ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣ ವಂದಿರೆ ಸಾಕಿನ್ನು ಪ. ಕರುಣ ವಂದಿರೆ ಸಾಕು ಸಿರಿಯರಸನೆ ನಾನಾ ಪರಿಯೊಳನ್ಯರ ಬೇಡಿ ತಿರುಗಲಾರೆನು ಕೃಷ್ಣ ಅ.ಪ. ಪರಮಾಣು ತ್ರುಟಿಲವ ನಿಮಿಷ ಮಾತ್ರ ಯುಗ ಗುರು ಪ್ರಾಣ ಒಳನಾಡಿ ಮುಹೂರ್ತ ಪ್ರಹರ ಮಾಸ ಋತ್ವಯನ ವ- ತ್ಸರಯುಗ ಮಾನವೆಂಬ ಉಪಾದಿಗ ಳಿರಿಸಿ ಭೋಗಗಳನುಂಬ ಮಹಾಕಾಲ ಧುರವಹ ತಾನೆಯೆಂಬಾ ಧೀರತೆಯಿಂದ ಲಿರುವಿ ಲೋಕದಲಿ ತುಂಬಾ ಪಾದ ಪದ್ಮ 1 ತೃಣತರು ಕ್ರಿಮಿಪಕ್ಷಿ ಪಶುನರ ದೇವಕ್ಕ ಳೆಣಿಕಿಯಿಲ್ಲದ ದಿತಿಜಾರಿ ಜೀವರನೆಲ್ಲ ಕುಣಿಸುವ ಬೊಂಬೆಯಂದದಲಾಡಿಸುತ ಲೇಶ ದಣಿವಿಲ್ಲದೆ ಭಕ್ತ ಜನರಿಗೆ ಸುಖಸಾರ ಉಣಿಸಿ ಮದಾಂಧರ ಹಣಿದು ಹಣಿದು ಕುಟ್ಟಿ ಒಣಗಿಸಿ ಬಿಸುಟು ತಿನ್ನುವತ್ತಿದುವಿ ಮೇಲಣ ದುರ್ಗಪತಿಗಳನು ಮನ್ನಣೆಯಿಂದ ತಣಿಸಿ ಕಾಪಾಡುವನು ನೀನಹುದೆಂದು ಮಣಿದು ಬೇಡುವೆ ನಿನ್ನ ಮುರಹರ ಸಲಹಿನ್ನು 2 ಮಾಧವ ಮಂಗಲದಾಯಕ ತವ ಪದ್ಮ ಪಾದ ಸೇವೆಯ ಮಾಡುವಲ್ಲಿಗೆ ಜಾಹ್ನವಿ ಗೋದಾವರಿ ತುಂಗ ಕಾವೇರಿ ಕಲುಷಾವ ನೋದದಿ ಕೃಷ್ಣ ಸರಸ್ವತಿ ಗೋಮತಿ ವೇದವತಿ ಮೊದಲಾದ ನದಿಗಳೆಲ್ಲ ಸಾದರದಲಿ ಸೇರುತ ಬಂದಿಹರೆಂಬ ಗಾಧವಚನ ನಂಬುತ ನಿಂದಿಹೆನು ಕ್ಷೀ ರೋದಧಿ ಗೃಹನಿರತ ಸಾಕಿದೆ ಮುಂದಿ- ನ್ಹಾದಿ ತೋರಿಸು ಸ್ವರತ ಶ್ರೀದ ವೆಂಕಟರಾಜ ಸೇವಕನಾನೆಂದು 3
--------------
ತುಪಾಕಿ ವೆಂಕಟರಮಣಾಚಾರ್ಯ
ಙÁ್ಞನಗುರು ಶುದ್ಧ ಮಡಿವಾಳ ಮನ ಮೈಲಿ ತೊಳೆವ ನಿರ್ಮಳ ಧ್ರುವ ದೃಢ ಮಾಡುವ ಬಂಡೆಗಲ್ಲು ತೊಡೆವ ಸುಭೋಧ ಸಬಕಾರ ಮೇಲು ಹಿಡಿದು ಹಿಂಡುವ ಮನ ಮೈಲು ಕುಡುವ ವೈರಾಗ್ಯದ ಬಿಸಿಲು 1 ಉದ್ದಿ ಒರಸುವ ಸಬಕಾರ ಕೈಯ ಎದ್ದಿ ವಿವೇಕ ಉದರ ನಿಶ್ಚಯ ಶುದ್ಧದೋರಿಸಿ ಸಾಂಪ್ರದಾಯ ಸಿದ್ಧ ಮಾಡುವ ಗುರು ನಮ್ಮೈಯ್ಯ 2 ಸೆಳೆದು ಒಗೆವ ವ್ಯಾಳೆವ್ಯಾಳಗಯ್ಯ ತೊಳೆದು ಅಹಂಭಾವದ ಕಲೆಯ ಕೊಳ್ಳದೆ ಒಗೆವಾ ತಾ ಕೂಲಿಯ ಬಿಳಿದು ಮಾಡುವ ಮೂಳೆ ಕಳಿಯ 3 ಆಶಿ ಎಂಬುದ ಹಾಸಿ ಒಣಗಿಸಿ ಹಸನಾಗಿ ಘಳಿಗೆ ಕೂಡಿಸಿ ಭಾಸಿ ಕೊಡುವ ತಾ ಘಟ್ಟಿಸಿ ಲೇಸು ಲೇಸಾಗಿ ಅನುಭವಿಸಿ 4 ಶುದ್ಧ ಮಾಡಿದ ಮನ ನಿಶ್ಚಯ ಸಿದ್ಧ ಸಾಕ್ಷಾತ್ಕಾರ ನಮ್ಮಯ್ಯ ಸದ್ಬೋಧಿಸಿದ ಙÁ್ಞನೋದಯಸದ್ಗೈಸಿದ ಮಹಿಪತಿಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಡಿ ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ |ಮಡಿ ಮಾಡುವ ಬಗೆ ಬೇರುಂಟು ಪ.ಪೊಡವಿ ಪಾಲಕನ ಧ್ಯಾನ ಮಾಡುವುದು |ಬಿಡದೆ ಭಜಿಸುಮದು ಅದು ಮಡಿಯಾ ಅಪಬಟ್ಟೆಯ ನೀರೊಳಗಿಟ್ಟು ಒಣಗಿಸಿ |ಉಟ್ಟರೆ ಅದು ತಾ ಮಡಿಯಲ್ಲ ||ಹೊಟ್ಟೆಯೊಳಗಿನ ಕಾಮ - ಕ್ರೋಧಗಳ |ಬಿಟ್ಟರೆ ಅದು ತಾ ಮಡಿಯೊ 1ಪರಧನ ಪರಸತಿ ಪರನಿಂದೆಗಳನು |ಜರೆದಹಂಕಾರಗಳನೆ ತೊರೆದು ||ಹರಿಹರಿಯೆಂದು ದೃಢದಿ ಮನದಲಿಇರುಳು ಹಗಲು ಸ್ಮರಿಸಲು ಮಡಿಯೋ 2ಎಚ್ಚರವಿಲ್ಲದೆ ಮಲ ಮೂತ್ರ ದೇಹವ |ನೆಚ್ಚಿ ಕೆಡಲು ಬೇಡಲೊ ಮನವೆ ||ಅಚ್ಚುತಾನಂತನ ನಾಮವ ಮನಗೊಂಡು |ಸಚ್ಚಿಂತೆಯಲಿರುವುದೆ ಮಡಿಯೊ 3ಭೂಸುರರು ಮಧ್ಯಾಹ್ನಕಾಲದಲಿ |ಹಸಿದು ಬಳಲಿ ಬಂದರೆ ಮನೆಗೆ ||ಬೇಸತ್ತು ನಮಗೆ ಗತಿಯಿಲ್ಲ ಹೋಗೆಂದು |ಹಸನಾಗಿ ಉಂಬುವುದು ಅದು ಮಡಿಯೊ ? 4ದಶಮಿ - ದ್ವಾದಶಿಯ ಪುಣ್ಯಕಾಲದಲಿ |ವಸುದೇವ ಸುತನ ಪೂಜಿಸದೆ ||ದೋಷಕಂಜದೆ ಪರರನ್ನು ಭುಜಿಸಿ ಯಮ - |ಪಾಶಕೆ ಬೀಳ್ವುದು ಹುಸಿಮಡಿಯೊ ? 5ಸ್ನಾನ -ಸಂಧ್ಯಾನ ಮೊದಲಾದ ಕರ್ಮಗಳೆಲ್ಲ |ಜಾÕನ -ಮಾನ - ಸುಮ್ಮಾನದಿಂದ ||ದೀನವಂದ್ಯನಸುಜನ ಸಂತರ್ಪಣ |ಅನುದಿನಮಾಡುವುದು ಘನಮಡಿಯೊ6ಗುರು ಹಿರಿಯರ ಹರಿದಾಸರ ನೆನೆದು |ಚರಣಕೆರಗಿ ಭಯ ಭಕ್ತಿಯಿಂದ ||ಪರಿಪರಿ ವಿಧದಲಿ ಪುರಂದರವಿಠಲನ |ನೆರನೆಂಬುವುದು ಉತ್ತಮ ಮಡಿಯೊ 7
--------------
ಪುರಂದರದಾಸರು