ಕಣ್ಣಾರೆ ಕಂಡೆವಿಂದು ಪುಣ್ಯತೇಜೋರಾಶಿಯ
ಬಣ್ಣಬಣ್ಣದಲಿ ಭಾಸುವ ಪ್ರಭೆಯ ಧ್ರುವ
ಹೇಳಲಿಕ್ಕೆ ಬಾರದು ಹೊಳೆವ ಪ್ರಕಾಶವು
ಥಳಥಳಿಸುತಿಹುದು ಒಳಹೊರಗೆ
ಝಳಿಝಳಿಸುತಿಹದು ಮೊಳೆಮಿಂಚಿನ ಪರಿ
ಸುಳವ್ಹುದೋರಿತು ಕಳೆವರದೊಳಗೆ 1
ಒದಗಿಬಂತಿದಿರಿಟ್ಟು ಮೊದಲಿನ ಪುಣ್ಯದ ಫಲ
ಸಾಧಿಸಿ ಕಂಡೆ ಸುಖಸದೋದಿತವ
ಹಾದಿ ಸಿಲ್ಕಿತು ನೋಡಿ ಆದಿ ಅನಾದಿಯ
ಭೇದಿಸಿತು ಮನಸು ನಿಜಬೋಧವ 2
ಭಾವ ಬಲಿದು ನೋಡಿ ದೇವಾಧಿದೇವನ
ಸುವಿದ್ಯ ಸುರಸವ ಸವಿಸವಿದು
ಪಾವನ್ನವಾಯಿತು ಮಹಿಪತಿ ಜೀವನವುಕಾವಕರುಣ ಗುರುದಯದಿಂದ3