ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಿಮುಖದ ಗಣಪತಿಯ ಚರಣಕ್ಕೆಯೆರಗಿ ಶಾರದೆಗೆ ಸೆರಗೊಡ್ಡಿ ವರವನು ವರವ ಬೇಡಿಕೊಂಡೆ ಸ್ಥಿರವಾದ ಭಕುತಿ ಕೊಡುಯೆಂದು 1 ವಾಯು ಬ್ರಹ್ಮ ಭಾರತಿಗೆ ಬಾಳ ಬೇಡಿಕೊಂಡ್ವೇ- ದವ್ಯಾಸರಿಗೆ ನಮೋಯೆಂಬೆ ನ- ಮೋಯೆಂದು ನಾರದರ ಪಾದಪದ್ಮಗಳಿಗೆರಗುವೆ 2 ಅತ್ರಿ ಅಂಗೀರಸ ವಸಿಷ್ಠಗೌತಮ ವಿಶ್ವಾ- ಮಿತ್ರ ಮಾರ್ಕಾಂಡೇಯ ಚ್ಯವನರು ಚ್ಯವನ ಭಾರದ್ವಾಜ ಬಕದಾಲ್ಭ್ಯರಿಗೆ ನಮಿಸುವೆ 3 ಪಂಡಿತ್ವಾಲ್ಮೀಕಿ ಕೌಂಡಿಣ್ಯ ಕೌಂಡಿಣ್ಯ ಅಗಸ್ತ್ಯಮುನಿ ಮರೀಚರಿಗೆ ನಾನು ನಮೋಯೆಂಬೆ4 ಶೇಷಗಿರಿವಾಸನ ಆಕಾಶನಳಿಯನೆ ವೆಂಕ- ಟೇಶ ನೀ ನಮ್ಮನೆ ದೈವ ಮನೆದೈ- ವ ಸಲಹೆನ್ನ ಪದ್ಮಾವತೀಶ ಪರಮಾತ್ಮ 5 ಮಂಗಳಾಂಗನೆ ನೀನು ಮಂಗಳಮಹಿಮನೆ ಮಂಗಳದೇವಿ ರಮಣನೆ ನೀನೆಮಗೆ ಜಯ ಮಂಗಳವ ಕೊಟ್ಟು ಸಲಹೆನ್ನ 6 ವಾಸುದೇವನೆ ನೀನು ವಾಸುಕಿಶಯನನೆ ವಾಸವಿಯ ರಥವ ನಡೆಸಿದೆ ನಡೆಸಿದಂಥ ಶ್ರೀನಿ- ವಾಸ ನೀನೆಮಗೆ ದಯಮಾಡು 7 ಎನ್ನಲ್ಲೆ ನೀನಿದ್ದು ನಿನ್ನಗುಣ ಬಹುರೂಪ- ವನ್ನು ತಿಳಿಸದಲೆ ಇರುವೋರೆ ಇರುವೋರೆ ನೀನು ಪ್ರ- ಸನ್ನನಾಗೆನಗೆ ದಯಮಾಡು 8 ಕಾಲ ಕಾಲಕೆ ನಿನ್ನ ನಾಮವನು ನಾಲಿಗೆ ಮ್ಯಾಲಿಟ್ಟು ನಿನ್ನ ನೆನೆವಂತೆ ನೆನೆವಂತೆ ಅನಿರುದ್ಧ 9 ಕಾಮಕ್ರೋಧವು ಮದ ಮಾತ್ಸರ್ಯ ಲೋಭಗಳು ಮೋಹ ಮಡುವಿನಲಿ ಮುಣುಗಿದೆ ಮುಣುಗಿದೆನೊ ಎನ್ನ ಕೈ ನೀನೆ ಪಿಡಿದೆತ್ತಿ ಕರೆದೊಯ್ಯೊ 10 ಐದು ಮಂದ್ಯೆನ್ನಲ್ಲಿ ಐದಾರೆ ಮಾರಾಯ ಬೈದರು ಬಿಡರೋ ಎನ್ನೀಗ ಎನ್ನೀಗ ಕಟ್ಟಿ ಕೊಂಡೊಯ್ದು ಹಾಕುವರೊ ಯಮನಲ್ಲಿ 11 ಆರು ಮಂದ್ಯರಿಗಳು ಕ್ರೂರ ಶತ್ರುಗಳುಂಟು ಘೋರಬಡಿಸುವರೊ ಅನುಗಾಲ ಅನುಗಾಲ ದುರ್ವಿಷಯ ತಾವೆನಗೆ ಕಲಿಸಿ ದಣಿಸೋರು 12 ಹತ್ತು ಮಂದಿ ಯೆನ್ನ ಸುತ್ತ ಮುತ್ತಿರುವರೊ ಕೂಪ ಭವದೊಳು ಭವದೊಳಗೆ ಬಳಲುವೆನು ಚಿತ್ತಕ್ಕೆ ತಂದು ದಯಮಾಡು 13 ಸಂಚಿತಾಗಾಮಿಗಳ ಮುಂಚೆ ದಹಿಸಿ ಈ ಪ್ರ- ಪಂಚವನು ಬಿಡಿಸೊ ಪರಮಾತ್ಮ ಪರಮಾತ್ಮ ನೀಯೆನ್ನ ವಂಚನಿಲ್ಲದಲೆ ಸಲಹೈಯ್ಯ 14 ಜ್ಞಾನ ಭಕ್ತಿ ಗಾನ ವೈರಾಗ್ಯ ಭಾಗ್ಯಗಳು ಜಾನಕಿರಮಣ ಜಗದೀಶ ಜಗದೀಶ ಜನಕನ ಜಾಮಾತ ನೀನೆ ತಿಳಿಸಯ್ಯ 15 ದ್ವಾಸುಪರುಣನಂತೆ ಈ ಶರೀರದೊಳಿದ್ದು ಏಸೇಸು ಜನ್ಮಕ್ಕಗಲದೆ ಅಗಲದಂತಿದ್ದು ಉ- ದಾಸೀನವ ಮಾಡೋದೊಳಿತಲ್ಲ 16 ಇಂದುಕುಲಜಾತ ನಿನ್ನೊ ್ಹಂದಿಕೊಂಡಿದ್ದು ಎಂದೆಂದಿಗು ಬಿಡದೆ ಗೆಳೆತನ ಗೆಳೆತನವಿದ್ದಲ್ಲಿ ಸಂದೇಹವ್ಯಾಕೊ ಸಲಹಲು 17 ಮುಕ್ತಿದಾಯಕ ನಿನ್ನ ಭಕ್ತರೇಸುಮಂದಿ ಹೆತ್ತಾಯಿಸುತರೇನವರೆಲ್ಲ ನಾ ಹುಟ್ಟಿದೆನೆ ಮತ್ತೆ ಮಲತಾಯಿ ಉದರದಿ 18 ಶ್ರೀಶನೆ ಕೇಳ್ ನಿನ್ನ ದಾಸರಂಗಳದಲ್ಲಿ ಬೀಸಿ ಬಿಸಾಕೊ ಎನ್ನನು ಎನ್ನ ಹರಿದಾಸರ ದಾಸತ್ವಯೆನಗೆ ಕೊಡಿಸಯ್ಯ 19 ಅಂಬರೀಷ್ವರದ ನಿನ್ನ ್ಹಂಬಲೆನಗಿರಲಯ್ಯ ಬಿಂಬ ಮೂರುತಿಯೆ ಬಿಡದೆನ್ನ ನಿನ್ನೂರಲ್ಲಿ ಇಂಬುಕೊಟ್ಟೆನ್ನ (ಅ)ಲ್ಲಿರಿಸಯ್ಯ 20 ಕಡಿದು ಹೊಡೆದು ಬಯ್ದು ಬಂದು ಕಾಲಿಂದೊದ್ದ- ರ್ಹಿಡಿಯದೆ ಅವರ ಅಪರಾಧ ಅಪರಾಧವೆಣಿಸದಿರೆ ನಡೆದರೊ ನಿನ್ನ ಪುರಕಾಗ 21 ಪುಟ್ಟ ಪ್ರಹ್ಲಾದ ಧ್ರುವ ಕೊಟ್ಟರೆಷ್ಟು ಭಾಗ್ಯ ಕಷ್ಟಕ್ಕೆ ಬಂದು ಒದಗಿದೆ ಒದಗಿ ಬಂದವರ ಆಪತ್ತು ಬಂಧನ ಬಿಡಿಸಿದೆ 22 ತನ್ನ ಮಗನ ಕರೆಯೆ ಎನ್ನ ಕರೆದನೆಂದು ನಿನ್ನ ದೂತರನು ಕಳಿಸಿದೆ ಕಳಿಸಿದ್ಯಜಮಿಳಗೆ ಮನ್ನಿಸಿ ಕೊಟ್ಟ್ಯೊ ನಿನಲೋಕ 23 