ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋವುಗಳ ತಾಳಲಾರೆ ನೊಂದುಕೊಂಡು ಇರಲಾರೆ ಕಾವುದಯ್ಯ ವೆಂಕಟೇಶ ಕರುಣದಿಂದೆನ್ನ ಪ ಕಣ್ಣಿಗೆ ಕಾಣದ ನೋವು ಹುಣ್ಣುಗಳಿಲ್ಲದ ನೋವು ಬಣ್ಣವು ಮಾಸಿದ ನೋವು ಬಲುಹಾದ ನೋವು ಎಣ್ಣಿದುಯಿಲ್ಲದ ನೋವು ಎಣಿಕೆಗೊಳ್ಳದ ನೋವು ಬಣ್ಣನೆ ನುಡಿಯ ನೋವು ಬಂದೀತು ನೋವು 1 ದುಷ್ಟರಿಂದ ನೊಂದ ನೋವು ಹೊಟ್ಟೆಯೊಳ್ಹುಟ್ಟಿದ ನೋವು ಕಷ್ಟಗಳ ಬಿಟ್ಟ ನೋವು ಕಡುಹಾದ ನೋವು ಇಷ್ಟರು ಇಲ್ಲದ ನೋವು ಇಂತಾದ ನೋವು 2 ಬಡವನಾಗಿಹ ನೋವು ಒಡೆಯರಿಲ್ಲದ ನೋವು ಕೇಡುಗರ ನುಡಿಯ ನೋವು ಕೆಟ್ಟಿಹ ನೋವು ಪಡೆದ ಕರ್ಮದ ನೋವು ಪಾಪವೆಂಬುದು ನೋವು ಕಡೆಯ ಕಾಲದ ನೋವು ಕಾಳಾಹಿ ನೋವು 3 ವಿದ್ಯೆವಿಲ್ಲದ ನೋವು ಬುದ್ಧಿ ಕೆಟ್ಟಿಹ ನೋವು ಸಿದ್ಧಿಯಿಲ್ಲದ ನೋವು ಸಿಟ್ಟೊಂದು ನೋವು ಇದ್ದುಯಿಲ್ಲದ ನೋವು ಇಚ್ಛೆಗೊಳ್ಳದ ನೋವು ಬದ್ಧವಾಗಿಹ ನೋವು ಬಳಲುವ ನೋವು 4 ಇಂತು ನೋವುಗಳೆನ್ನ ಭ್ರಾಂತಿಯನು ಬಡಿಸುತಿವೆ ಪಂಥ ಬೇಡವೊ ಲಕ್ಷ್ಮಿಕಾಂತಯೆನ್ನಯ ಬಳಿಗೆ ಅಂತರಂಗದಿ ಬಂದು ಚಿಂತಿತಾರ್ಥತವನೀಯೊ ಯಂತ್ರದಾಯಕನಾದ ವರಾಹತಿಮ್ಮಪ್ಪರಾಯ 5
--------------
ವರಹತಿಮ್ಮಪ್ಪ
ಸರ್ವವು ಹರಿಗೊಪ್ಪಿಸಿದರೆ ನಿಶ್ಚಿಂತೆ ಗರ್ವದಿಂದಲಿ ವ್ಯರ್ಥ ಕೆಡದಿರು ಭ್ರಾಂತೆ ಪ. ಲೇಶ ಸ್ವತಂತ್ರವನಿತ್ತದ ನಂಬೀ ಶಾಭಿಮಾನದಿ ಮಾಡುವ ಡೊಂಬಿ ದೋಷಗಳಿಂದಾಹ ಫಲವೆ ನೀನುಂಬಿ ವಾಸುದೇವನ ಮೂರ್ತಿಯನೆಂತು ಕಾಂಬಿ 1 ಹಸುತೃಷೆ ನಿದ್ರೆ ತಡೆಯಲೊಲ್ಲಿ ಯಾಕೆ ದಶಕರಣಗಳು ದುರ್ವಿಷಯದಿ ನೂಕೆ ವಶವಿಲ್ಲದಲೆ ಬಿದ್ದು ಬಳಲುವಿ ಯಾಕೆ ವಸುದೇವ ಸುತನ ಮರೆಯದಿರು ಜೋಕೆ 2 ಸತ್ಯ ಸಂಕಲ್ಪನಲ್ಲದೆ ಕರ್ತನಾವ ತತ್ವೇಶರರಿತು ಕರ್ಮವ ಮಾಳ್ಪ ಸೋವ ನಿತ್ಯ ನೀ ವರಿತ ಹಮ್ಮಮತೆಯ ಭಾವ ಹತ್ತದಂತಿರೆ ಕಾವ ಕರುಣಾಳು ದೇವ 3 ಒಡೆಯರಿಲ್ಲದೆ ಪೋದ ವೃಕ್ಷದ ಫಲವ ಬಡಿದು ತಿಂಬುವರು ಕಂಡವರೆಲ್ಲ ನೋಡು ಕರ್ಮ ಮಡದಿ ಮೊದಲುಗೊಂಡು ಕಡಲಶಯನಗರ್ಪಿಸುತ ಕಷ್ಟ ದೂಡು 4 ವಹಿಸು ಭಾರವ ಲಕ್ಷ್ಮೀಕಾಂತನ ಮೇಲೆ ಇಹರಹರಾದರದಿಂದ ತಲ್ಲೀಲೆ ಮಹಿಮೆಯ ಪೊಗಳಿ ತೂಗಾತನೂಯ್ಯಾಲೆ ಅಹಿಪತಿ ಗಿರಿರಾಜ ಎತ್ತುವ ಮೇಲೆ 5
--------------
ತುಪಾಕಿ ವೆಂಕಟರಮಣಾಚಾರ್ಯ