ಬೇಡಿಕೊಂಬೆನೊ ಶ್ರೀಹರಿಯೆ ನಿಮ್ಮ
ಅಡಿಯ ಮರೆಯೆನೊ ಪ
ಬೇಡಿಕೊಂಬೆನಯ್ಯ ನಿಮ್ಮ ಅಡಿಯಪಿಡಿದು ಬಿಡದೆ ನಾನು
ಗಡನೆ ಎನ್ನ ಕಡುದಾರಿದ್ರ್ಯ ಕಡಿದು ಬಯಲು ಮಾಡಿ ಹರಿಯೇ ಅ.ಪ
ದೈತ್ಯಶಿಕ್ಷಕ ಚಿತ್ತಜತಾತ ಭಕ್ತರಕ್ಷಕ ಅ
ನಾಥ ಪ್ರೀತ ಮುಕ್ತಿದಾಯಕ
ಸತ್ಯಸಂಧನನ್ನು ಮಾಡಿ ಮತ್ರ್ಯಭೋಗದಾಸೆಬಿಡಿಸಿ
ನಿತ್ಯನಿರ್ಮಲಾತ್ಮ ನಿಮ್ಮ ಭಕ್ತಿಯಿತ್ತು ಸಲಹೊ ಹರಿಯೆ 1
ಶ್ಯಾಮಸುಂದರ ಸ್ವಾಮಿ ಭಕ್ತಪ್ರೇಮ ಮಂದಿರ
ರಮಾ ಸತ್ಯಭಾಮಾ ಮನೋಹರ
ಪಾಮರತ್ವ ತಾಮಸ ದುಷ್ಕಾಮಿತಂಗಳ್ಹರಿಸಿ ನಿಮ್ಮ
ನಾಮಜಪವು ತಪದೊಳಿರಿಸಿ ಪ್ರೇಮದಿಂದ ಸಲಹೊ ಹರಿಯೆ2
ಪದುಮನಾಭನೆ ಸದಮಲಾಂಗ ಒದಗುಬೇಗನೆ ಈ
ವಿಧದಿ ಬೇಡ್ವೆ ಸುದಯವಂತನೆ
ಸುದತಿ ಮಾಡಿದಂಥ
ಪದದ ಕೃಪೆಯನಿತ್ತು ಎನ್ನ ಮುದದಿ ಸಲಹು ಸಿರಿಯರಾಮ 3