ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಣಿದು ಮಲಗಿದೆನು ನಾನು-ದಣಿದು ಮಲಗಿದೆನುಮಣಿದೆ ಗುರುವಿಗೆ ಹಣಿದೆ ಶತ್ರುಗಳತಣಿದೆ ರಕ್ತವ ಕುಣಿದೆ ತಲೆಗಳಘಣ ಘಣ ಘಣ ಘಣ ನಾದವ ಕೇಳುತಮಣಿಮಯ ಮಂಟಪ ಉನ್ಮನಿ ಬಯಲಲಿ ಪ ತರಿಸಿ ತಾಪವನು ಕಾಲಲಿ ಒರೆಸಿ ಮಮತೆಯನುಹರಿಸಿ ಸಂಶಯ ಹುರಿಸಿ ದುರ್ಗುಣಕೊರೆಸಿ ವ್ಯಸನವ ಜರಿಸಿ ಮದಗಳಸುರಿ ಸುರಿ ಸುರಿವ ಸುಧಾ ಕಾರಂಜಿಯಮೆರೆವ ಸಹಸ್ರಾರ ಚಪ್ಪರ ಮಂಚದಿ 1 ಹೊಡೆದು ವಾಯುಗಳ ತುಂಡರಿಸಿ ಕ್ಲೇಶಗಳಮಡಿಯೆ ಈಷಣವು ಕಡಿಯೆ ಕಲ್ಪನೆಕೆಡೆಯೆ ಭ್ರಾಂತಿಯು ಒಡೆಯೆ ಶತ್ರುಗಳುಕಿಡಿ ಕಿಡಿಯುಗುಳುತ ವಿಷ ಮೂರ್ಧ್ನಿಯಬಿಡಿ ಮುತ್ತುದುರುವ ಹಂಸತೂಲದಿ2 ಬಳಿದು ವ್ರತಗಳನು ಎಳೆದು ಮತಗಳನುತುಳಿದು ಗರ್ವವ ತೊಳೆದು ಶೋಕವಮುರಿದು ರಾಗವ ಸೆಳೆದು ಮಾನವಥಳಥಳ ಬೆಳುದಿಂಗಳಿನೊಳುಬಲು ಚಿದಾನಂದ ಬ್ರಹ್ಮವೇ ಆಗಿಯೆ 3
--------------
ಚಿದಾನಂದ ಅವಧೂತರು
ಬ್ಯಾಡೋ ಒಬ್ಬರ ಮನೆಗೆ ನೀ ಪೋಗ ಬ್ಯಾಡೋ ಒಬ್ಬರ ಮನೆಗೆ ಪ ಗಾಡಿಕಾರನೆ ಕೃಷ್ಣ ಚಾಡಿ ಮಾತನು ಕೇಳಿ ಗಾಡನೆ ಕಿವಿಮುಚ್ಚಿ ಓಡಿಸಿದೆ ಗೋಪಿಯರ ಅ.ಪ ಕಟ್ಟಿದ್ದ ತುರುಕರುಗಳ ಬಿಚ್ಚಿ ಪೋಗುವದಿದು ನಿಶ್ಚಯವೆಂದು ಪೇಳ್ವರೊ ಸ್ವಚ್ಛ ಕರುಗಳ ಕಣ್ಣುಮುಚ್ಚಿ ಪಾಲೆಲ್ಲ ಕುಡಿದ ಅಚ್ಯುತನಿಗೆ ಬುದ್ಧಿ ಮತ್ತೆ ನೀ ಪೇಳೆಂಬರು 1 ಮಕ್ಕಳೆಲ್ಲರು ಕಯ್ಯೊಳು ಬಟ್ಲಲಿ ಅವ- ಲಕ್ಕಿಯ ತಿನ್ನುತಿರಲು ಘಕ್ಕನೆ ಬಡಿಯೆ ದಿಕ್ಕು ದಿಕ್ಕಿಗೆ ಚಲ್ಲೆ ಬಿಕ್ಕಿ ಬಿಕ್ಕಿ ಅಳುತಾರೆ ಗೋಪಕ್ಕ ನೀನೋಡೆಂಬರು 2 ವಾಸುದೇವಗೆ ಹರಕೆಯ ಮಾಡಿ ನವ- ನೀತ ಮೀಸಲು