ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘನತಾಪ ಘನತಾಪ ಘನತಾಪ ಸಂಸಾರ ನೆನೆಸಲಳವಲ್ಲದನು ಕನಸಿನೋಳಭವ ಪ ಕ್ಷಣಹೊತ್ತು ಮನಸನ್ನು ಸನುಮತಯಿರಗೊಡದು ಗಣನೆಯಿಲ್ಲದ ತಾಪವನೆ ಒದಗಿಪುದಭವ ಅ.ಪ ವನಿತೆಯರ ತಿನಿಸು ತನುಜ ಅನುಜರ ಮುನಿಸು ಜನರನೊಲಿಸುವುದಿನಿಸು ಘನತಾಪ ಅಭವ ತನುರೋಗ ಮನರೋಗ ಧನದ ವಿಯೋಗ ಇನಿತೆಲ್ಲವೊಂದಾಗಿ ಘನಬಾಧಿಸುವುವಭವ 1 ಕೊಟ್ಟ ಒಡೆಯರು ಬಂದು ನಿಷ್ಠೂರಾಡುತ ಬಲು ಕಟ್ಟಿಕಾದುವ ಮಹಕೆಟ್ಟತಾಪಭವ ತಾಪ ಕೊಟ್ಟವರ್ಹಂಗಿನ ತಾಪ ಹುಟ್ಟುಸಾವಿನ ಅತಿ ಕಷ್ಟತಾಪಭವ 2 ಮನುಜರೂಪದ ಮಹ ಘನತೆಯನು ಕೆಡಿಸಿ ಕ್ಷಣದಿ ತೋರೆರಗುವ ಕನಿಕಷ್ಟ ಅಭವ ಇನಿತೀ ಸಂಸಾರತಾಪ ಕನಿಕರದಿಂ ಕಡೆಹಾಯ್ಸಿ ಮನಕೆ ಜಯನೀಡಿ ಕಾಯೋ ಎನ್ನಯ್ಯ ಶ್ರೀರಾಮ 3
--------------
ರಾಮದಾಸರು