ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಲದೆಲೆಯ ಮ್ಯಾಲೆ ಮಲಗಿದ್ದಾದಿಕೇಶವ(ನ) ನೋಡ ಬನ್ನಿರಾಲದೆಲೆಯ ಮ್ಯಾಲೆ ಕೃಷ್ಣ ಬಾಲರೂಪ ಧರಿಸಿ ಅಂಧಕಾರ ಪ್ರಳಯ ಜಲದ ಒಳಗೊಂದಾಲದೆಲೆÉಯ ಮ್ಯಾಲೆ ಕೃಷ್ಣ ಪ ಪ್ರಳಯ ಕಾಲದಲ್ಲೆ ಹರಿಯು ಸರ್ವ ಜೀವರನೆಲ್ಲ ತನ್ನ ಉದರದೊಳಗಿಂಬಿಟ್ಟುಕೊಂಡು ಛಲವ ಮಾಡದಂತೆ ರಂಗ ಬೆರಳು ಬಾಯೊಳಗಿಟ್ಟು ಚೀಪುತ ಹರಳು ಮಾಣಿಕ್ಯದರಳೆಲೆ ಮಾಗಾಯಿ ಕೌಸ್ತುಭ ಕಟಿಸೂತ್ರ ಕರುಣ ಸಾಗರಗಿನ್ನು ವರ ವೈಕುಂಠವಾಸ ಒಂದಾಲದೆಲೆಯ ಮ್ಯಾಲೆ 1 ಅಷ್ಟು ಜೀವರನೆಲ್ಲ ತನ್ನ ಹೊಟ್ಟೆಯೊಳಗಿಂ ಬಿಟ್ಟು ಕೊಂಡು ಸೃಷ್ಟಿ ಲಯಕೆ ಕರ್ತನಾದ ಶ್ರೇಷ್ಠ ಸುಂದರಾಂಗ ತನ್ಹೆಬ್ಬೆಟ್ಟು ಬಾಯೊಳ ಗಿಟ್ಟು ಚೀಪುತ ವಕ್ಷಸ್ಥಳದಿ ಹೆಚ್ಚಿನ ಶ್ರೀವತ್ಸ ತೋರುತ ಉತ್ತಮ ವೈಜ(ಯಂ)ತಿ ವಜ್ರ ಕೆತ್ತಿದ ಕಿರೀಟ ಲಕ್ಷ್ಮೀಚಿತ್ತ ಚೋರನಾದ ಪರಮಾತ್ಮ ಪರಮ ಹರುಷದಿಂ ದ್ವೊಂದಾಲದೆಲೆಯ ಮ್ಯಾಲೆ 2 ಗಂಧ ಕಸ್ತೂರಿ ಪರಿಮಳ ಸುಗಂಧವಾದ ಕುಸುಮ ಕೆಲದಿ ಹೊಂದಿ ಕಟ್ಟಿದ ತುಳಸಿಮಾಲಿಕಿಂದೆ ಪರಮ ಶೋಭಿತವಾದ ಬಂದಿ ಕಂಕಣ ಬಾಹುಪ್ಪುರಿಗಳು ದುಂಡುಮುತ್ತಿನ ಕೂದಲ ಕಾಂತಿ ಕದಪಿಲೆಸೆಯಲು ಅಂದಿಗೆ ಪಾಗಡ ಗೆಜ್ಜೆ ಚೆಂದವಾದ ನಾದಗಳಿಂದ ಇಂದುಕೋಟಿ ರವಿಯ ತೇಜ ಮಂದಹಾಸ ಮುಖದ ಹರಿ ಒಂದಾಲದೆಲೆಯ ಮ್ಯಾಲೆ 3 ಥಳಥಳಿಸುವಂತ್ಹೊಳೆವೊ ಚಕ್ರ ಧವಳವರಣ ಶಂಖ ಕರದಿ ಹವಳದುಟಿಯು ಹರಿಯ ಪದ್ಮ ದಳಗಳಂತಕ್ಷಿಗಳ ಚೆಲುವ ಅರುಣನಂತೆ ಚರಣ ಕರದಲ್ಲಿ ಒತ್ತುವೊ ಸಿರಿಯ ಪರಮಪುರುಷ ನೋಡಿ ಸರಸದಿ ಜರ ಪೀತಾಂಬರ ನಾಭಿಕಮಲಕ್ಕೊಲೆವೊ ಒಡ್ಯಾಣವನೆ ಇಟ್ಟು ಹಲವು ಸೂರ್ಯರಂತೆ ಲಕ್ಷ್ಮೀರಮಣ ಶ್ಯಾಮವರಣ ಹರಿ ಒಂದಾಲದೆಲೆಯ ಮ್ಯಾಲೆ 4 ಅಳಕÀನಂದನ ಪಿತನು ತಾ ಘ- ನೋದಕÀದೊಳು ತಾ ರಂಗ ಚಾಮರ ಎಣಿಕಿಲ್ಲದೆ ಮಾ ಣಿಕ್ಯದಾಭರಣ ಫಣಿಪಮಂಚಶಯನ ನೀಲ ಕನಕರತ್ನ ಬಿಗಿದ್ಹಾಸಿಕೆಯಲಿ ಪಂಚಶರನ ಜನಕ ಜಗವ ನಿಟ್ಟು ತನ್ನಲ್ಲಿ ಅಳಕಗೂದಲು ಚೆಂಡಿಕೆಲ್ಲೆ ಅರಳುಮಲ್ಲಿಗೆ ಸುತ್ತಿಹರಿಗೆ ಝಳಕು ಮಿಂಚಿನಂತೆ ಜಗಕÉ ಬೆಳಕಿನÀಲಿ ಭೀಮೇಶ ಕೃ ಷ್ಣೊಂದಾಲದೆಲೆಯ ಮ್ಯಾಲೆ 5
--------------
ಹರಪನಹಳ್ಳಿಭೀಮವ್ವ
ಬಂದೆನಿಲ್ಲಿಗೆ ಸಂದರುಶನಕ್ಕೆ ಬಂದೆನಿಲ್ಲಿಗೆನ್ನ ಮನದಿ ಬಂದು ನಿಲ್ಲೆಂದು ನಿನ್ನ ವಂದಿಸ್ವರವ ಬೇಡುವೆ ನಾ ನಂದನ ಸುಂದರ ಕೃಷ್ಣ ಬಂದೆನಿಲ್ಲಿಗೆ ಪ ಪಾಲಶರಧಿ ಆಲದೆಲೆಯಲ್ಯೋಗನಿದ್ರೆ ಮಾಡಿ ನಿನ್ನ ನಾಭಿಕಮಲನಾಳದಿಂದ ಆಗ ಅಜನ ಪಡೆದ ಹರಿಯೆ 1 ಸಾಗರವ ಬಿಟ್ಟು ನಾಗಶಯನ ಶೂರಸುತನಲ್ಲುದಿಸಿ ಯೋಗಿಗಳ ಹೃದಯಕಮಲ ಆಲಯವ ಮಾಡಿದ್ದ ದೊರೆಯೆ2 ಕಂದನಾಗಿ ಬಂದು ಕಾಳಿಂದಿ ದಾಟಿ ನಂದಗೋಕುಲ ವೃಂದಾವನದಿ ಗೋವುಕಾಯ್ದ ಇಂದಿರೇಶ ಅಜನಪಿತನೆ 3 ಅಷ್ಟಮಠದ ಯತಿಗಳಿಂದ ಮುಟ್ಟಿಪೂಜೆಗೊಂಬುವಂಥ ಶ್ರೇಷ್ಠರೊಳಗೆ ಶ್ರೇಷ್ಠ ನಿನ್ನುತ್ಕøಷ್ಟಮಹಿಮೆ ನೋಡಲೀಗ4 ಧ್ವಜ ವಜ್ರಾಂಕುಶ ರೇಖವುಳ್ಳ ಪದುಮಪಾದ ನೋಡಲೀಗ5 ದೊಡ್ಡ ಮುತ್ತು ವಜ್ರದ್ಹರಳಿನಡ್ಡಿಕೆ ಉಡಿದಾರ ಹೊಳೆಯೆ ಒಡ್ಯಾಣವನೆಯಿಟ್ಟ ಜಂಘÉ ಜಾನುದ್ವಯವ ನೋಡಲೀಗ6 ಉದರದಲ್ಲೀರೇಳುಲೋಕ ಅಡಗಿಸಿದನಂತಶಯನ ಪದುಮ ಪೊಕ್ಕಳಿಂದ ಬ್ರಹ್ಮನ ಪಡೆದ ಪರಮಾತ್ಮನ್ನ ನೋಡ7 ವಂಕಿ ಬಾಹುಪುರಿಗಳಿಂದ ಕಂಕಣ ಭೂಷಣಗಳೊಪ್ಪೆ ಕರವ ನೋಡ8 ನೀಲವರಣ ನಿನ್ನ ಬೆರಳು ಸಾಲು ಮಾಣಿಕ್ಯ ಮುದ್ರಿಕಿಂದ್ಹೊಳೆಯೆ ಲೀಲೆಯಿಂದ ಗಿರಿಯೆತ್ತಿದ ಗೋಪಾಲಕೃಷ್ಣ ನಿನ್ನ ನೋಡ 9 ವೈಜಯಂತಿ ತೋರ ಮುತ್ತಿನೆಳೆÀಗಳ್ಹೊಳೆವೋ ಶ್ರೀದೇವೇರಿಗಾಶ್ರಯವಾಗಿದ್ದಿ ್ವಶಾಲ ವಕ್ಷಸ್ಥಳವ ನೋಡ10 ಪಚ್ಚೆಪದಕ ಪಾರಿಜಾತ ಅಚ್ಚ ಮಲ್ಲಿಗೆ ತುಳಸಿಮಾಲೆ ಶ್ರೀ- ಕೌಸ್ತುಭ ಶೃಂಗಾರ ಕೊರಳ ಸಿರಿಯರಸು ನಿನ್ನ ನೋಡ11 ಮಧ್ವರಾಯರು ಕೈಯ ಬೀಸೆ ಎದ್ದು ಬಂದು ಹಡಗದಿಂದಿ ಲ್ಲಿದ್ದಾನುಡುಪಿಕ್ಷೇತ್ರದಿಯೆಂದು ಮುದ್ದುಕೃಷ್ಣನ ಮುಖವ ನೋಡ12 ಕ್ರೂರಕಂಸನ(ಅ)ಪ್ಪಳಿಸಿ ದ್ವಾರಾವತಿಯಲ್ಲಿದ್ದ ಅಷ್ಟಭಾರ್ಯೇರಿಂದ್ವಿ- ಹಾರ ಮಾಡಿದ್ವಾರಿಜಾಕ್ಷನ್ವದನ ನೋಡ 13 ಚಂದ್ರನಂತೆ ಹೊಳೆವೊ ಮುಖದಿ ದುಂಡು ಮುತ್ತಿನ ಮೂಗುತಿನಿಟ್ಟು ಕುಂದಣದ್ವಜ್ರ ಬಿಗಿದ ಕರ್ಣಕುಂಡಲವನ್ನು ನೋಡಲೀಗ14 ಕೇಸರಿ ಗಂಧ ಕಸ್ತೂರಿಯ ನಾಮ ತಿಲಕ ಒಪ್ಪೋವಜ್ರದರಳೆಲೆ ದೇವಕೀಸುತನ (ನೋಡ) 15 ಬಾಲಭಾಸ್ಕರ ಕೋಟಿಲಾವಣ್ಯರೂಪಗೆಲುವ ಕಾಂತಿ ಸಾಲುದೀವಿಗೆ ಸೊಬಗು ಕಮಲದಳಾಯತಾಕ್ಷ ಹರಿಯ ನೋಡ16 ಕೆಂಪುಹರಳು ಝಗ ಝಗಿಸುವೊ ಪಂಚರತ್ನದ ಕಿರೀಟ ಚಂಚಲಾಕ್ಷ ಹರಿಯ ಶಿರದಿ ಮುಂಚೆ ನೋಡಿ ಮುಗಿವೆ ಕೈಯ17 ಅಸುರರ್ವಂಚಿಸಮೃತ ಬೀರಿ ಪಶುವಾಹನಗೆ ಮೋಹ ತೋರಿ ಮೋಸದಿಂದ ಭಸ್ಮಾಸುರನ ನಾಶಮಾಡಿದ ನಾರಿ ನೋಡ18 ಲವಣಶರಧಿತೀರ ಮಧ್ವ ಸರೋವರದಲಿ ಶುದ್ಧಸ್ನಾನ ಪರಮ ಮಂತ್ರ ಜಪಿಸೋ ನಿನ್ನ ಶರಣು ಸುಜನಜನರ ನೋಡ19 ಉತ್ತಮ ವೈಕುಂಠ ಬಿಟ್ಟೀ ಉಡುಪಿಯಲ್ಲಿ ವಾಸವಾಗಿ ಭಕ್ತಜನರಭೀಷ್ಟಕೊಡುವೋ ನಿತ್ಯಮುಕ್ತ ನಿನ್ನ ನೋಡ20 ಶ್ರೀಶನೊಲಿಸಿದ್ಹನುಮ ಭಾರತೀಶನಾದ ಮಧ್ವರಾಯರ ದಾಸರ ದಾಸತ್ವಕೊಡು ಭೀಮೇಶಕೃಷ್ಣಂದಯದಿ ನೋಡ 21
--------------
ಹರಪನಹಳ್ಳಿಭೀಮವ್ವ