ಭವ ಸಂಕಟ ಪರಿಹರಿಸೊ ಕಿಂಕರನೆಂದೆನಿಸೊ ಪ
ಶಂಕೆಯಿಲ್ಲದೆ ಪಾದಪಂಕಜ ಪೂಜಿಸಲೂಮಂಕುಮತಿಯ ಕಳೆವಾ ಅಕಳಂಕನೆಂದೆನಿಸುವಾ ಅ.ಪ.
ಕಲಿಯುಗದೊಳು ಕಲಿ ಬಾಧೆಗೆ ಒಳಗಾಗಿ ಬಹುವಿಧವಾಗಿಒಲಿಸದೆ ವರಗುರು ಹಿರಿಯರ ನಿಂದಿಸುತಾ ವೇಳೆಗಳೆಯುತಾಗಳಿಸಿದೆ ಪಾಪವ ಚರಿಸುತ ಧರೆಯೊಳಗೆ ತೊಳಲುವೆ ತಮದೊಳಗೇಘಳಿಲನೆ ರಕ್ಷಿಸೊ ಬಾಲಕರನು ದೇವಾ ಎನ್ನಯ ಕುಲದೈವಾ 1
ಸಾಧನೆಗೋಸುಗ ಮೇದಿನಿಗೆ ಬಂದು ಸಾಧಿಸದೆ ಬಂದುಶೋಧಿಸುವೆನು ಪುರುಷಾರ್ಥದ ಮಾರ್ಗವನು ಮೋದವ ಪೊಂದುವೆನುಭೇದವ ತಿಳಿಯದೆ ಹಾದಿಯ ತಪ್ಪಿರುವೆ ಖೇದವ ಪುಡುತಿರುವೆಸಾದರದಲಿ ತವ ಪಾದದಿ ಧ್ಯಾನವನು ಒದಗಿಸಬೇಕಿನ್ನು 2
ಮಂದ ತಾಪ ಬಿಡಿಸೊ ಕರುಣವ ತೋರಿಸೊಆರು ಮೂರು ವಿಧ ಭಕ್ತಿಯನೆ ಈಯೋ ಕರಪಿಡಿದು ಕಾಯೋಸಾರುವ ಭಕುತರ ಧೀರ ವೃಂದದೊಳಗೆ ಸೇರಿಸೊ ಜವದೊಳಗೆಧಾರುಣೀಶ ತಂದೆವರದವಿಠಲನೆ ಶರಣೆಂಬೆನು ನಾನೇ 3