ಕರುಣ ಘನ ಸಿರಿಚರಣ ಶರಣ ಜನರಾಭರಣಾ |
ದುರಿತ ಹರಣ |
ಹರಿಯೇ ಸಂಕಟ ಹರಿಯೇ ಬಾಯೆಂದು ಕರಿಯೇ |
ಒದಗಿದೈ ನರಹರಿಯೇ ದೈತ್ಯರರಿಯೇ |
ಪರಮ ಸದ್ಗುಣಧಾಮ ಪೂರಿತ ಮನೋಕಾಮ |
ಯದುಕುಲಾಂಬುಧಿ ಸೋಮಾ ಮೇಘ ಶಾಮಾ |
ಸುರಮುನಿ ಜನಧೇಯಾ | ಕಮನೀಯತರ ಕಾಯಾ |
ತೋಯಜಾಕ್ಷ ಸಿರಿ ಕೃಷ್ಣರೇಯಾ |
ಸಲಹು ಒಲವಿಂದಾ 1
ಅಂಕಿತ-ಕೃಷ್ಣ (?)