ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಟಮಾಯ ಮಟಮಾಯ ದಿಟ್ಟಿಸಿ ನೋಡೆಲೊ ಪ ದುಷ್ಟ ಸಂಸಾರವ ಕುಟ್ಟಿಕುಟ್ಟಿಕೊಂ ದೆಷ್ಟು ಮಾಡಿದರು ಕಟ್ಟಕಡೆಗೆಯಿದು ಅ.ಪ ಕೋಟಿಧನವ ನೀಟಾಗಿ ಗಳಿಸಲೇನು ಸಾಟಿಯಿಲ್ಲದ ಸಂಪತ್ತು ಇರ್ದರೇನು ಕಾಟುಮಾಡಿ ಯಮಗೂಟ ಒದಗಲಾಗ ದಾಟಿ ಹೋಗಬೇಕು ಅಷ್ಟು ಸಂಪದ ಬಿಟ್ಟು 1 ಆನೆಕುದುರೆ ಒಂಟೆ ವಾಹನವಿರಲು ಏನು ನಾನಾಸಿರಿಯು ಮಾನ್ಯ ಮಿರಾಸಿಗಿರಲೇನು ತ್ರಾಣಗುಂಡಿಸಿ ಯಮ ಪ್ರಾಣ ಸೆಳೆಯುವಾಗ ನಾನಾಭಾಗ್ಯ ಬಿಟ್ಟು ತಾನೆ ಹೋಗಬೇಕು 2 ಮಾನಪಾನದಿ ತಾನೆ ಹಿರಿಯನೆನಿಸಲೇನು ನಾನಾಪೊಡವಿಗೋರ್ವ ದಣಿಯಾಗಾಳಿದರೇನು ಪ್ರಾಣೇಶ ಶ್ರೀರಾಮಧ್ಯಾನವೊಂದಿಲ್ಲದಿರೆ ಏನು ಗಳಿಸಿದ್ದೆಲ್ಲ ಹಾನಿಯೆನಿಪುದೆಲೋ 3
--------------
ರಾಮದಾಸರು