ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರವ ಪಿಡಿ ಗುರುರಾಯ | ಶಿರಬಾಗಿ ಬೇಡುವೆ ಪೊರೆಯೊ ಸತ್ಕವಿಗೇಯ | ನೆರೆನಂಬಿದೆನು ನೀ ಮರೆಯದಿರು ಶುಭಕಾಯ | ಹೇ ಸೂರಿವರ್ಯ ಪ ಉರಗಕೇತನ ಮೊರೆಯ ಲಾಲಿಸಿ ತರಣಿಜನಿಗೆರಡೊಂದು ಯುಗದಲಿ ಧುರದಿ ಸಾರಥಿಯಾಗಿ ಸ್ಯಂದನ ಭರದಿ ನಡೆಸಿದ ಪರಮ ಪುರುಷನೆ ಅ.ಪ ಶರಣು ಜನ ಸುರಧೇನು | ಹೇ ತಾತ ನೀ ಮೂರೆರಡು ಜನುಮಗಳನ್ನು | ಕಳೆದು ಮ ತ್ತುರುವ ಅವತಾರವನು ಭಕ್ತಿಪೂರ್ವಕ ಪಿರಿಯರಾಜ್ಞದಿ ನೀನು ಪೂರೈಸಲಿನ್ನು ಧರಣಿಯೊಳಗವತರಿಸಿ ನರರಿಗೆ ಅರಿಯದಂದದಿ ಹರಿಯ ದಿಸೆಯೋಳ್ ಹರಿಯ ಸ್ಮರಿಸುತ ಚರಿಪ ಧೊರೆ ತವ ಚರಣ ದರುಶನಗರೆದು ಕರುಣದಿ 1 ಕ್ಲೇಶ ತಡಮಾಡದಲೆ ನೀ ಭವ ಪಾಶ | ದೃಢಮನವ ಕೊಡು ನಿ ನ್ನಡಿಗಳಲಿ ನಿರ್ದೋಷ | ನುಡಿಯಲಾಲಿಸಿ ಬಿಡದೆ ಮಾಡುಪದೇಶ ಪೊಡವೀಶದಾಸ ಒಡೆಯನೇ ನೀನಡಗಿ ಎನ್ನನು ಕಡೆಗೆ ನೋಡಲು ಪಡೆದ ಜನನಿಯು ಪಿಡಿದು ಬಾಲನ ಮಡುವಿನೋಳ್ ತಾ ಬಿಡುವ ತೆರ ತವ ನಡತೆ ಎನಿಪುದು 2 ಮಂದನಾನಿಜವಯ್ಯ | ಸಂದೇಹವಿಲ್ಲದೆ ಕುಂದು ಎಣಿಸದೆ ಜೀಯ ಬಂದೆನ್ನ ಮನದಲಿ ನಿಂದು ನೀಸಲಹಯ್ಯ ವಂದಿಪೆನು ಶ್ರೀ ಪು ರಂದರಾರ್ಯರ ಪ್ರೀಯ ಆನಂದ ನಿಲಯ 3
--------------
ಶಾಮಸುಂದರ ವಿಠಲ
ಪದ್ಮೇಶ ವಿಠ್ಠಲನೆ | ಪೊರೆಯ ಬೇಕಿವನಾ ಪ ಸನ್ಮುದವ ನೀನಿತ್ತು ಪ್ರೇಮದಲಿ ಸಲಹೋ ಅ.ಪ. ಮನೊಮಾನಿ ಒಡೆಯನೇ | ಮನಸಿನಲಿ ನೀನಿದ್ದುಮನೊ ವಿಕಾರಕ್ಕೆಡೆಯು | ಉಚಿತವೇ ಹರಿಯೇ |ಮನಶಾಂತಿ ಕರುಣಿಸುತ | ಘನ್ನ ಸಾಧನಗೈಸೆಗುಣ ಉಳ್ಳವನು ಇವನು | ಅನಿಲಾಂತರಾತ್ಮಾ 1 ಆದಿ ಮೂರುತಿ ಹರಿಯೆ ಭೇಧ ಪಂಚಕತಿಳಿಸಿಮೋದ ತೀರ್ಥರ ಶಾಸ್ತ್ರ | ಭೋಧ ವದಗಿಸುತಾಸಾಧನ ಸುಮಾರ್ಗದಲಿ | ನೀದಯದಲಿಡು ಇವನವೇದಾಂತ ವೇದ್ಯ ಹರಿ | ಬಾದರಾಯಣನೇ 2 ತೈಜಸನು ನೀನಾಗಿ | ಯೋಜಿಸಿದ ಅಂಕಿತವಮಾಜದಲೆ ಇತ್ತಿಹೆನೊ | ಕಾರುಣ್ಯಮೂರ್ತೇಮೂಜಗಜ್ಜನ್ಮಾದಿ | ಕಾರಣನೆ ಸಂಸಾರಗೋಜುಗಳ ಬಿಡಿಸೊ ನಿ | ವ್ರ್ಯಾಜ ಮೂರುತಿಯೇ 3 ಸಾಧು ಸತ್ಸಂಗಗಳ | ನೀ ದಯದಿ ಕೊಟ್ಟವಗೆಕಾದುಕೋ ಕೈ ಬಿಡದೆ | ಯಾದವರೊಡೆಯಾಬಾಧೆ ಮನಸಿಗೆ ಬಂದಿ | ಹುದ ಕಳೆದು ಸಂತವಿಸುಮೋದ ಮುನಿ ಸಂಪ್ರೀಯ | ಧನ್ವಂತ್ರಿ ದೇವಾ 4 ಪತಿ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಪುಂಡಲೀಕವರದನೇ | ಕುಂಡಲೀಶಯನನೇ ||ಗಂಡರಿಗೆ ಗಂಡನಾದ | ಪಾಂಡುರಂಗ ರಾಯನೇ ಪ ಅಮ್ಮಾ ನಮ್ಮ ಒಡೆಯನೇ | ಬೊಮ್ಮಾದಿಕರ ವಂದ್ಯನೇ ||ಹಮ್ಮಿನವರ ಹಲ್ಲು ಮುರಿದು | ಸಮ್ಮತರ ಸಲಹುವನೇ 1 ಕಾಲಕರ್ಮ ರಹಿತನೇ | ನೀಲಮೇಘಶ್ಯಾಮನೇ ||ಛಲನ ಮಾಡಿ ಬಲಿಯ ಗೆದ್ದ | ಚೆಲುವ ಪದ್ಮನಾಭನೇ 2 ಅವ್ಯಯ ಸ್ವರೂಪನೇ | ಸವ್ಯಸಾಚಿ ಮಿತ್ರನೇ ||ಹವ್ಯಕವ್ಯ ಭೋಕ್ತನಾದ | ದಿವ್ಯ ರುಕ್ಮಭೂಷನೇ 3
--------------
ರುಕ್ಮಾಂಗದರು
ಮುಟ್ಟದಿರಿಗೋಪವನಿತೆಯರು ಗಲಭೆಯದೇನುತೊಲಗಿರೇ ತೊಟ್ಟಿಲಂ ತೂಗದಿರಿ ಕೃಷ್ಣನೆದ್ದರೆ ಕಾಡದಿರನೆನ್ನಾ ಪ ಮಿಸುನಿದೊಟ್ಟಿಲೊಳಂತೆ ದುಪ್ಪದುಪ್ಪಳಿನ ಹಾಸಿನಲಿ ಮಂದಾರ ಕುಸುಮಗಳ ಜಾಜಿ ಮಲ್ಲಿಗೆ ಸೇವಂತಿಗೆ ಪಂಕೇರುಹದಾ ಎಸಳುಗಳ ಪಸರಿಸಿಯೆ ಮಲಗಿಸಿದೆ ಪಾಲೆರದು ಮೊಲೆಯೂಡಿ ಪೀತಾಂಬರವನೆ ಹೊದ್ದಿಸೀ | ಹಸುಳೆಯನಮಲ ಕೋಮಲಾಂಗನನಂಗಕೋಟಿಗಳ ನಾ ಚಿಸಿ ಚಿತ್ತಿನ ಪುತ್ಥಳಿಯ ಸಚ್ಚಿದಾನಂದ ಮೂರುತಿಯಾ ಬಿಸಜಾಕ್ಷನಂ ಕೃಷ್ಣನಂ ಬಲದೇವಸಹಜಾತನಂ ಕುಸುಮನಾಭನಂ ಜಲದನೀಲನಂ ದಿವಿಜಪಾಲನಂ 1 ಬಿಡದೊತ್ತಿಯಪ್ಪಿ ಪರಮಾನಂದ ಜಲಧಿಯೊಳಗೋಲಾಡಿ ಸಂತುಷ್ಟಿಯಿಲ್ಲವಲ್ಲಾ ಒಡೆಯನೋ [ಇವ]ಯೆಮ್ಮೊಡನೆ ಪೊಡವಿಗೆ ಜೀವಂಗಳಿಗೆ ಒಡೆಯನೆಂಬಿರಿ ಪರಲೋಕದಾನಂದಕ್ಕೆ ಒಡೆಯನೇ ನಿಮಗೆನ್ನ ಕಂದ ಮುದ್ದು ಭಾಗ್ಯದ ಬೆಳಸು ಮಡಗಿ ತೊಟ್ಟಿಲೊಳಚ್ಯುತನನಂತನಂ ಮುಕುಂದನ 2 ನೋಡಲಿಹೆವೆಂತು ಲಾವಣ್ಯಸಿಂಧುವನೊಲಿದು ಸರವೆತ್ತಿ ನಾಡ ಹೆಂಗಳ ದೃಷ್ಟಿದೋಷದಿಂ ಪಾಲ್ಗುಡಿದು ನಲವಿಂದ ಲಾಡಲೊಲ್ಲನು ವಸುಂಧರೆಯ ತೊಟ್ಟಿಲಶಿಶುಗಳಂದದಿ ಮೊಲೆಯ ನೂಡಿದರೆ ಬಾಯ್ದೆರೆಯಲೊಲ್ಲ ಮಂತ್ರದಿಯಂತ್ರದಿಂದೊಮ್ಮೆ ಯೂಡಿ ಮಲಗಿಸಿದೆ ವಿಶ್ವನಂ ತ್ರೈಜಗಪ್ರಾಜ್ಞಮೂರುತಿಯಂ3 ರವಿಯಹುದು ಬಿಸಿಗದಿರದೆಲ್ಲಿ ಚಂದಿರನಹುದು ಹಿಮವೆಲ್ಲಿ ನವದೆಲ್ಲಿ ಇಂದುಧರನಹುದು ಫಣೆಗಣ್ಣೆಲ್ಲಿಯೆಂದು ಬರಿದೇಕೆ ಮರುಳಾಗುವಿರಿ ಅವಿರಳನದ್ವಯನನಾದಿಮಧ್ಯಾಂತರಹಿತನ ಧರ್ಮಸ್ಥಾಪನಾಚಾರ್ಯ ನ[ವಂ] ಮಹೀಭಾರವ ತವಿಸಲೆಂದವÀತರಿಸೆ ಜನನವಂ ಪಡೆದ ತಂದೆಯಂ ಭುವನಪಾವನ ಸುಪ್ರಗಧಾಮೂರ್ತಿಯಂ ಶ್ರವಣಮಂಗಳಸತ್ಕೀರ್ತಿಯಂ4 ನಿಗಮವೀ ಹರಿಯ ಮಹಿಮಾ ಸಮುದ್ರದ ತಡಿಯ ತೆರೆಗಳಲಿ ಮಿಗೆ ಸಿಲುಕಿ ಮುಳುಗಲರಿಯದೆ ಬೀಳುತೇಳುತಾಳುತಲಿವೇಕೋ ಮೊಗನಾಲ್ಕನಯ್ಯನ ಸಾಸಿರದೈವವಂ ಪಡೆದ ತಂದೆಯಂಅದೆಂತಲೆಂದಾರರಿವರೂ ಸುಗುಣ ಸರ್ವಜ್ಞನಂ ಸರ್ವಭೂತರಾತ್ಮಕನಂ ಜಗದೊಳ್ ಹೊರಗೆ ಪೂರ್ಣನಾಗಿ ಭುವನವ ಜಠರದೊಳಗಿಟ್ಟ ಅಗಣಿತನ ವೈಕುಂಠ ಪತಿಯ ಘನತೆಯನರಿತು ಪೊಗಳುವರೇ ಮುಗುದೆಯರು ನೀವೆತ್ತ ಮಾಯೆಯ ಕುಣಿಸಿ ನಗುವ ಹರಿಯೆತ್ತಾ 5
--------------
ಬೇಲೂರು ವೈಕುಂಠದಾಸರು