ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಕುಮಾರ ಚಾರು ಚರಣಕೆ ನಾ ನಮಿಪೆ ಕೃಪಾಕರ ಪ ಸುಂದರಾನನ ಸ್ಕಂಧ ಕಾಮಗೋ ವಿಂದಸುತ ಸುಂದರಾಂಗ ಪ್ರದ್ಯುಮ್ನನೆ ಇಂದಿರೇಶನ ದಯ ತಂದು ನೀ ಒದಗಯ್ಯ ವಂದಿಪೆ ನಿನ್ನರವಿಂದ ಪಾದಕೆ ನಾ 1 ಸೂರ ಪದುಮಾದಿ ಅಸುರರೆಲ್ಲ ನೀ ಮುರಿದು ಪೊರೆದೆಯೊ ಮೂರು ಜಗವ ಎನ್ನ ಘೋರ ಬಾಧೆಗಳನ್ನು ತರಿದು ನೀ ಪೊರೆಯಯ್ಯ ಧೀರ ಉದಾರನೆ ಸುರಸೇನಾಧಿಪ 2 ಸೋಮವದನ ಉಮೇಶಸುತ ಗುಹ ಪ್ರೇಮದಯದಿ ಭ್ರಮಾಕಲುಷ ಕೀಳೊ ಬೊಮ್ಮನ ತಾತ ಪ್ರಸನ್ನ ಶ್ರೀನಿವಾಸ ವಾಮನ ಶ್ರೀಶನ ಪ್ರೇಮ ಸುಪಾತ್ರನೆ 3
--------------
ಪ್ರಸನ್ನ ಶ್ರೀನಿವಾಸದಾಸರು