ನಾಗವೇಣಿಯೆಂದರೆ ಹೀಗೇಕೆ ಮಾಳ್ಪಿರಿ
ಬಾಗಿಲು ಕುಟ್ಟುವುದೇಕೆ ನೀವ್ ಪ
ಬಾಗಿಲು ಬಿಡುವೊಡೆ ಹೇಗದು ಸಾಧ್ಯವೊ
ಬೇಗ ಹೇಳು ನೀನಾರು ಇನ್ನು ಅ.ಪ.
ಆಗಮ ಕದ್ದೊಯ್ದ ಅಸುರನ ಕೊಂದು ನಾ
ನಾನಾಗಲೆ ನಾಲ್ಮೊಗಗಿತ್ತೆ ಕೇಳಿ ಆಗಲೆ
ಆಗಮದಲಿ ನಿನಗರ್ತಿಯಷ್ಟಿದ್ದರೆ
ಮೂಗನ್ಹಿಡಿದು ಕೂಡೋ ಬೇಗ 1
ಮೂಗನ್ಹಿಡಿವ ಒಣಯೋಗಿಯು ನಾನಲ್ಲ
ಆ ಗಿರಿಯನು ನಾ ಪೊತ್ತೆ ಕೇಳಿ
ಈಗ ನಾವರಿದೆವು ನೀ ಗಿರಿ ಹೊರವಡೆ
ಇಂದು 2
ಕಳ್ಳನಲ್ಲ ಭೂಮಿ ಕಳ್ಳನ ಕೊಂದೆನೆ
ಸೂಕರ ನಾನಾಗಿ ಕೇಳಿ
ಘೊಳ್ಳನೆ ನಗುವರು ಕೇಳಿದವರು ಇದ
ಮೆಲ್ಲು ಹೋಗಿ ನೀ ಮಣ್ಣ 3
ಮಣ್ಣು ಮಾತೇಕೆ ಹಿರಣ್ಯಕನನು ಕೊಂದೆ
ಚಿಣ್ಣನ ಕಾಯ್ದೆನು ಕೇಳಿ
ಚಿಣ್ಣರ ಸಾಕ್ಷಿಯ ಬಿಟ್ಟರೆ ನಿನಗಿಲ್ಲ
ಚಿಣ್ಣನಾಗು ನೀ ಹೋಗÉೂ 4
ಸಣ್ಣವನಾದರೂ ಘನ್ನನು ನಾನಾದೆ
ಪುಣ್ಯನದಿಯ ನಾ ಪೆತ್ತೆ ಕೇಳಿ
ಬಿನ್ನಾಣ ಮಾತಿಗೆ ಸೋಲುವರಲ್ಲವೊ
ಬೆನ್ನು ತಿರುಗಿಸಿ ನೀ ಪೋಗೊ5
ತಿರುಗಿಸಿದವನಲ್ಲ ಬೆನ್ನನೊಬ್ಬರಿಗೂ ನಾ
ಪರಶುಧರನು ನಾ ಕೇಳಿ
ಅರಸರಲ್ಲ ನಾವ್ ಸರಸಿಜನೇತ್ರೆಯರು
ಕರುಣರಹಿತ ನೀ ಪೋಗೊ 6
ಚರಣರಜದಿ ನಾ ಶಿಲೆಯನುದ್ಧರಿಸಿದೆ
ಕರುಣರಹಿತನೆ ಪೇಳಿ ನೀವು
ಸರಸ ಮಾತುಗಳನು ಮನ್ನಿಸಿ ಎಮ್ಮನು
ಕರಿಗಿರೀಶ ನೀ ಕಾಯೋ ಸ್ವಾಮಿ 7