ಪ್ರಸನ್ನ ಶ್ರೀ ನವಗ್ರಹ ಸ್ತುತಿಗಳು
ಶ್ರೀ ಸೂರ್ಯದೇವ ಸ್ತೋತ್ರ
88
ಆ ನಮಿಸುವೆ ಘೃಣಿ ಆದಿತ್ಯ ಸೂರ್ಯ
ಸೂರಿ ಪ್ರಾಪ್ಯ ಪ
ಅಮಿತ ಸ್ವತೇಜದಿ ಝಗಿ ಝಗಿಸುತಿ ಜಗತ್
ಜನ್ಮಾದಿಕರ್ತ ಚೇಷ್ಟಕ ಸ್ಫೂರ್ತಿದಾತ
ಅಮಯ ದೂರ ಸುಗುಣ ಗಣಾರ್ಣವ ದೇವ
ಶ್ರೀಮನ್ನಾರಾಯಣ ಧ್ಯೇಯ ಧ್ಯಾನಿಪೆ ನಿನ್ನ 1
ಮಕರ ಕುಂಡಲವಾನ್ ಕಿರೀಟಿಯೆ
ಅರಿದರ ಧಾರಿ
ಅವ್ಯಯಾನಂದ ಚಿತ್ ಚಾಮೀಕರ ವಪು
ಶ್ರೀಯುಕ್ ಪದ್ಮದಿ ಇರುತಿಹಿಯೋ ಅರ್ಕಸ್ಥ 2
ಹಿಂಕಾರ ಪ್ರಸ್ತಾವ ಆದಿ ನಮೋ ನಮೋ
ಉದ್ಗೀಥ ಪ್ರತಿಹಾರೋಪದ್ರವ ನಿಧನ
ಉತ್ಕøಷ್ಟ ಸಾಮ ಪ್ರತಿಪಾದ್ಯ ನಾರಾಯಣ
ಋಕ್ ಸಾಮ ವೇದದಿಂ ಸ್ತುತ್ಯ ವಾಗ್ವಾಯ್ವಿಂದ 3
ಭೂತೇಂದ್ರಿಯ ಕರ್ಣಾದಿಗಳಿಗೆ ದೂರ
ದ್ಯುಸ್ಥದಿವಃಪರ ತ್ರಿಪಾದ ಜ್ಯೋತಿರ್ಮಯನು
ಹಿತಕರನಿವ ಅರ್ಕನೋಳ್ ಜ್ವಲಿಸಿ ಅರ್ಕಗೆ
ಒದಗಿಸಿಹ ತನ್ನ ಸೂರ್ಯನೆಂಬೋ ನಾಮ 4
ಸೂರ್ಯದೇವನೆ ದಯಾವಂತನೆ ನಮೋ ನಮೋ
ಕಶ್ಯಪಾತ್ಮಜ ನೀ ಎನ್ ಪಾಪ ಪರಿಹರಿಸೋ
ಮಹಾದ್ಯುತಿ ತಮೋಘ್ನನೇ ಜ್ಞಾನಾಯುರ್ದಾತ ನೀ
ಶ್ರೀಯಃಪತಿ ನಾರಾಯಣನ್ನೊಲಿಸೋ ಎನಗೆ 5
ಸೂರ್ಯ ನೀ
ಅಹರಹ ಎನ್ನಸರ್ವಪೀಡೆಗಳ್ ಕಳೆದು
ಬೃಹತಿಸಾಸಿರ ಸ್ವರ ವ್ಯಂಜನಾಕ್ಷರ ವಾಚ್ಯ
ಶ್ರೀಹರಿಯ ಭಜಿಸಲು ಶತಾಯುಸ್ ಬಲವೀಯೋ 6
ಶರಣು ಪದ್ಮಜಪಿತ ಪ್ರಸನ್ನ ಶ್ರೀನಿವಾಸ
ಸೂರ್ಯ ನಿನ್ನ ಪ್ರೀತಿಪಾತ್ರ
ಸೂರ್ಯನೊಳಿದ್ದು ನೀ ಜಗತ್ಸರ್ವ ಕಾಯುತ್ತಿ
ಕರುಣದಿ ಎನ್ನನು ಎನ್ನವರನು ಕಾಯೋ 7 ಪ