮೊರೆಯಿಡಲುಪಮನ್ಯು ಆ |
ಬಾಲಗ ಧ್ವನಿ ದೋರಿದಂತೆ |
ಚಾಲವರಿದು ಸರೋವರದಲಿ ಕರೆದ ಶುಂ|
ಡಾಲಗೆ ಧ್ವನಿ ದೋರದಂತೆ |
ವ್ಯಾಳ್ಯೆಕ್ಕ ಒದಗೆಂದು ರಾತ್ರಿಲಿ ಕರೆದ ಪಾಂ|
ಚಾಲಿಗೆ ಧ್ವನಿ ದೋರಿದಂತೆ |
ಕಾಲಕಾಲಕ ಬಂದು ಮೊರೆಯಿಡೆ ಸುರಮುನಿ |
ಜಾಲಕ ಮೈದೋರಿ ಧ್ವನಿ ದೋರಿದಂತೀಗ 1
ಆವಾಗ ಧ್ವನಿದೋರಿದಂತೆ |
ಗೋವ ಮೇಯಿಸಿ ತೆರಳಲು ಗೊಲ್ಲರೊದರುವ
ಭಾವಕ ಧ್ವನಿದೋರಿದಂತೆ |
ದೇವ ನೀಮರಿಯಾಗೆ ಹುಂಕರಿಸ್ಸೊದರಲು |
ಆವಿಗೆ ಧನಿ ದೋರಿದಂತೆ |
ಕಾವನೈಯ್ಯನೆ ನಿನ್ನ ನೆನೆದ ಗೊಲ್ಲತೆರಾ |
ಜೀವನ ಹಿತವಾಗಿ ಧನಿದೋರಿದಂತೀಗ 2
ಬಂದೂಳಗಕ ನಿನ್ನ ಪಾಂಡವರೊದಲು |
ನಿಂದು ನೀ ಧನಿದೋರಿದಂತೆ |
ಇಂದಾದಾ ಕಲಿಯುಗದ ದಾಸರ ಮಾತಿಗೆ |
ಬಂದು ನೀ ಧನಿ ದೋರಿದಂತೆ |
ಕಂದನಳುವ ಧ್ವನಿ ಕೇಳುತ ಜನನಿ ಅ |
ನಂದದಿ ಧನಿದೋರುವಂತೆ |
ತಂದೆ ಮಹಿಪತಿ - ನಂದನ ಪ್ರಭು ಗೋ |
ವಿಂದ ಮುಕುಂದೆನ್ನ ಸಲಹೆಂಬ ಮೂಢನಾ3