ಮಂಗಳಂ ಮಂಗಳಂ ರಂಗನಿಗೇ | ಜಯಮಂಗಳವೆನ್ನಿ ಶ್ರೀ ವೆಂಕಟಗೇ ಪ
ಪತಿ ಮಾಧವ ಹರಿಗೇ 1
ನೀರಜಜ ಗೋರೂಪಿ | ಸಾರಿ ಪುತ್ತಾಶ್ರಿತಗೆಕ್ಷೀರಾಭಿಷೇಚಿಸಿ | ಸಾರುತಿರೆ ನೃಪ ಗೃಹ |ಮಾರನೆ ದಿನ ಗೋ | ಚಾರ ಕೊಡಲಿ ಹತಿಗೆದೂರ ಸರಿಸಿ ಗೋವ | ಶಿರವನೊಡ್ಡಿದಗೇ 2
ನಗ ವೆಂಕಟಾದ್ರೀಲಿಅಘಹರ ಲೀಲೆಗಳ್ | ಸೊಗಸಾಗಿ ತೋರ್ವಗೇ 3
ಆವಾವ ಬಗೆಯಿಂದ | ಜೀವನಧ್ಯಾತ್ಮದಿಓಧಿ ಸಾಧನೆಗೈದು | ದೇವನ ಪದ ಸಾರುವಭಾವವನರುಹುಲು | ಊರ್ವಿಯೊಳವತರಿಸಿಮಾವಾರಿ ನಟಿಸುತ್ತ | ಜೀವರ ಪೊರೆವಗೇ 4
ದೇವ ದೇವ ನಮ್ಮ | ಗೋವ ಪರಿಪಾಲಕಮಾವಿನೋದಿಯು ಗುರು | ಗೋವಿಂದ ವಿಠಲಭೂವೈಕುಂಠಸ್ಥನು | ಕಾವ ಭಕ್ತರನೆಲ್ಲ ಈ ವಿದಧಿ ತುತಿಪರ್ಗೆ | ಭಾವದಿ ಒದಗುವಗೇ5