ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಜ್ಯಾಕೆ ಎಲೆ ಮನುಜ ಭಯವಿಲ್ಲ ನಿನಗೆ ಕಂಜನಾಭನ ಧ್ಯಾನವಿರಲಿ ಮನದೊಳಗೆ ಪ ತಾಪತ್ರ ಬಂದೊದಗೆ ಪಾಂಡುಪ್ರಿಯನೆಂದೆನ್ನು ಶಾಪವೊದಗಲು ಅಂಬರೀಷನ್ವರದೆನಲೋ ಭೂಪತಿಗಳು ಮುನಿಯೆ ಪಾಂಚಾಲಿಪಾಲಕನೆನ್ನು ಆಪಾರ ಕಷ್ಟದಲಿ ಕರಿವರದೆನೆನಲೋ 1 ಮಾತೃ ವೈರ್ಯಾದರೆ ಧ್ರುವಪಾಲನೆನಲೋ ಭ್ರಾತೃವೈರ್ಯಾದರೆ ಸುಗ್ರೀವಸಖನೆನ್ನು ಖಾತ್ರಿಯಿಂ ಸತತದಿ ಸೂತ್ರಧಾರೆನಲೋ 2 ಸೆರೆಮನೆಯು ಒದಗಿರಲು ಪಿತಮಾತೆರ್ವರದೆನ್ನು ಧುರದೊಳಗೆ ಪೊಕ್ಕಿರಲು ನರಸಹಾಯನೆನಲೋ ಬರಿ ಮಳೆಯೊಳ್ಸಿಕ್ಕಿರಲು ಗಿರಿಯೆತ್ತಿದವನೆನ್ನು ದುರುಳರ್ಹಾವಳಿಯೊಳಗೆ ದನುಜಹರನೆನಲೋ 3 ಕವಿಯಲು ವೈರಿಗಳು ಕಂಸಮರ್ದನನೆನ್ನು ಶಿವನ ಕಾಯ್ದವನೆನ್ನು ಉರಿಹತ್ತಿಸುಡಲು ಭವಿಜನುಮ ಬಂದಿರಲು ಭವರೋಗಹರನೆನ್ನು ದಿವನಿಶೆಯು ಎಡೆಬಿಡದೆ ಭಯದೂರನೆನಲೋ 4 ಸ್ಥೂಲಭ್ರಷ್ಟನಾದರೆ ಬಲಿದ್ವಾರಪಾಲಕನೆನ್ನು ಕುಲಭ್ರಷ್ಟನಾದರಜಮಿಳನ್ವರದನೆನಲೋ ಇಳೆಮೂರು ಸಂರಕ್ಷ ಚೆಲುವ ಶ್ರೀರಾಮನಂ ಹಲವು ವಿಧದಲಿ ಭಜಿಸಿ ಫಲಗಳಿಸು ಬಿಡದೆ 5
--------------
ರಾಮದಾಸರು
ಪಾದ ನಿತ್ಯ 1 ವಾಸುದೇವ ನಿನಗೆ ಒಲಿವ ತಾ ಭಾಸುರ ಕೀರ್ತಿ ತರುವ ಬೇಸರಿಸದೆ ಭಾಸಿ ಪಂಥದಿ ವಾಸುದೇವದಾಸರ ಸೇವಿಸು 2 ಕರುಣ ತೋರಿ ಸಲಹುವಂಥ ಗರುಡಗಮನನಿರಲು ನೀನು ಅರಿಯದಂತೆ ಇರಲು ನಿನ್ನ ಮರುಳು ಮನವೆ ಕಾರಣಿದಕೆ 3 ಕೂಡು ಸಜ್ಜನ ಸಂಗ ತವಕದಿ ಜಾಡುಕೋರ್ವ ಹರಿಭಕ್ತರ ನೋಡು ನಿನ್ನಕ್ಷಿ ತೆರೆದು ಮನುಜ 4 ಜಗಜನ್ಮಾದಿ ಕಾರಣ ಅಘಟನಘಟನಾದ ಹರಿಯ ಮಿಗೆ ಧ್ಯಾನವಿಟ್ಟು ಮನವೆ 5 ಸಲ್ಲ ದುರ್ಜನರಾಸಂಗವು ಸಜ್ಜನರಿಗೆ ಅಲ್ಲ ತಿಂದ ತಿಮ್ಮನಂದದಿ ಬೆಲ್ಲ ಬೇವಿನಂತೀ ಸಂಸಾರದಲ್ಲಿ ಸಿಲುಕಬೇಡ ಮನವೆ 6 ಹರುಷದಿಂದ ಜಡದೇಹದೊಳಗಿಹ ಶ್ರೀ ಹರಿ ಎಂದರಿದು ಪರರ ವಾರ್ತೆ ಆಡದೆ ಪರಮಪುರುಷ ಹರಿಯ ನೆನೆ ಮನುಜ 7 ಹದಿನಾಲ್ಕು ಲೋಕದೊಡೆಯ ಒದಗಿರಲು ನಿನ್ನ ಸಾಕೆ ಬರಿದೆ ಚಿಂತೆ ಮಾಡಬೇಡ ಸ್ಮರಿಸು ಹರಿಯ ಚರಣವನ್ನು8 ಸ್ವಕಾರ್ಯ ಸ್ವಾಮಿಕಾರ್ಯ ನಿನ್ನ ಅಖಿಲ ಕಾರ್ಯಾಂಗತನು ಹರಿಯು ಸಖನಂತೆ ಸಲಹುತಿರಲು ಸುಖಿಸು ಅವನ ದಾಸನೆಂದು 9 ಪಾದ ನಿತ್ಯ ಸಂಗ 10 ಸಕಲರಲ್ಲು ಅವನೇ ನಿಂತು ಸಲಹುವನೆಂದರಿತು ನೀ 11 ನಿತ್ಯ ಅಜ್ಞಾನವನ್ನು ಪರಿಹರಿಸುತ ನಿತ್ಯ ವಂದಿಸು ಮನದಿ 12 ಪಾದ ಧ್ಯಾಸದಿಂದ ಅರಿತೆನಲದೆ ಎಂದರಿತು 13 ಪ್ರಾಣನಾಥನೊ ಹರಿ ಶ್ರೀ ರಾಮಚಂದ್ರನೆಂದು ಅರುಹಿಕೊಟ್ಟು ಸಲಹುವರ 14 ತ್ರಿವಿಧ ಜೀವರಿಗೆ ಹರಿಪರದೈವನೆಂದರುಹಿದ ಪರಮಗುರು ಮತವ ಬಿಟ್ಟು 15
--------------
ಸರಸ್ವತಿ ಬಾಯಿ
ಪುಟ್ಟಿದನು ಮಗನೂ ಮಾದಮ್ಮಗೇ ಪ ಪುಟ್ಟಿದ ವೈಶ್ಯ ಮಾದಮ್ಮಗೆ ಮಗ ರಂಡೆವಿಠ್ಠಲ ಎಂತೆಂದು ಪೆಸರಿಟ್ಟು ಕರೆದರೂ ಅ.ಪ. ನಗು ನಗುತಲೇ ನಾನು ಶ್ರೀಹರಿಗೆ ಕೈಮುಗಿದು ಬೇಡಿಕೊಂಡೇನು ||ನಗಧರ ಮಾಡಿದ ಮಾಡಿದ ಪ್ರಪಂಚವುಜಗದಿಂದಲೇನಹುದೆಂದು ನುಡಿದಳು 1 ನದಿಯ ಮಳಲು ಸರೀ ಪ್ರಜೆಗಳು ಬದಿಯೊಳಗೆ ಕೈಕಾಲು ಮುರುಕೊಂ-ಬದರಿಯದೆ ಒದಗಿರಲು ಮುದದಿಂದಮಾದಮ್ಮ ಸುತ್ತ ಮುತ್ತಿತು ಲೋP À 2 ಆ ರಂಡೆ ವಿಠಲಾನ ಗುಡಿಯೊಳಗಿಟ್ಟುಶ್ರೀ ರಮಣಗೇ ಒಪ್ಪಿಸೇ ||ನೀರೆಣ್ಣೆ ನಾರು ಬತ್ತಿಯ ದೀಪ ಉರಿಯಲುಮೂರು ಲೋಕಕೆ ಆಶ್ಚರ್ಯವಾಯಿತು 3 (ನಾಲ್ಕನೆಯ ನುಡಿ ಸಿಕ್ಕಿಲ್ಲ) ಭ್ರಷ್ಟಳ ಆರುತಿಯ ಮೋಹನ್ನವಿಠಲ ಕೈಗೊಂಡ ||ದೃಷ್ಟಾಂತವಾದುದು ಶಿಷ್ಟ ಜನರಿಗೆಲ್ಲಶ್ರೇಪ್ಠಳಾದರು ಇಹಪರದಲ್ಲಿ ಎಂದರು 5
--------------
ಮೋಹನದಾಸರು