ಸ್ಮರಿಸೊ ಹರಿನಾಮ ಏ ಮನುಜಾ
ಸ್ಮರಿಸೋ ಹರಿನಾಮ
ನಿರವಧಿ ಸುಖಧಾಮ ಪರಮ ಪುರುಷಗಿದು
ಪರಿಪೂರ್ಣ ಪ್ರೇಮ ಪ.
ತರಳ ಪ್ರಹ್ಲಾದನ ಪೊರದು ಪಾಂಚಾಲಿಗೆ
ತ್ವರಿತದೊಳಕ್ಷಯವಿತ್ತು
ಸರಸಿಯೊಳಗೆ ಕರಿರಾಜನ ಸಲಹಿದ
ನರ ಕಂಠೀರವ ಕರುಣಿಸುವನು ಬೇಗ 1
ಹಲವು ಜನ್ಮಗಳಲ್ಲಿ ಗಳಿಸಿದ ದುಷ್ಕøತ
ಗಳನೆಲ್ಲ ನಿರ್ಮೂಲಗೊಳಿಸುವುದು
ಜಲಜ ಸಂಭವ ಮಾಳ್ಪ ಕೆಲಸದಿ ಸಿಲುಕದೇ
ನೆಲೆಗೊಂಡು ಸೌಖ್ಯವ ಸಲಿಸಬೇಕಾದರೆ 2
ಕಲಿಕೃತ ಕಲ್ಮಷ ಬಲೆಯಿಂದ ಮೋಚನ-
ಗೊಳಿಸಲು ಹರಿನಾಮವಲ್ಲದಿನ್ನು
ಚಲಿತ ಚಿತ್ತದ ಕರ್ಮಬಲದಿಂದಲಾಹದೆ
ನಳಿನನಾಭನೇ ನೀ ಬೆಂಬಲನಾಗು ತನಗೆಂದು 3
ಉದಯಾರಂಭಿಸಿ ಮತ್ತೊಂದು ದಯ ಪರ್ಯಂತ
ವಿಧಿವಿಹಿತಗಳೆಲ್ಲ ಸದರವೇನೊ
ಪದುಮನಾಭನ ನಾಮ ಒದಗಿದರದು ಪೂರ್ಣ-
ವದರಿಂದ ಸರ್ವರ ಹೃದಯ ನೀ ಮರೆಯದೆ 4
ಸಂಚಿತಾಗಾಮಿಗಳಂಚುವಂ ದಿತಿಜರ
ಸಂಚಯಕನುದಿನ ಸ್ಮರಿಸುವರ
ಕಿಂತಿತಾರಬ್ದ ಪ್ರಪಂಚವ ತ್ವರಿತದಿ
ಮಿಂಚಿನಂದದಿ ತೋರಿ ಪರಿಹಾರಗೊಳಿಪರೇ 5
ಕರುಣಾಭಿಮಾನಿಗಳರಿತು ಮಾಡಿಸುತಿಹ
ನಿರತ ಕೃತ್ಯಗಳೊಂದು ಮೀರದಲೆ
ಹರಿಯಾಜ್ಞೆ ಇದು ಯೆಂದು ಚರಿಸುತಲನುದಿನ
ಪರಮೋತ್ತಮ ಕಾರ್ಯಧುರವಿದೆ ತನಗೆಂದು 6
ನಾಗ ಗಿರೀಂದ್ರನ ನೆನೆದರೆ ಇಹಪರ
ಭೋಗ ಸಾಮ್ರಾಜ್ಯವು ಸ್ಥಿರವಾಹುದು
ವಾಗೀಶನ ಪರಮಾಗಮ ಸಿದ್ಧಾಂತ-
ವಾಗಿಹದಿದೆಯೆಂದು ನೀ ಗುರುತವನಿಟ್ಟು 7