ನೋಡು ನೋಡು ಗರುಡಗಮನನೆ
ಮಾಡು ದಯವನು ವೇಗದಿ ಪ
ಪಾಡುವೆ ಆನಂದದಲಿ ನಿನ್ನನು
ಕೊಂಡಾಡುವೆನು ನಿನ್ನ ಮೂರ್ತಿಯಾ ಅಪ
ಮಂಗಳಾಂಗನೆ ಮನ್ಮಥನ ಪಿತ
ಸಂಗೀತ ಸುರಲೋಲನೆ
ಕಂಗಳಬ್ಬರ ತೀರುವಂತೆ
ಚರಣಂಗಳನೆ ತೋರೋ ವಿನಯದಿ1
ಪರಮ ಪುರುಷನೆ ಪುಣ್ಯ ಶ್ಲೋಕನೆ
ದುರುಳ ದೈತ್ಯರ ದಲ್ಲಣ
ಮರಿಯಲೀಸದೆ ನಿನ್ನ ಚರಣ
ಸ್ಮರಣೆ ಒದಗಿಸೊ ವದನಕೆ 2
ವಂದನೆಯು ಗೋವಿಂದ ಗೋಪಾಲಾ
ಮಂದರಧರ ಮಾಧವಾ
ಇಂದು ವಿಜಯವಿಠ್ಠಲ ನಿನ್ನ
ಸಂದರ್ಶನವ ಕೋರುತಾ 3