ನಮ್ಮ ರಂಗ ಮಧುರೆಗೆ ನಡೆತರಲು ಪ
ಮಥುರೆಗೆ ನಡೆತರಲು ಅತಿ|ಹರುಷದಲಿ ಅಕ್ರೂರನೊಡನೆ|
ರಥದಲಿ ಕುಳಿತು ಫಡ ಫಡಫಡಲೆಂದು|
ಪಥದಲಿ ನಡಸ್ಯಾಡುತಲಿ 1
ಬಿಲ್ಲಹಬ್ಬದ ನೆವದಲ್ಲಿ|ಫುಲ್ಲಲೋಚನ ಮೋಹನ ಕೃಷ್ಣ|
ಇಲ್ಲಿಗೆ ಬಂದನು ಎನುತಲಿ ಕೇಳಲು|
ಎಲ್ಲರು ನಡೆದರು ನೋಡಲಾಗಿ 2
ಆಲಯದೊಳಗೆ ನಿಲ್ಲದೇ|ಬಾಲಕಿಯರು ತಮತಮ್ಮ|
ಚಾಲವರುತಿಹಾ ತೊಟ್ಟಿಲೊಳಗಿನಾ|ಬಾಲಕರಿಗೆ ಮೊಲೆಗುಡದೆ 3
ಒಬ್ಬಳು ಅರೆಯಣ್ಣೆತಲೆಯಲಿ|ಒಬ್ಬಳು ತಿಗರವ ಹಚ್ಚಿದ ಮೈಯಲಿ
ನಡೆದರು ಸಂಭ್ರಮದಿಂದ4
ಅಚ್ಚಮೈಯಲಿ ಕುಳಿತಿರೆ ಒಬ್ಬಳು|ಬಚ್ಚಲೊಳಗೆ ಮಜ್ಜಕನಾಗಿ
ಅಚ್ಯುತನಾತುರದಿಂದಲಿ ಒಬ್ಬಳು ಎಚ್ಚರ
ದೇಹದ ಬಿಟ್ಟು ನಡೆದಳು 5
ಎಲೆಳುಶಿಶುವೆಂದು ಬಗಲಿಲಿ|ಅಳತೆಯ ಮಾನವನಿರಿಸಿಕೊಂಡು|
ನೆಲೆನೊಡದೇ ನಡೆದಳೊಬ್ಬಳು|ಚೆಲುವ ಕೃಷ್ಣನ ನೋಡಲಾಗಿ6
ಕದವನು ಒತ್ತಿಮುಂದಕ|ಒದಗದಿ ಕೆಲವರು ಮಾಳಿಗೆ ಏರಿ|
ಸದಮಲಾನಂದಗ ತಲೆಯನು|ಬಾಗಿ ಪದುಮಕರವ ಮುಗಿದು7
ದಣ್ಣನೆ ನೋಡೀ ನೋಡುತಾ|ಕಣ್ಣುಪಾರಣೆ ಮಾಡಿಕೊಂಡು|
ಮುನ್ನಿನ ದೋಷವ ಕರಗುವ ಪರಿಯಲಿ|
ಪುಣ್ಯ ಸಾಮಗ್ರಿಯ ಮಾಡಿದರಂದು 8
ಕಂಡಾ ಪರಿಯ ರೂಪವಾ|
ಧರಿಸಿಕೊಂಡು ಅಂತರಂಗದಲಿ|ತ್ವರಿತದಿಂದಲಿ ಧ್ಯಾಯಿಸುತಾ9