ಮಾಡಿರೆ ಮೀಸಲಳಿದು ಕೋತಿ ಮಾರ್ಜಾಲಗಳಿಗುಣಿಸಿ ನೀತಿ ಪೇಳುವ ಶ್ರೀನಾಥ ನೋಡೆಂಬರು 3 ಗೊಲ್ಲ ಬಾಲಕಿಯರೆಲ್ಲ ಪಾಲ್ಮೊಸರು ಮಾರೆ ಮೆಲ್ಲನೆ ಪೋಗುತಿರಲು ಗುಲ್ಲು ಮಾಡದೆ ಕವಣೆ ಕಲ್ಲಿಂದ ಕುಂಭ ಒಡೆಯೆ ಚಲ್ಲಿ ಪಾಲ್ಮೊಸರು ಸೂರೆ ನಲ್ಲೆ ನೀ ನೋಡೆಂಬರು4 ಮತ್ತೆ ಕೇಳಮ್ಮ ಯಶೋದೆ ನಾವೆಲ್ಲ ಆಣಿ ಮುತ್ತು ಪೋಣಿಸುತಿರಲು ಸುತ್ತ ಮುತ್ತಲು ನೋಡಿ ಮುತ್ತು ಸೂರೆ ಮಾಡಿದ ಕರ್ತೃ ಶ್ರೀ ಕಮಲನಾಭ ವಿಠ್ಠಲನ ನೋಡೆಂಬರು5
--------------
ನಿಡಗುರುಕಿ ಜೀವೂಬಾಯಿ
ನಿನ್ನ ನಾನೇನೆಂದೆನೆ ಬಗಳಾಮುಖಿ ನಿನ್ನ ನಾನೇನೆಂದೆನೆನಿನ್ನ ನಾನೇನೆಂದೆ ತತ್ವವ ಕೇಳುತ ಚೆನ್ನಾಗಿಎನ್ನ ಬಳಿ ಕುಳ್ಳಿರೆಂದೆನಲ್ಲದೇಪಹತ್ತಿಯನರೆ ಎಂದೆನೇ ಹಳ್ಳದ ನೀರಹೊತ್ತು ಹಾಕೆಂದೆನೆ ಮತ್ತೆ ಹರಡಿಯ ತೋರಿ ಬೀ-ಸುತ್ತೆ ಚವುರಿಯಲಿಮತ್ತೆ ಗಾಳಿಯ ನೀಗ ಬೀಸೆಂದೆನಲ್ಲದೇ1ಕುಸುಬೆಯ ಒಡೆಯೆಂದೆನೇ ಕುದುರೆಯ ಮೈ-ಹಸನಾಗಿ ತೊಳೆಯೆಂದೆನೇಹೊಸ ಪೀತಾಂಬರವನುಟ್ಟು ಹೂವಮುಡಿಯೊಳು ಇಟ್ಟುಅಸಿಯ ಹಿಡಿದು ಮುಂದೆ ನಡೆಯೆಂದೆನಲ್ಲದೆ2ಕಲ್ಲನು ಹೊರು ಎಂದೆನೆಎಲ್ಲ ಕೆಲಸವನೀಗ ಮಾಡೆಂದೆನೆಬಲ್ಲಂತೆ ಪಾರುಪತ್ಯವನು ಮಾಡುತ್ತಾ ಕಾಲ್ಗೆಜ್ಜೆಘುಲ್ಲೆನಿಸಿ ನಡೆ ಎಂದೆನಲ್ಲದೇ3ಗೋಡೆಯನು ಬಳಿ ಎಂದೆನೆರಾಗಿಯ ಹಿಟ್ಟನು ಬೀಸೆಂದೆನೆಈಡಾಗಿ ಒಪ್ಪುವಾಭರಣಗಳ ನೀ ತೊಟ್ಟುಆಡುತ್ತ ಮಠದೊಳಗೆ ಇರು ಎಂದೆನಲ್ಲದೇ4ಬಟ್ಟೆಯನು ಒಗೆ ಎಂದೆನೆದುಷ್ಟರನು ಕೂಡಿ ನಲಿಯೆಂದೆನೇಶಿಶು ಚಿದಾನಂದ ಬ್ರಹ್ಮಾಸ್ತ್ರ ದೈವ ತಾನಿಷ್ಟ ದೇವತೆಯಾಗಿ ನೆಲೆಸೆಂದೆನಲ್ಲವೆ5
--------------
ಚಿದಾನಂದ ಅವಧೂತರು