ಮರೆವೆನೆ ನಾ ನಿನ್ನ ಕರಿಗಿರಿ ದೊರೆ ಕರುಣಾಪೂರ್ಣನ್ನ ಪ
ನರಹರಿ ರೂಪದವನ ನಖದೀ ಹಿರಣ್ಯನ ಸೀಳಿದವನ
ವರಪ್ರಹ್ಲಾದ ವರದನ ಅಂಕದಿ ಸಿರಿಯ ಧರಿಸಿಕೊಂಡಿಹನ 1
ದಾನವಕುಲ ಸಂಹರನ ತನ್ನ ಧ್ಯಾನಿಸಿದರೆ ಒದಗುವನ
ಆನೆಗೊಲಿದು ಬಂದವನ ಭಕ್ತಾಧೀನನಾಗಿ ಇರುತಿಹನ 2
ಶುದ್ಧ ಸತ್ವ ಶರೀರನ ಅಷ್ಟ ಸಿದ್ಧಿಪ್ರದನೆಂಬುವನ
ಮದ್ಗುರು ಅಂತರ್ಗತನ ಸ್ತಂಭದಿ ಉದ್ಭವಿಸಿ ಬಂದವನ 3
ಗೀರ್ವಾಣ ಶುಭತಮ ಚರಿತನ 4 ಇಂಗಡಲಸುತೆಯಾಣ್ಮನ ಮುದ್ದು ರಂಗೇಶವಿಠಲರೇಯನ5