ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿ ಮಾಯಾವಾದನೆ ರಂಗಯ್ಯನುಎಲ್ಲಿ ಮಾಯಾವಾದನೆಪ ಎಲ್ಲಿ ಮಾಯಾವಾದ ಫುಲ್ಲನಾಭಕೃಷ್ಣಚೆಲ್ಲೆ ಗಂಗಳೆಯರು ಹುಡುಕ ಹೋಗುವ ಬನ್ನಿ ಅ.ಪ. ಮಂದ ಗಮನೆಯರೆಲ್ಲ ಕೃಷ್ಣನ ಕೂಡೆಚೆಂದದಿ ಇದ್ದೆವಲ್ಲಕಂದರ್ಪ ಬಾಧೆಗೆ ಗುರಿಯ ಮಾಡಿದನಲ್ಲಮಂದಮತಿ ನಮಗೆ ಬಂದು ಒದಗಿತಲ್ಲ 1 ಸರಸಿಜಾಕ್ಷಿಯರು ಕೂಡಿ ಕೃಷ್ಣನ ಕೂಡೆಸರಸವಾಡುತಲಿದ್ದೆವೆಕರೆಕರೆಗೊಳಿಸಿ ಮನ್ಮಥ ಬಾಧೆಗೊಪ್ಪಿಸಿಚರಣ ಸೇವಕರಾದ ತರಳೆಯರನು ಬಿಟ್ಟು 2 ಭಕ್ತವತ್ಸಲ ದೇವನು ತನ್ನವರನ್ನುಅಕ್ಕರದಲಿ ಪೊರೆವನುಸಿಕ್ಕದೆ ಹೋಗನು ಹುಡುಕುತ್ತ ಹೋಗುವಅಕ್ಕಯ್ಯ ಬನ್ನಿರೆ ಉಡುಪಿ ಶ್ರೀಕೃಷ್ಣನು 3
--------------
ವ್ಯಾಸರಾಯರು
ಗುರುಸ್ತುತಿ ಗುರುಗಳ ಕರುಣವಿದು ಇರುಳು ಹಗಲು ಹರಿಸ್ಮರಣೆಯೊಳಿರುವದು ಪ ಕಲಿಯುಗ ಒದಗಿತಲ್ಲ | ವಿಷಯದಿ ಚಲಿಸಿತು ಮನವೆಲ್ಲ ಇಳೆಯೊಳು ಹಿರಿಯರಿಲ್ಲ ನೆರೆಜನ ಖಳರು ಸಜ್ಜನರಲ್ಲ 1 ವೇದ ಓದುಗಳಿಲ್ಲ ಸುಮ್ಮನೆ ಕಾದಿ ಕಳೆವರು ಕಂಡ್ಹಾಗೆ ಮೋದತೀರ್ಥರ ಮತ ಇದರೊಳು ಓದಿ ಪೇಳುವರಿಲ್ಲ 2 ಮೋಸ ಪೋಗದ ಹಾಗೆ ಹರಿಪದ ದಾಸ್ಯವ ಬಿಡದಾಗೆ ವಾಸುದೇವವಿಠಲನ್ನೆ ಕರುಣದಿ ವಾಸರ ಕಳೆಯುವನೋ | ನಮ್ಮ 3
--------------
ವ್ಯಾಸತತ್ವಜ್ಞದಾಸರು
ಸತಿಯಿಲ್ಲಸುತರಿಲ್ಲ ಬಂದು ಬಾಂಧವರಿಲ್ಲ ನುತ ಕೇಶವನಲ್ಲದೆ ಸದ್ಗತಿ ಎನಗಿಲ್ಲ ಪ ಹೆರರನಾಶ್ರಯಿಸಿ ಬದುಕಬೇಕಲ್ಲ ನರರನನುಸರಿಸಿ ಬಡವಾದೆನಲ್ಲ ಇರುವ ನಾಲ್ಕು ದಿನದ ಬರಿದೆ ಸುಖಕ್ಕಾಗಿ ನರನಿಗೆ ನೀಚನಿಗೆ ಈ ಸ್ಥಿತಿ ಒದಗಿತಲ್ಲ 1 ಹರಿನಿನ್ನ ಭಜಿಸದೆ ಬಲು ಬಾಧೆಯಾಗಿದೆ ಪರಿಪರಿಯ ನೋವನ್ನು ನೀಗುವವರಾರಿಲ್ಲ ಸಿರಿಸಂಪತ್ತಿರುವರೆಗೆ ಸತಿಸುತರೆಲ್ಲ ಕರೆದರೂ ಬರರಲ್ಲ ಬಾಂಧವರು ಸ್ನೇಹಿತರು 2 ಸುಖದಲಿರುವಾಗ ಮನ್ನಿಪರೋ ಎಲ್ಲ ಅಖಿಲಗೋತ್ರಜರು ನೆರೆಹೊರೆಯವರು ಸಖರು ಯಾರಿಲ್ಲ ಸಾವು ಬಂದೆಳೆವಾಗ ಅಖಂಡ ಒಡೆಯ ಜಾಜಿಪುರೀಶ ಕಾಯಬೇಕಯ್ಯ 3
--------------
ನಾರಾಯಣಶರ್ಮರು