ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಶವಲ್ಲದೀ ಮನದ ದೆಸೆಯಿಂದೆ ನಾ ಬಲು ದೆಸೆಗೆಟ್ಟು ಬಳಲುವೆ ಕುಸುಮಾಕ್ಷ ಕಣ್ದೆರೆಯೊ ಪ ನಶಿಪ ಪ್ರಪಂಚ ಭ್ರಮಿಸಿ ಹಸಗೆಡಿಸಿ ನಿಜಧ್ಯಾನ ಪಶುವಿನಂತೆನ್ನನು ದಿಸೆದಿಸೆಗೆಳಿಪುದು ಅ.ಪ ಭುವಿಪರನೊಲಿಸರೆಲವದಿ ಭೂಮಿಯ ಪಡೆದೆ ಸವ ಜೋಡಿ ನೂಕಿತ್ತು ಜವದಿ ಕಟ್ಟುವುದು ಬುವಿಯೊಳು ಮಿಗಿಲೆನಿಸುವ ತೆರೆ ಮೇಲ್ಮಾಡಿ ಭವನ ರಚಿಸಿ ಕೋಟಿದ್ರವ್ಯಗಳಿಗಳುವುದು 1 ಮದುವ್ಯಾಗಿ ಪದ್ಮಿನಿಯ ವದನದೊಳ್ವದನಿಕ್ಕಿ ಮದನಕದನದಿ ಸುಖಿಸುವುದೊಂದು ಫ¼ಗಿ ಸದನ ಮುರಿದು ಸಂ ಪದವೆಲ್ಲ ತನ್ನಗೆ ಒದಗಿಬರಲೆನ್ನುವುದು 2 ತಡೆಯದೆ ವೈರಿಗಳ ಕಡುಕೋಪದಿಂ ತಂದು ಪಿಡಿದು ಕಂಬಕೆ ಕಟ್ಟಿ ಸುಡಿಸುವುದೊಡನೆ ಕಡುಗಲಿತನದಿಂದ ಪೊಡವಿಪರ ಸದೆಬಡಿದು ಪೊಡವಿ ಗೆಲಿದು ಒಂದೇ ಕೊಡೆಯಿಂದಾಳುವುದು 3 ಯಾತ್ರೆ ಮಾಡುವುದೊಮ್ಮೆ ಕ್ಷೇತ್ರದೊಳಗೆ ಕೂತು ನೇತ್ರಮಂ ಬಂಧಿಸಿ ಸ್ತೋತ್ರ ಮಾಡುವುದು ಮೂತ್ರದ್ವಾರದೆ ಬಂದ ಸೂತ್ರದ ಕಾಯಕ್ಕೆ ಧಾತ್ರಿ ಸೊನ್ನೆಂದೊಮ್ಮೆ ಖಾತ್ರಿ ಮಾಡುವುದು 4 ಯಾತರ್ಹಲವು ಪರಿಮಿತಿಯಿಲ್ಲದ್ಯೋಚಿಸಿ ಖತಿ ತಾಳಲಾರೆ ಅತಿಭ್ರಷ್ಟಮನದ ದುರ್ಮತಿ ನಿವಾರಿಸು ಗತಿ ನೀಡೆನಗೆ ಕೃಪೆಯಿಂ ಹಿತಭಕ್ತ ಶ್ರೀರಾಮ 5
--------------
ರಾಮದಾಸರು