ಪಾದ ನೋಡಿದೆ ಪ
ಚೆನ್ನದೇವಿಯ ಪಾದಕೆರಗಿದೆ ಮನ್ನಿಸೆಂತೆಂದವಳ ಬೇಡಿದೆ ಅ.ಪ.
ಚರಣ ಯುಗಳಲಿ ಮೆರೆವ ನೂಪುರಧರಿಸಿ ಪೀಠದೊಳಿಂದಿರೆಜರದ ಶೀರೆಯನುಟ್ಟು ನಡುವೊಳುಹಿರಿದು ಒಡ್ಯಾಣದೊಳು ನಿಂದಿರೆ 1
ಕುಂಡಲ ಮೂಗು ಮುಕುರವುಪರಮ ತೇಜದ ಸೊಬಗ ತಂದಿರೆ 2
ಹೊಳೆವ ಕಂಗಳು ಹಣೆಯ ಕುಂಕುಮಥಳಿಸೆ ಸರಸಿಜ ಮಂದಿರೆಬಿಳಿಯ ಕೊಡೆಯನು ಹಿಡಿವ ತೆರದಲಿಎಳೆಯ ನಾಗವು ಹಿಂದಿರೆ 3
ಬೆರಳೊಳುಂಗುರ ಕುರುಳು ಸುಂದರಹೆರಳು ಸಿಂಗರದಿಂದಿರೆತಿರುಳು ಗಂಧದ ಸರಳ ಮೂರ್ತಿಯತರಳೆ ಎನ್ನಾಯ ಮುಂದಿರೆ 4
ಧೀರ ಭಕುತರ ಪೊರೆವುದಕೆ ಕರವೀರ ಪುರದೊಳು ಬಂದಿರೆಧಾರುಣೀಯೊಳು ಮೆರೆವ ಗದುಗಿನವೀರನಾರಾಯಣನ ಚಂದಿರೆ5