ತಿರುಕ ತಂದವಲಕ್ಕಿ ಕರಕÀರನೆ ನೀಮುಕ್ಕಿ ದೊರೆತನವ ಕೊಟ್ಟು ದಾರಿದ್ರ್ಯ ದಾರಿದ್ರ್ಯ ಕಳೆದದ್ದು ಅರಿಕಿಲ್ಲವೇನೊ ಜನಕೆಲ್ಲ 24 ನಿಲ್ಲಬೇಕೆಂದಿಟ್ಟಿಕಲ್ಲು ಕೊಟ್ಟವಗೆ ಕೈ- ವಲ್ಯವನು ಕೊಟ್ಟ್ಯೋ ಕರುಣಾಳು ಕರುಣಾಳು ಬುಕ್ಕಿ ್ಹಟ್ಟು ಮಲ್ಲಿಗೆಯ ಮಾಲೆಗೊಲಿತೀಯೊ 25 ಕರೆದು ಕಂಸಗೆ ಕೊಟ್ಟು ಕೊಲಿಸಬಂದ- ಕ್ರೂರ(ಗೆ) ನದಿಯಲ್ಲೆ ನಿನ್ನ ನಿಜರೂಪ ನಿಜರೂಪ ತೋರಿದ್ದು ಇದುಯೇನು ನಿನ್ನ ಮಹಿಮೆಯು 26 ಗಂಧಕ್ಕೆ ಒಲಿದು ಕುಬ್ಜೆಯ ಡೊಂಕನೆ ತಿದ್ದಿ ಸುಂದರಿಯ ಮಾಡಿ ಸುಗುಣನೆ ಸುಗುಣನೆ ನೀನಾಕೆ- ಯಂಗಸಂಗ್ಯಾಕೆ ಬಯಸಿದಿ 27 ಕಲ್ಲಾದಹಲ್ಯೆಯನು ಕಡು ಚೆಲ್ವೆಯನು ಮಾಡಿ ಎಲ್ಲಿ ಮಲಗಿದ್ದ ಮುಚುಕುಂದ ಮುಚುಕಂದನ ಗುಹೆ- ಕೈವಲ್ಯ ಕೊಡಹೋದ್ಯೊ 28 ಮಗ್ಗವನೆ ಹಾಕಿ ಮಾರುಬಟ್ಟೆ ನೇದಿಲ್ಲ ರೊಕ್ಕವನೆ ಕೊಟ್ಟು ತರಲಿಲ್ಲ ತರಲಿಲ್ಲ ದ್ರೌಪದಿಗೆ
--------------
ಹರಪನಹಳ್ಳಿಭೀಮವ್ವ
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ ಪ ಪರಮ ಪದದೊಳಗೆ ವಿಷಧರನ ತಲ್ಪದಲಿ ನೀಸಿರಿ ಸಹಿತ ಕ್ಷೀರವಾರಿಧಿಯೊಳಿರಲುಕರಿರಾಜ ಕಷ್ಟದಲಿ ಆದಿಮೂಲಾ ಎಂದುಕರೆಯಲಾಕ್ಷಣ ಬಂದು ಒದಗಿದೆಯೊ ನರಹರಿಯೆ 1 ಕಡುಕೋಪದಿಂ ಖಳನು ಖಡುಗವನು ಪಿಡಿದು ನಿ-ನ್ನೊಡೆಯನೆಲ್ಲಿಹನೆಂದು ಜಡಿದು ನುಡಿಯೆದೃಢ ಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆಸಡಗರದಿ ಕಂಬದಿಂದೊಡೆದೆ ನರಹರಿಯೆ 2 ಯಮಸುತನ ರಾಣಿಗಕ್ಷಯ ವಸನವನ್ನಿತ್ತೆಸಮಯದಲಿ ಅಜಮಿಳನ ಪೊರೆದೆಸಮಯಾಸಮಯವುಂಟೆ ಭಕ್ತವತ್ಸಲ ನಿನಗೆಕಮಲಾಕ್ಷ ಕಾಗಿನೆಲೆಯಾದಿಕೇಶವನೆ 3
--------------
