ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಡುಕಿ ಕರೆತಾರೆ ಸಖಿ ಜಡಜನಯನ ಒಡೆಯನ್ಹಂಬಲ ಪಾದ ಗಡನೆ ಪೋಗಿ ಪ ಧ್ಯಾನಧೃಢ ಅವನು ಇರುವ ಸ್ಥಾನ ಪೇಳುವೆ ಜಾಣೆ ಕೇಳೆ ಹಗಲು ಇರುಳು ಖೂನವಿಲ್ಲವನಿಹ್ಯ ಸ್ಥಳದಿ ತಾನೆತಾನಾಗಿ ಸೂಕ್ಷ್ಮದಿ ಶೂನ್ಯ ಪೀಠದಿ ವಾಸಿಪ ಜಾಣನ ಜವದಿಂ ಪೋಗಿ 1 ಅರಿದು ಮರೆದಿರೆ ಅವನ ಗುರುತು ಒರೆಯುವೆ ಜರಾಮರಣಿವಲ್ಲವಗೆ ಧರಿಸಿರುವಂತವತಾರ ತಿರುಗಲು ಮೂಡವು ಅಡಿಗಳು ನೆರಳೇ ಇಲ್ಲವು ನಿಲ್ಲಲು ಶರೀರವಿಲ್ಲದೆ ತೋರುವ ಪರಮನ ತ್ವರಿತದಿ ಹಿಡಿದು 2 ಪ್ರೇಮ ಸುಂದರೀ ಅವನ ನಾಮ ಪೇಳುವೆ ನೇಮದಿಂದ ಕೂಗುತಿಹ್ಯವು ಸಾಮಯಜುರಾದಿ ವೇದವು ಆಮಹಮಹಿಮನ ಘನತರ ನಾಮದ ನೆಲೆಯೇ ಸಿಗದಿದೆ ಕಾಮಿನಿಯಂಥ ಸ್ವಾಮಿ ಶ್ರೀ ರಾಮ ಸದ್ಗುರು ಪ್ರಭುವಿನ 3
--------------
ರಾಮದಾಸರು