ಮುಚ್ಚ್ಯಾಕೆ ಮರೆಯಾಕ್ಹೆಚ್ಚೀತನೆ
ಅಚ್ಯುತ ಸಕಲಕ್ಕೆ ಅಧಿಕಿಹ್ಯನೆ ಪ
ಬಚ್ಚಿಟ್ಟುಕೊಂಡು ವೇದ ಕುಚ್ಛಿತ ದೈತ್ಯರೊಯ್ಯೆ
ಇಚ್ಛೆಗಾರ ಪಿತ ತಂದು ನಿಶ್ಚಯಗೈದ ಸೃಷ್ಟಿ ಅ.ಪ
ಸವೆಯದ ವರವನ್ನು ಹಿರಣ್ಯಕಶ್ಯಪನಿಗೆ
ಶಿವ ತಾನುಕೊಟ್ಟ ವೈಕುಂಠನ ಉದರ ಸೀಳಿ
ಜವದಿ ತ್ರಿಭುವನವ ದಯದಿ ಸಲಹಿದ ಸಿರಿ
ಧವ ನರಸಿಂಗನೆನಿಸಿ 1
ಕೇಳಿದ ವರವನ್ನು ದುರುಳರಾವಣನಿಗೆ
ಪಾಲಿಸಿ ವರ ಶಂಭು ಹರಿಯನ್ನು ಅರ್ಚಿಸೆ
ಕೀಳುದೈತ್ಯನ ಕುಲಮೂಲ ತರಿದು ಸುರರ
ಪಾಲಿಸಿದನು ದಿವ್ಯ ಮೇಲುರೂಪವ ತಾಳಿ 2
ದುರುಳಗೊಲಿದು ಶಿವ ಉರಿಹಸ್ತ ಕರುಣಿಸಿ
ಮರುಗುತ ಹರಿಯೆಂದು ಕರವೆತ್ತಿಕೂಗಲು
ಭರದಿ ಒದಗಿಬಂದು ಮೆರೆವೀ ಅಸುರನನ್ನು
ಉರಿಹಸ್ತ ಹರನಿಗೆ ವರವಿತ್ತ ಶ್ರೀರಾಮ 3