ಕನಕದಾಸ
ವೇಳೆಗೊದಗಯ್ಯ | ವೇಳೆ ಬಂದು ಒದಗಿದೆ | ಪರಿಹರಿಸೊ ನೀ ಪ ಬಳಗುಳ್ಳಿಭಕುತರು ಬಳಲು ತಿರುವದ ಕಂಡು |ಕಳವಳಿಕೆಯಿಲ್ಲದೆ ಕಳೆವರೆ ಕಾಲವ 1 ಮಳಲು ಹಸಿಯನಗಲಿದಂತೆ ದಾಸರಿಗತಿಶಯವ |ದಣಿಸಿದರೆ ಬಳಿಕಾರುಳಿಸುವರೊ ? 2 ಹಲವ ಹೆತ್ತ ತಾಯಿ ಮೊಲೆ ಹಾಲನುಣಿಸದೆ |ನೆಲೆಯ ದೋರಿ ನಿನ್ನಲಿ ನಿಲಿಸಯ್ಯ ರುಕ್ಮನ 3
--------------
ರುಕ್ಮಾಂಗದರು
ನೀನೇ ಅನಾಥ ಬಂಧು, ಕಾರುಣ್ಯಸಿಂಧುನೀನೇ ಅನಾಥ ಬಂಧು ಪಪತಿಗಳೈವರಿದ್ದರೇನು ಸತಿಯ ಸಮಯಕ್ಕೊದಗಲಿಲ್ಲ ||ಗತಿನೀನೆಂದು ಮುಕುಂದನೆ ನೆನೆದರೆಅತಿ ಚಮತ್ಕಾರದಿಂದೊದಗಿದೆ ಕೃಷ್ಣ 1ಮದಗಜವೆಲ್ಲ ಇದ್ದರೇನುಅದರ ಸಮಯಕ್ಕೊದಗಲಿಲ್ಲ ||ಮದನನಯ್ಯ ಮಧುಸೂದನನೆಂದರೆಒದಗಿದೆಯೋ ತಡಮಾಡದೆ ಕೃಷ್ಣ 2ಶಿಲೆಯಕಾಯಕುಲಕ್ಕೆ ತಂದೆಬಲಿಯೆನ್ನದೆ ಸತ್ಪದವಿಯನಿತ್ತೆ ||ಇಳೆಯೊಳು ನಿನ್ನಯ ದಾಸರ ಸಲಹುವಚೆಲುವ ಮೂರುತಿ ಶ್ರೀಪುರಂದರವಿಠಲ3
--------------
ಪುರಂದರದಾಸರು
ಬರಬೇಕೋ ರಂಗಯ್ಯ ನೀ - ಬರಬೇಕೊ ಪಬರಬೇಕೊ ಬಂದು ಒದಗಬೇಕೊ ಮಮಗುರು |ನರಹರಿ ನಾರಾಯಣ ನೀನಾ ಸಮಯಕೆ ಅ.ಪಕಂಠಕೆ ಪ್ರಾಣ ಬಂದಾಗ - ಎನ್ನ |ನಂಟರಿಷ್ಟರು ಬಂದಳುವಾಗ ||ಗಂಟು ಹುಟ್ಟಿನ ಕಾಲಬಂಟರು ಕವಿದೆನ್ನ |ಗಂಟಲೌಕುವಾಗ ವೈಕುಂಠನಾರಾಯಣ 1ನಾರಿಯು ಪುತ್ರ ಮಿತ್ರರು -ಬಂಧುಗಳು |ಆರೆನ್ನ ಸಂಗಡ ಬಾರರು ||ಆರಿಗಾರಿಲ್ಲ ಯಮನಾರುಭಟಕೆ ಅಸು-|ರಾರಿ ಮೈಮರೆದಾಗ ನೀರೇರುಹನಾಭ 2ಕರಿಪ್ರಹಲ್ಲಾದಾದಿ ಭಕ್ತರ -ಪತಿ|ಕರಿಸಲು ಒದಗಿದೆ ಶ್ರೀಧರ ||ನೆರೆಹೀನನೆನ್ನ ಉದ್ಧರಿಸಿಅಚ್ಯುತನಿನ್ನ |ಚರಣದೊಳಿಂಬಿಡೊ ಪುರಂದರವಿಠಲ 3
--------------
ಪುರಂದರದಾಸರು